Video: ಭಾರತದ ರಾಷ್ಟ್ರಧ್ವಜ ಹಿಡಿದವನಿಗೆ ಹಿಂಗ್ ಹೊಡೆಯೋದಾ!?
ಪಾಟ್ನಾ, ಆಗಸ್ಟ್ 22: ರಾಷ್ಟ್ರಧ್ವಜವನ್ನು ಅಡ್ಡಿಯಾಗಿ ಹಿಡಿದ ವ್ಯಕ್ತಿಯನ್ನು ನೆಲಕ್ಕೆ ಹಾಕಿ ಎಳೆದಾಡಿದ್ದೂ ಅಲ್ಲದೇ ಅಧಿಕಾರಿಯೊಬ್ಬರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ವರದಿಯಾಗಿದೆ. ಈ ಘಟನೆಯನ್ನು ಸಾಕ್ಷೀಕರಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬವನ್ನು ವಿರೋಧಿಸಿ ಪಾಟ್ನಾದಲ್ಲಿ ನೂರಾರು ಉದ್ಯೋಗ ಆಕಾಂಕ್ಷಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರನ್ನು ಚದುರಿಸುವುದಕ್ಕೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.
ಇದರ ಮಧ್ಯೆ ರಾಷ್ಟ್ರಧ್ವಜನವನ್ನು ಹಿಡಿದ ಪ್ರತಿಭಟನಾಕಾರನನ್ನು ಪಾಟ್ನಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಕೆಕೆ ಸಿಂಗ್ ಹಿಗ್ಗಾಮುಗ್ಗ ಥಳಿಸಿದ್ದಾರೆ. ನೆಲಕ್ಕೆ ಬಿದ್ದ ಪ್ರತಿಭಟನಾಕಾರನ ಮೇಲೆ ಕ್ರೌರ್ಯ ಪ್ರದರ್ಶಿಸಿದ್ದಾರೆ.

ಪ್ರತಿಭಟನಾಕಾರನನ್ನು ಎಳೆದುಕೊಂಡು ಹೋದ ಪೊಲೀಸರು:
ಪಾಟ್ನಾದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಮೊದಲು ಲಾಠಿಚಾರ್ಜ್ ನಡೆಸಿದ್ದು, ನಂತರ ಜಲಫಿರಂಗಿ ಪ್ರಯೋಗಿಸಿದರು. ತದನಂತರ ಪ್ರತಿಭಟನಾಕಾರನನ್ನು ಪೊಲೀಸರು ಹಾಗೂ ಅಧಿಕಾರಿಗಳು ಎಳೆದುಕೊಂಡು ಹೋದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ತನಿಖೆಗೆ ಸಮಿತಿ:
ಉದ್ಯೋಗ ಆಕಾಂಕ್ಷಿ ಮೇಲೆ ಹಲ್ಲೆ ನಡೆಸಿದ ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆಕೆ ಸಿಂಗ್ ವಿರುಗ್ಧ ತನಿಖಾ ಸಮಿತಿಗೆ ಆದೇಶಿಸಲಾಗಿದೆ. ಈ ಘಟನೆ ಬಗ್ಗೆ ಅಧಿಕಾರಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಡಿಸಿಎಂ:
ಪಾಟ್ನಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
माननीय उपमुख्यमंत्री जी ने पटना जिलाधिकारी से फोन पर वार्ता की। DM ने पटना Central SP और DDC के नेतृत्व में एक जाँच कमेटी का गठन किया है कि ADM ने अभ्यर्थियों पर स्वयं लाठीचार्ज क्यों किया, ऐसी क्या नौबत थी?दोषी पाए जाने पर संबंधित अधिकारी पर कारवाई होगी।
— Office of Tejashwi Yadav (@TejashwiOffice) August 22, 2022
pic.twitter.com/XKLKhxBFQ4












Click it and Unblock the Notifications