ರಾಹುಲ್ ಗಾಂಧಿಗೆ ಒಳ್ಳೆಯ ಪಾಠ: ಪರಿಕ್ಕರ್ ಮಗ ವಾಗ್ದಾಳಿ
ಪಣಜಿ, ನವೆಂಬರ್ 15: ರಫೇಲ್ ಯುದ್ಧ ವಿಮಾನದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಗುರುವಾರ ಪ್ರಕಟಿಸಿದ ತೀರ್ಪು ರಾಹುಲ್ ಗಾಂಧಿ ಅವರಿಗೆ ಒಳ್ಳೆಯ ಪಾಠ ಎಂದು ಗೋವಾದ ಮಾಜಿ ಮುಖ್ಯಮಂತ್ರಿ, ದಿ. ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ ಪರಿಕ್ಕರ್ ಹೇಳಿದ್ದಾರೆ.
ರಫೇಲ್ ಯುದ್ಧ ವಿಮಾನದ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಹುಲ್ ಗಾಂಧಿ ಮತ್ತು ವಿರೋಧಪಕ್ಷದ ಇತರರು ಆರೋಪಿಸಿದ್ದರು. ಈ ಕುರಿತಾದ ಮರುಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ಪಲ್ ಪರಿಕ್ಕರ್ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
'ರಫೇಲ್ ತೀರ್ಪು ಹೊರಬಿದ್ದಿದೆ. ಇದು ರಾಹುಲ್ ಗಾಂಧಿ ಅವರಿಗೆ ಉತ್ತಮ ಕಲಿಕೆಯ ಅನುಭವ ಎಂದು ನಾನು ಭಾವಿಸುತ್ತೇನೆ. ಈ ವಿಚಾರದಲ್ಲಿ ಅವರು ಎಲ್ಲ ರೀತಿಯ ಕೆಟ್ಟ ರಾಜಕೀಯ ಆಟವನ್ನು ಆಡಿದ್ದರು. ಅದೇ ರೀತಿ ರಾಜಕೀಯಕ್ಕಾಗಿಯೇ ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಬಂದಿದ್ದ ಭೇಟಿಯನ್ನು ಬಳಸಿಕೊಂಡಿದ್ದರು' ಎಂದು ಉತ್ಪಲ್ ಆರೋಪಿಸಿದ್ದಾರೆ.

'ಇಂಗ್ಲೆಂಡ್ ಮೂಲದ ಆಫ್‌ಸೆಟ್ ಗುತ್ತಿಗೆದಾರರೊಬ್ಬರೊಂದಿಗೆ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದರು. ದೋಕ್ಲಾಂ ಬಿಕ್ಕಟ್ಟಿನ ವೇಳೆ ಎದುರಾಳಿ ದೇಶದ (ಚೀನಾ) ರಾಯಭಾರಿಯನ್ನು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಇವುಗಳನ್ನು ನಂಬುವುದಾದರೆ ಇಲ್ಲಿ ಕೈಗಾರಿಕಾ ಬೇಹುಗಾರಿಕೆ ನಡೆಸಿದ್ದ ವರದಿಗಳು ಪ್ರಕಟವಾಗಿದ್ದವು. ದೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಕಡು ವಿರೋಧಿ ದೇಶದೊಂದಿಗೆ ನಡೆದಿದೆ ಎಂಬ ಅನುಮಾನ ಮೂಡುತ್ತದೆ. ಆದರೆ ಯಾವುದೇ ಪುರಾವೆಗಳು ಇಲ್ಲದ ಸಂಶಯದ ಲಾಭವನ್ನು ಅವರಿಗೆ ಬಿಟ್ಟುಬಿಡುತ್ತೇನೆ. ಇವುಗಳಿಂದ ಅವರು ಪಾಠ ಕಲಿತಿರಬಹುದು ಎಂದು ನಂಬುತ್ತೇನೆ' ಎಂಬುದಾಗಿ ಉತ್ಪಲ್ ಹೇಳಿದ್ದಾರೆ.












Click it and Unblock the Notifications