ಬಿಹಾರ ಸೋಲು: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ ಭುಗಿಲು

ಪಾಟ್ನಾ, ನವೆಂಬರ್ 13: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕುರಿತು ಚರ್ಚಿಸಲು ಕಾಂಗ್ರೆಸ್ ಶುಕ್ರವಾರ ಪಾಟ್ನಾದ ಪಕ್ಷದ ರಾಜ್ಯ ಕೇಂದ್ರ ಕಚೇರಿಯ ಸದ್ಭಾವನಾ ಭವನದಲ್ಲಿ ತನ್ನ ನಾಯಕರ ಶಾಸಕಾಂಗ ಸಭೆ ಕರೆದಿತ್ತು.

ಕಾಂಗ್ರೆಸ್ ಬಿಹಾರ ಘಟಕದ ಮುಖ್ಯಸ್ಥ ಮದನ್ ಮೋಹನ್ ಝಾ ಮತ್ತು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಭಾಗವಹಿಸಿದ್ದ ಸಭೆಯು ವಾಗ್ವಾದಕ್ಕೆ ಸಾಕ್ಷಿಯಾಯಿತು.

ಬಿಹಾರದಲ್ಲಿ ಕಾಂಗ್ರೆಸ್ ಶಾಸಕ ಪಕ್ಷದ ನಾಯಕ ಯಾರು ಎಂಬ ಚರ್ಚೆಯ ವೇಳೆ ಮಹಾರಾಜ್ ಗಂಜ್ ಶಾಸಕ ವಿಜಯ್ ಶಂಕರ್ ದುಬೆ ಮತ್ತು ಶಾಸಕ ವಿಕ್ರಮ್ ಸಿದ್ಧಾರ್ಥ್ ನಡುವೆ ಜಗಳವಾಗಿದೆ.

 Bihar Election Defeat: Congress Dissenting In Legislative Meeting

ಶಾಸಕ ಸಿದ್ಧಾರ್ಥ್ ಅವರ ಬೆಂಬಲಿಗರು ವಿಜಯ್ ಶಂಕರ್ ದುಬೆ ಅವರನ್ನು "ಕಳ್ಳ' ಎಂದು ಕರೆದಿದ್ದಾರೆ, ಇದು ಮಹಾರಾಜ್ ಗಂಜ್ ಶಾಸಕರ ಬೆಂಬಲಿಗರಿಗೆ ಕೋಪವನ್ನುಂಟು ಮಾಡಿದೆ. ಇಬ್ಬರು ಶಾಸಕರ ಬೆಂಬಲಿಗರ ನಡುವೆ ನಿಂದನೀಯ ಮಾತುಗಳು ಕೇಳಿಬರಲು ಕಾರಣವಾಯಿತು ಮತ್ತು ಇದೇ ವೇಳೆ ಕೈ-ಕೈ ಮೀಲಾಯಿಸುವ ಸನ್ನಿವೇಶ ಸೃಷ್ಠಿಯಾಯಿತು.

ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ನಲ್ಲಿ ಕಾಂಗ್ರೆಸ್ 70 ಸ್ಥಾನಗಳಿಗೆ ಸ್ಪರ್ಧಿಸಿತ್ತು. ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮುಖ್ಯಮಂತ್ರಿಯನ್ನಾಗಿ ಬಿಂಬಿಸಿತ್ತು. ಆರ್‌ಜೆಡಿ ಪಕ್ಷವು ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್ ಸ್ಪರ್ಧಿಸಿದ 70 ಸ್ಥಾನಗಳಲ್ಲಿ ಕೇವಲ 19 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕಾಂಗ್ರೆಸ್ ಪಕ್ಷದ ನಾಯಕರು ಬಿಹಾರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯನ್ನು ಈ ತರಹದ ಅಸಹ್ಯ ಚುನಾವಣಾ ಪ್ರದರ್ಶನಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಇನ್ನೂ 10-15 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದರೆ, ಮಹಾಘಟಬಂಧನ್ 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ 122 ಸಂಖ್ಯೆಯನ್ನು ಸುಲಭವಾಗಿ ದಾಟಬಹುದಿತ್ತು ಎಂದು ಕೆಲವರು ಹೇಳಿದರು.

ಚುನಾವಣಾ ಆಯೋಗದ ಪ್ರಕಾರ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಮತಗಳ ಶೇ.9.5 ರಷ್ಟು ಕಾಂಗ್ರೆಸ್ ಗಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+