ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾಯ್ತು ಬಿಹಾರ ಫಲಿತಾಂಶದ ಟ್ರೆಂಡ್: ಆರ್‌ಜೆಡಿಯಲ್ಲಿ ಚಿಗುರಿದ ಕನಸು

|
Google Oneindia Kannada News

ನವದೆಹಲಿ, ನವೆಂಬರ್ 10: ಮತ ಎಣಿಕೆ ಆರಂಭವಾದ ಸಂದರ್ಭದಿಂದಲೂ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಎನ್‌ಡಿಎಗೆ, ಸಂಜೆ ವೇಳೆಗೆ ಹಿನ್ನಡೆಯಾಗಲು ಶುರುವಾಗಿದೆ. 122 ಮ್ಯಾಜಿಕ್ ಸಂಖ್ಯೆಗಿಂತಲೂ ಅಧಿಕ ಕ್ಷೇತ್ರಗಳಲ್ಲಿ ನಿಚ್ಚಳ ಮುನ್ನಡೆಯನ್ನು ಎನ್‌ಡಿಎ ಕಾಯ್ದುಕೊಂಡಿತ್ತು. ಇದೇ ರೀತಿಯಲ್ಲಿ ಸಾಗಿದರೆ ಮಹಾಘಟಬಂಧನ ಎರಡನೆಯ ಸ್ಥಾನಕ್ಕೆ ಬರಲಿದೆ ಎನ್ನಲಾಗುತ್ತಿತ್ತು. ಆದರೆ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಸೂರ್ಯಮುಳುಗಿದ ಬಳಿಕ ಮತ್ತಷ್ಟು ಕಾವೇರಿದೆ.

Recommended Video

Bihar Election Results 2020 : Modiಯ ಗೆಲುವು ಮೋಸದ ಗೆಲುವು!! | EVM Hack | Oneindia Kannada

100-110 ಕ್ಷೇತ್ರಗಳಲ್ಲಿಯೇ ತನ್ನ ಮುನ್ನಡೆಯನ್ನು ಇರಿಸಿಕೊಂಡಿದ್ದ ಮಹಾಘಟಬಂಧನ ಮತ್ತೆ ಚಿಗುರಿದ ಸೂಚನೆ ನೀಡಿದೆ. ತನ್ನ ಮುನ್ನಡೆ ಅಂತರವನ್ನು ಅದು ಹೆಚ್ಚಿಸಿಕೊಳ್ಳುತ್ತಿದೆ. ಸಂಜೆ ಏಳು ಗಂಟೆಯವರೆಗಿನ ಮತ ಎಣಿಕೆ ಲೆಕ್ಕಾಚಾರದಲ್ಲಿ ಅದು ಸುಮಾರು 115-116 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಇನ್ನೊಂದೆಡೆ ಎನ್‌ಡಿಎ ಮೈತ್ರಿಕೂಟ ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆಯ ಆಘಾತ ಅನುಭವಿಸಿದೆ. ಹೀಗಾಗಿ ಎನ್‌ಡಿಎ ಬಲವು 118-120ಕ್ಕೆ ಇಳಿದಿದೆ.

25 ಸುತ್ತುಗಳ ಮತ ಎಣಿಕೆಕೆ ಮುಗಿದ ಬಳಿಕ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದ್ದ ಐದು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಎನ್‌ಡಿಎ ಭಾಗವಾಗಿರುವ ಜೆಡಿಯು ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸಿದೆ.

Bihar Election Results 2020: Trend Changes As Mahagathbandhan Closes To NDA

ಎನ್‌ಡಿಎ 9 ಕ್ಷೇತ್ರಗಳಲ್ಲಿ 1,000 ಮತಗಳಿಗಿಂತ ಕಡಿಮೆ ಮುನ್ನಡೆ ಪಡೆದಿದ್ದರೆ, ಮಹಾಮೈತ್ರಿಕೂಟವು 11 ಕ್ಷೇತ್ರಗಳಲ್ಲಿ 1,000ಕ್ಕೂ ಕಡಿಮೆ ಮತಗಳಿಂದ ಮುನ್ನಡೆ ಪಡೆದುಕೊಂಡಿದೆ. ಈ ಕ್ಷೇತ್ರಗಳಲ್ಲಿ ಯಾವುದೇ ಕ್ಷಣದಲ್ಲಿ ಫಲಿತಾಂಶ ಬದಲಾಗಬಹುದು.

ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. 56 ಕ್ಷೇತ್ರಗಳಲ್ಲಿ ಅದು ಜಯಗಳಿಸಿದ್ದು, 22ರಲ್ಲಿ ಮುನ್ನಡೆ ಸಾಧಿಸಿದೆ.

English summary
Bihar Assembly Election Results 2020 Updates in Kannada: Trend in result has changed after evening as Mahagathbandhan leading seats came close to NDA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X