ಪರಿಕ್ಕರ್ ಚಿತ್ರ ವೈರಲ್ ಆಗಿದ್ದು ಪ್ರಚಾರದ ಆಸೆಗಲ್ಲ: ಬಿಜೆಪಿ

Recommended Video

      ಪ್ರಚಾರದ ಆಸೆಗೆ ಬಿತ್ತಂತೆ BJP..! | Oneindia Kannada

      ಪಣಜಿ, ಡಿಸೆಂಬರ್ 18: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟು ಸೇತುವೆಯೊಂದರ ವೀಕ್ಷಣೆ ಮಾಡುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

      ಆದರೆ ಇವೆಲ್ಲವೂ ಬಿಜೆಪಿಯ ಪಬ್ಲಿಸಿಟಿ ಸ್ಟಂಟ್ ಎಂದಿರುವ ಕಾಂಗ್ರೆಸ್ ಅನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

      ಕಳೆದೊಂದು ತಿಂಗಳಿನಿಂದಲೂ ಪರಿಕ್ಕರ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ರಾಜೀನಾಮೆ ನೀಡಬೇಕು. ಗೋವಾ ಮುಖುಮಂತ್ರಿ ಹುದ್ದೆಗೆ ಬೇರೊಬ್ಬರನ್ನು ನೇಮಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಕೆಲ ವಿರೋಧ ಪಕ್ಷಗಳು ದುಂಬಾಲು ಬಿದ್ದಿವೆ.

      Manohar Parrikars Bridge Inspection No Stunt: BJP

      ಆದರೆ ಅನಾರೋಗ್ಯ ಪೀಡಿತರಾಗಿದ್ದರೂ ಕರ್ತವ್ಯ ಪ್ರಜ್ಞೆ ಮರೆಯದೆ, ಮಾಂಡೋವಿ ನದಿಯ ಸೇತುವೆಯನ್ನು ಅಧಿಕಾರಿಗಳೊಂದಿಗೆ ಪರಿಕ್ಕರ್ ವೀಕ್ಷಿಸಿದ್ದಾರೆ.

      ಮನೋಹರ್ ಪರಿಕ್ಕರ್ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ. ಅವರಿಗೆ ಪ್ರಚಾರಕ್ಕೋಸ್ಕರ ಕರ್ತವ್ಯ ಪ್ರಜ್ಞೆಮೆರೆಯುವ ಅಗತ್ಯವಿಲ್ಲ. ಅಂಥ ಆಸೆ ಇದ್ದರೆ ಅದಕ್ಕಾಗಿ ಇಷ್ಟು ದಿನ ಕಾಯಬೇಕಿರಲಿಲ್ಲ ಎಂದು ಬಿಜೆಪಿ ಗೋವಾ ಘಟಕ ಸಮರ್ಥನೆ ನೀಡಿದೆ.

      ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಅನಾರೋಗ್ಯದ ಮೂಲಕ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರು ಮೊದಲು ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಕೆಲದಿನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದು ಅಕ್ಟೋಬರ್ 14 ರಂದು ಡಿಸ್ಚಾರ್ಜ್ ಆಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+