ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಗೋವಾದಲ್ಲೊಂದು ನಗ್ನ ಕೂಟ: ಪೋಸ್ಟರ್ ಹಂಚಿಕೆ

|
Google Oneindia Kannada News

ಗೋವಾ, ಸೆಪ್ಟೆಂಬರ್ 24: ಉತ್ತರ ಗೋವಾದಲ್ಲೊಂದು ನಗ್ನ ಕೂಟ ಏರ್ಪಡಿಸಿರುವ ಪೋಸ್ಟರ್ ಎಲ್ಲೆಡೆ ಹಂಚಿಕೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಪ್ರೈವೇಟ್​ ಗೋವಾ ಪಾರ್ಟಿಯ ಪೋಸ್ಟರ್​ ಬಿಡುಗಡೆ ಮಾಡಿದವರ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಅಲ್ಲದೇ, ರಾಜ್ಯದಲ್ಲಿ ಯಾವುದೇ ರೀತಿಯ ನಗ್ನ ಕೂಟ ಆಯೋಜನೆಗೆ ಅವಕಾಶ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ!ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಗೋವಾ ಸರ್ಕಾರ!

ಉತ್ತರ ಗೋವಾದಲ್ಲಿ ನಗ್ನ ಕೂಟ ಆಯೋಜಿಸಲಾಗಿದೆ ಎಂಬ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಘಟನೆ ಸಂಬಂಧ ಗೋವಾ ಪೊಲೀಸರು ಸೋಮವಾರ ತನಿಖೆ ಆರಂಭಿಸಿದ್ದಾರೆ.

Goa Nude Party Posters Goes Viral

ಪೋಸ್ಟರ್​ ಸಂಬಂಧಿಸಿದಂತೆ ಮಾತನಾಡಿರುವ ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಟಿನಾಹೊ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಪ್ರವಾಸೋದ್ಯಮ ಸಚಿವ ಮನೋಹರ್ ಆಜ್​ಗೋನ್ಕರ್​ ಈ ವಿಚಾರವಾಗಿ ಶೀಘ್ರವೇ ಮಾಹಿತಿ ಪಡೆದುಕೊಂಡು, ಇಂತಹ ಯಾವುದೇ ಕೂಟಗಳು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಯಲ್ಲಿ ನಗ್ನ ಕೂಟವನ್ನು ಆಯೋಜಿಸಲಾಗಿದೆ. 10ರಿಂದ 15 ವಿದೇಶಿ ಹುಡುಗಿಯರು ಮತ್ತು 10ಕ್ಕೂ ಹೆಚ್ಚು ಭಾರತೀಯ ಯುವತಿಯರು ನಗ್ನ ಕೂಟದ ಭಾಗವಾಗಲಿದ್ದಾರೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿತ್ತು.

ಅಬ್ಬಬ್ಬಾ ಒಂದೇ ರಾತ್ರಿ ಇಷ್ಟೊಂದು ಮದ್ಯ ಕುಡಿದರಾ ಬೆಂಗಳೂರಿಗರು?ಅಬ್ಬಬ್ಬಾ ಒಂದೇ ರಾತ್ರಿ ಇಷ್ಟೊಂದು ಮದ್ಯ ಕುಡಿದರಾ ಬೆಂಗಳೂರಿಗರು?

ಆದರೆ ಆ ಪೋಸ್ಟರ್‌ನಲ್ಲಿ ಯಾವ ಸ್ಥಳದಲ್ಲಿ ಈ ಕೂಟ ನಡೆಯುತ್ತಿದೆ, ಯಾವ ದಿನಾಂಕದಂದು ನಡೆಯುತ್ತಿದೆ ಎಂಬ ಮಾಹಿತಿ ಇಲ್ಲ, ಯಾರೋ ಬೇಕಂತಲೇ ಸಮಾಜದ ಸ್ವಾಸ್ತ್ಯ ಹಾಳು ಮಾಡುವುದಕ್ಕಾಗಿಯೇ ಪೋಸ್ಟರ್ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

English summary
While the poster mentions three roads in North Goa district where the party is likely to happen, it has not given a detailed address nor a date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X