ವಿಶ್ರಾಂತಿಗಾಗಿ ಪಣಜಿಗೆ ಆಗಮಿಸಿದ ಸೋನಿಯಾ ಗಾಂಧಿ

ಪಣಜಿ, ನವೆಂಬರ್ 20 : ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಗೋವಾದ ಪಣಜಿಗೆ ವಿಶ್ರಾಂತಿಗಾಗಿ ಆಗಮಿಸಿದರು. ದೆಹಲಿಯಲ್ಲಿ ವಾಯು ಮಾಲಿನ್ಯ ಅಧಿಕವಾಗಿದ್ದು, ಬೇರೆ ನಗರದಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು.

ಶುಕ್ರವಾರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಣಜಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಎದೆ ನೋವಿನಿಂದ ಬಳಲುತ್ತಿರುವ ಸೋನಿಯಾ ಗಾಂಧಿಗೆ ದೆಹಲಿ ಹವಾಮಾನ ಯೋಗ್ಯವಲ್ಲ ಎಂದು ವೈದ್ಯರು ಹೇಳಿದ್ದಾರೆ.

ಚಳಿಗಾಲ, ವಾಯು ಮಾಲಿನ್ಯದ ಕಾರಣ ದೆಹಲಿಯಿಂದ ಸೋನಿಯಾ ಗಾಂಧಿ ಅವರು ಗೋವಾಕ್ಕೆ ಆಗಮಿಸಿದ್ದಾರೆ. ಚೆನ್ನೈ ಅಥವ ಪಣಜಿಯಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

Sonia Gandhi To Take Rest In Panaji, Goa

ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ವಾಯು ಮಾಲಿನ್ಯದ ಕಾರಣ ಎದೆನೋವು, ಅಸ್ತಮಾ ಹೆಚ್ಚಾಗುವ ಕಾರಣ ಅವರು ಪಣಜಿಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಜುಲೈ 30ರಂದು ಸೋನಿಯಾ ಗಾಂಧಿ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್‌ನಲ್ಲಿ ಅವರು ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಸಹ ತೆರಳಿದ್ದರು. ರಾಹುಲ್ ಗಾಂಧಿ ಆಗಲೂ ಜೊತೆಯಲ್ಲಿದ್ದರು.

2019ರ ಜನವರಿಯಲ್ಲಿಯೂ ಸೋನಿಯಾ ಗಾಂಧಿ ಗೋವಾಕ್ಕೆ ಆಗಮಿಸಿ ಕೆಲವು ಕಾಲ ವಿಶ್ರಾಂತಿ ಪಡೆದಿದ್ದರು. ಆಗ ಅವರು ಗೋವಾದಲ್ಲಿ ಸೈಕಲ್ ಓಡಿಸಿದ ಚಿತ್ರಗಳು ವೈರಲ್ ಆಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+