Get Updates
Get notified of breaking news, exclusive insights, and must-see stories!

ತೇಜಸ್ವಿಗೆ ಬಲ ತಂದ ಎಡಪಕ್ಷಗಳು, 20ಕ್ಷೇತ್ರಗಳಲ್ಲಿ ಮುನ್ನಡೆ

ಪಾಟ್ನಾ, ನ. 10: ಬಿಹಾರ ಚುನಾವಣೆಯ ಮತ ಎಣಿಕೆ ಟ್ರೆಂಡ್ ನಲ್ಲಿ ಮೊದಲ ಹಂತದಲ್ಲಿ ಆರ್ ಜೆ ಡಿ ನೇತೃತ್ವದ ಮಹಾಘಟಬಂಧನ್ ಮುನ್ನಡೆ ಪಡೆದುಕೊಂಡಿತ್ತು. ಆದರೆ, ನಂತರ ಎನ್ಡಿಎ ಮುನ್ನಡೆ ಗಳಿಸಿದೆ. ಆದರೆ, ತೇಜಸ್ವಿ ಬಣಕ್ಕೆ ಎಡಪಕ್ಷಗಳು ಬಲ ತುಂಬಿದ್ದು, ಸುಮಾರು 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

2020ರಲ್ಲಿ ಎಡಪಕ್ಷಗಳು 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಈ ಪೈಕಿ ಸಿಪಿಐ (ಎಂಎಲ್) 19 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಸಿಪಿಐ 6 ಮತ್ತು ಸಿಪಿಎಂ 4 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Bihar election results 2020: Left parties leading in 20 seats, big role in MGB

ಸದ್ಯದ ಟ್ರೆಂಡ್ ನಂತೆ(ಸಮಯ 2.15)

ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಿಪಿಐ, ಸಿಪಿಐ(ಎಂ),ಸಿಪಿಐ (ಎಂಎಲ್) ಪಕ್ಷಗಳಿವೆ.

ಅಜಿಯಾಂವ್, ಅರಾಹ್, ಅರ್ವಾಲ್, ಬಲರಾಂಪುರ್, ಬಿಭೂತಿಪುರ್, ದರೌಲಿ, ದರೌಂದಾ, ದಮರಾಂನ್, ಘೋಸಿ ,ಕರಾಕಟ್, ಮಾಂಝಿ, ಮತಿಹನಿ, ಪಾಲಿಗಂಜ್, ತರಾರಿ, ವಾರಿಸ್‌ನಗರ್, ಜಿರಾದಾಯಿ, ಬಚ್ವಾರಾ ಮತ್ತು ಬಾಖ್ರಿ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.

ಎಡಪಕ್ಷಗಳ ಭರ್ಜರಿ ಪ್ರದರ್ಶನ
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಮಂಕಾಗಿದ್ದ ಪ್ರಮುಖ ಪಕ್ಷಗಳಾ ಸಿಪಿಐ, ಸಿಪಿಐಎಂ ಮುಂತಾದ ಎಡಪಕ್ಷಗಳು ಈ ಬಾರಿ ಉತ್ತಮ ಫಲಿತಾಂಶ ನೀಡುವ ಸುಳಿವು ನೀಡಿವೆ. 2010ರಲ್ಲಿ ಸಿಪಿಐ ಒಂದು ಸ್ಥಾನ, 2015ರ ಚುನಾವಣೆಯಲ್ಲಿ ಸಿಪಿಐ(ಎಂಎಲ್ ) 3 ಸೀಟುಗಳನ್ನು ಗಳಿಸಿತ್ತು.

ಇಂಡಿಯಾ ಟುಡೇ ಮೈ ಆಕ್ಸಿಸ್ ಎಕ್ಸಿಟ್ ಪೋಲ್ ನಂತೆ ಸಿಪಿಐಎಂಎಲ್ 12 ರಿಂದ 16 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಲಾಗಿದೆ. ಸದ್ಯ ಎನ್ಡಿಎ 122 ಮ್ಯಾಜಿಕ್ ನಂಬರ್ ದಾಟಿ ಮುನ್ನಡೆಯುತ್ತಿದ್ದು, ಮಹಾಘಟ್‌ಬಂಧನ್‌ ರೇಸ್ ನಲ್ಲಿ ಹಿಂದೆ ಉಳಿಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+