ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿ ಮಲಗಿದ್ದ ಮಗು ಅಪಹರಣ, ಅತ್ಯಾಚಾರ, ಕೊಲೆ
ಜಮ್‌ಶೇಡ್‌ಪುರ್, ಆಗಸ್ಟ್ 1: ತಾಯಿಯ ತೋಳಲ್ಲಿ ಬೆಚ್ಚನೆ ಅಪ್ಪುಗೆಯಲ್ಲಿ ಮಲಗಿದ್ದ ಮೂರು ವರ್ಷದ ಕಂದಮ್ಮನನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡದ ಜಮ್‌ಶೇಡ್‌ಪುರದಲ್ಲಿ ನಡೆದಿದೆ.
ಪ್ರಪಂಚವನ್ನೇ ಸರಿಯಾಗಿ ನೋಡದ ಪುಟ್ಟ ಕಂದನನ್ನು ತಾಯಿಯಿಂದ ಬೇರ್ಪಡಿಸಿ, ಇಬ್ಬರು ಹತ್ತರಿದ ಸಬ್ಬಂದಿ ಸೇರಿ ಮೂವರು ಮಗುವನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡಿದ್ದಾರೆ.
ಪೊಲೀಸರು ಮೂವರನ್ನು ಬಂಧಿಸಿದ್ದು ಅದರಲ್ಲಿ ಒಬ್ಬಾತ 2015ರಲ್ಲಿ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪದ ಮೇಲೆ ಜೈಲಿನಲ್ಲಿದ್ದು ಆಗ ತಾನೆ ಬಿಡುಗಡೆ ಹೊಂದಿದ್ದ.

ರೈಲ್ವೆ ನಿಲ್ದಾಣದಲ್ಲಿ ತಾಯಿ ಜೊತೆ ಮಲಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗಳು ಬೆಳಗ್ಗೆ ಏಳುವಷ್ಟರಲ್ಲಿ ಕಾಣೆಯಾಗಿದ್ದಳು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಳು. ಸಿಸಿಟಿವಿ ಫೂಟೇಜ್ ಅತ್ಯಾಚಾರಿಗಳನ್ನು ಹಿಡಿಯಲು ನೆರವಾಯಿತು. ರೈಲ್ವೆ ನಿಲ್ದಾಣಿದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಸ್ಲಂ ಒಂದರಲ್ಲಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು.
ಮಗುವನ್ನು ಅಪಹರಿಸಿ, ಕೊಲೆ ಮಾಡಿದ್ದು ತಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬೀದಿ ನಾಯಿಗಳು ಮಗುವಿನ ತಲೆಯನ್ನು ಕಚ್ಚಿ ತಿಂದಿದ್ದವು.












Click it and Unblock the Notifications