ಗೋವಾ: ನೌಕಾಪಡೆಯ ಮಿಗ್-29 ವಿಮಾನ ಪತನ
ಪಣಜಿ, ಫೆಬ್ರವರಿ 23 : ಭಾರತೀಯ ನೌಕಾಪಡೆಗೆ ಸೇರಿದ ಮಿಗ್ -29ಕೆ ವಿಮಾನ ಗೋವಾದಲ್ಲಿ ಪತನಗೊಂಡಿದೆ. ವಿಮಾನದ ಪೈಲೆಟ್ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ಹೇಳಿದೆ.
ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಪ್ರತಿನಿತ್ಯದ ತಾಲೀಮಿನಲ್ಲಿ ತೊಡಗಿದ್ದಾಗ ವಿಮಾನ ಪತನಗೊಂಡಿದೆ ಎಂದು ನೌಪಾಪಡೆಯ ಪ್ರಕಟಣೆ ಹೇಳಿದೆ. ವಿಮಾನ ಪತನಕ್ಕೆ ಕಾರಣವೇನು? ಎಂದು ತನಿಖೆ ಕೈಗೊಳ್ಳಲಾಗಿದೆ.

ಮಿಗ್ -29ಕೆ ವಿಮಾನ ಪತನಗೊಂಡ ಬಳಿಕ ಪೈಲೆಟ್ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆ ಹೇಳಿದೆ. ಇದು ಮೊದಲ ಬಾರಿಯಲ್ಲ ಹಲವು ಬಾರಿ ಮಿಗ್- 29ಕೆ ವಿಮಾನ ಪತನಗೊಂಡ ಪ್ರಕರಣಗಳು ನಡೆದಿವೆ.
2019ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಮಿಗ್-29 ಕೆ ವಿಮಾನ ಗೋವಾದಲ್ಲಿ ಅಪಘಾತಕ್ಕೀಡಾಗಿತ್ತು. ತರಬೇತಿಗಾಗಿ ಬಳಸುತ್ತಿದ್ದಾಗ ಈ ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳಿದ್ದರು.
ಭಾರತೀಯ ನೌಕಾಪಡೆಯೇ ನೀಡಿದ್ದ ಮಾಹಿತಿಯಂತೆ 2015ರಿಂದ 2019ರ ತನಕ 41 ವಾಯುಪಡೆಯ ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2019ರ ಫೆಬ್ರವರಿ 20ರಂದು ಸೂರ್ಯ ಕಿರಣ್ ವಿಮಾನ ಪತನಗೊಂಡು ಒಬ್ಬ ಪೈಲೆಟ್ ಮೃತಪಟ್ಟಿದ್ದರು.
2015-16ರಲ್ಲಿ 6, 2016-17ರಲ್ಲಿ 10, 2017-18ರಲ್ಲಿ 6, 2018-19ರಲ್ಲಿ 8 ವಿಮಾನ ಅಪಘಾತ ಪ್ರಕರಣಗಳು ನಡೆದಿವೆ. 2016-17ರಲ್ಲಿ ಹೆಚ್ಚು ಎಂದರೆ 29 ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.












Click it and Unblock the Notifications