Love Story: ಹೆಂಡತಿ ಬಗ್ಗೆ ತೇಜಸ್ವಿ ಯಾದವ್ ಹೇಳಿದ ಮಾತುಗಳೇ ವೈರಲ್!

ಪಾಟ್ನಾ, ಆಗಸ್ಟ್ 12: ಭಾರತದಲ್ಲಿ ಇತ್ತೀಚಿಗೆ ಬಿಹಾರ ಅತಿಹೆಚ್ಚು ಸುದ್ದಿ ಆಗುತ್ತಿದೆ. ಕಳೆದೊಂದು ವಾರದಿಂದ ರಾಜಕೀಯಕ್ಕಾಗಿ ಸದ್ದು ಮಾಡಿದ ಬಿಹಾರದಲ್ಲಿ ಈಗ ಲವ್ ಸ್ಟೋರಿ ಸುದ್ದಿ ಮಾಡುತ್ತಿದೆ.

ಲವ್ ಸ್ಟೋರಿ ಸುದ್ದಿಯಲ್ಲಿ ಅಂಥದ್ದೇನು ವಿಶೇಷ ಎಂದು ಅನಿಸಬಹುದು. ಆದರೆ ಇದು ಸಾಮಾನ್ಯರಲ್ಲಿ ಸಾಮಾನ್ಯರ ಕಥೆಯಲ್ಲ, ಬದಲಿಗೆ ಇತ್ತೀಚಿಗಷ್ಟೇ ರಾಜ್ಯದ ಉಪ ಮುಖ್ಯಮಂತ್ರಿ ಆಗಿರುವ ತೇಜಸ್ವಿ ಯಾದವ್ ಪ್ರೇಮ ಕಥೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಸಂದರ್ಶನ ನೀಡಿದ ತೇಜಸ್ವಿ ಯಾದವ್, ತಮ್ಮ ಪತ್ನಿ ರಚೆಲ್ ಗೋಡಿನ್ಹೋ ಬಗ್ಗೆ ನೀಡಿರುವ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ. ಡಿಸಿಎಂ ಲವ್ ಸ್ಟೋರಿ ಹೇಗಿತ್ತು?, ತೇಜಸ್ವಿ ಯಾದವ್ ಪ್ರೀತಿಗೆ ಲಾಲೂ ಪ್ರಸಾದ್ ಯಾದವ್ ಕೊಟ್ಟ ಗ್ರೀನ್ ಸಿಗ್ನಲ್ ಹೇಗಿತ್ತು? ಅಸಲಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆ ಹೇಳಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಲಾಲೂ ಬಳಿ ಪ್ರೇಮಕಥೆ ಹೇಳಿದ್ದ ತೇಜಸ್ವಿ ಯಾದವ್

ಲಾಲೂ ಬಳಿ ಪ್ರೇಮಕಥೆ ಹೇಳಿದ್ದ ತೇಜಸ್ವಿ ಯಾದವ್

"ನಾನು ನನ್ನ ತಂದೆಯ ಬಳಿ ಪ್ರೀತಿಯ ಬಗ್ಗೆ ಹೇಳಿದೆ. "ನಾನು ಒಂದು ಹುಡುಗಿಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದೇನೆ. ಅವಳನ್ನು ಮದುವೆಯಾಗಲು ಇಷ್ಟಪಡುತ್ತೇನೆ. ಆದರೆ ಅವಳು ಕ್ರಿಶ್ಚಿಯನ್' ಎಂದು ಹೇಳಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ತಂದೆ ಲಾಲೂ ಪ್ರಸಾದ್ ಯಾದವ್, ಅದೆಲ್ಲಾ ಪರ್ವಾಗಿಲ್ಲ, ಯಾವುದೇ ಸಮಸ್ಯೆಯಿಲ್ಲ ಎಂದಿದ್ದರು ಎಂದು ತೇಜಸ್ವಿ ಯಾದವ್ ಹೇಳಿಕೊಂಡಿದ್ದಾರೆ.

ಹರಿಯಾಣ ಮೂಲದ ರಚೆಲ್ ಗೋಡಿನ್ಹೋ ದೆಹಲಿಗೆ ಶಿಫ್ಟ್

ಹರಿಯಾಣ ಮೂಲದ ರಚೆಲ್ ಗೋಡಿನ್ಹೋ ದೆಹಲಿಗೆ ಶಿಫ್ಟ್

ಮೂಲತಃ ಹರಿಯಾಣ ಮೂಲದವರೇ ಆಗಿದ್ದ ರಚೆಲ್ ಗೋಡಿನ್ಹೋ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬ ಸಮೇತರಾಗಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಅವರು ದೆಹಲಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿಯೇ ತೇಜಸ್ವಿ ಯಾದವ್‌ ಹಾಗೂ ರಚೆಲ್ ಗೋಡಿನ್ಹೋ ನಡುವೆ ಪರಿಚಯವಾಗಿತ್ತು.

ರಚೆಲ್ ಗೋಡಿನ್ಹೋ ತಂದೆ ಪ್ರಾಂಶುಪಾಲರು

ರಚೆಲ್ ಗೋಡಿನ್ಹೋ ತಂದೆ ಪ್ರಾಂಶುಪಾಲರು

ತೇಜಸ್ವಿ ಯಾದವ್ ಪತ್ನಿ ರಚೆಲ್ ಗೋಡಿನ್ಹೋ ತಂದೆ ದೆಹಲಿಯಲ್ಲಿ ಶಾಲೆಯ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಒಂದು ವರದಿಗಳ ಪ್ರಕಾರ, ರಚೆಲ್ ನಾಗರಿಕ ವಿಮಾನಯಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸರಳ ರೀತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ದಂಪತಿ

ಸರಳ ರೀತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ದಂಪತಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾಲೂ ಪ್ರಸಾದ್ ಯಾದವ್ ಕಿರಿಯ ಪುತ್ರ ತೇಜಸ್ವಿ ಯಾದವ್ ಗೊಡಿನ್ಹೋ ಅವರನ್ನು ಸರಳವಾಗಿ ವಿವಾಹವಾದರು. ಮದುವೆಯ ನಂತರ ರಾಚೆಲ್ ಗೊಡಿನ್ಹೋ ತನ್ನ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡರು. ಯಾದವ್ ಪತ್ನಿ ತಮ್ಮ ಮದುವೆಯ ನಂತರವೂ ತಮ್ಮ ಸರಳತೆಯನ್ನು ಮುಂದುವರಿಸಿದ್ದಾರೆ. ಬುಧವಾರ ತನ್ನ ಪತಿ ತೇಜಸ್ವಿ ಯಾದವ್ ಪ್ರಮಾಣ ವಚನದ ನಂತರ ಹೇಳಿಕೆ ನೀಡಿ "ಎಲ್ಲರಿಗೂ ಧನ್ಯವಾದ" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+