ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ!

Recommended Video

      ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ | Oneindia Kannada

      ಪಣಜಿ, ಆಗಸ್ಟ್ 01 : ಗೋವಾ ಸರ್ಕಾರ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದಿಂದ 2 ಬಾಟಲ್‌ಗಿಂತ ಹೆಚ್ಚಿನ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

      ಗೋವಾ ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ರಾಜ್ಯಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಣೆ ಮಾಡಲು ಮದ್ಯದ ಮೇಲೆ ಹೇರಿರುವ ಮಿತಿಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಗೋವಾದಿಂದ ಬರುವ ಪ್ರವಾಸಿಗರು 2 ಬಾಟಲ್ ಮದ್ಯವನ್ನು ಮಾತ್ರ ತರಬಹುದಾಗಿದೆ.

      ವಿಧಾನಸಭೆಯಲ್ಲಿ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್. "ಎರಡು ಬಾಟಲ್‌ಗಿಂತ ಹೆಚ್ಚಿನ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ. ಪ್ರಸ್ತುತ ಒಂದು ಬಾಟಲ್ ಐಎಂಎಫ್‌ಎಲ್, ಒಂದು ಬಾಟಲ್ ಲಿಕ್ಕರ್ ತೆಗೆದುಕೊಂಡು ಹೋಗಲು ಅನುಮತಿ ಇದೆ. ಹೆಚ್ಚಿನ ಬಾಟಲ್‌ಗೆ ಅನುಮತಿ ನೀಡಿದರೆ ನಮ್ಮ ಆದಾಯ ಹೆಚ್ಚಲಿದೆ" ಎಂದು ಹೇಳಿದರು.

      Goa To Allow Tourists To Carry More Liquor Bottles

      ಹೆಚ್ಚಿನ ಬಾಟಲ್‌ಗಳ ಮದ್ಯವನ್ನು ತೆಗೆದುಕೊಂಡು ಬಂದರೆ ಗೋವಾ ಗಟಿ ದಾಟುವ ಚೆಕ್ ಪೋಸ್ಟ್‌ನಲ್ಲಿ ಹಿಡಿಯಲಾಗುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯವನ್ನು ಗೋವಾದಿಂದ ತೆಗೆದುಕೊಂಡು ಹೋಗುತ್ತಾರೆ.

      ಗೋವಾ ಗಡಿ ಭಾಗದಲ್ಲಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಜನರು ಗೋವಾದಲ್ಲಿ ಉದ್ಯಮ ಹೊಂದಿದ್ದು ಪ್ರತಿದಿನ ಅಲ್ಲಿಗೆ ಭೇಟಿ ನೀಡುತ್ತಾರೆ. ವಾಪಸ್ ಬರುವಾಗ ಅವರು ಮದ್ಯವನ್ನು ತರುತ್ತಾರೆ. ಗೋವಾ ಸರ್ಕಾರದ ತೀರ್ಮಾನದಿಂದಾಗಿ ಅಕ್ಕ-ಪಕ್ಕದ ರಾಜ್ಯಗಳ ಅಬಕಾರಿ ಆದಾಯದ ಮೇಲೆ ಪರಿಣಾಮ ಬೀರುತ್ತದೆಯೇ? ಕಾದು ನೋಡಬೇಕು.

      ಗೋವಾದಲ್ಲಿ ತಯಾರು ಮಾಡಿದ ಇನ್ನೂ ಒಂದು ಬಾಟಲ್ ಲಿಕ್ಕರ್ ತೆಗೆದುಕೊಂಡು ಹೋಗಲು ಅನುಮತಿ ನೀಡಿದರೆ ಅಬಕಾರಿ ಇಲಾಖೆ ಆದಾಯ ಹೆಚ್ಚಲಿದೆ ಎಂಬುದು ಸರ್ಕಾರ ಚಿಂತನೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+