ಸೈನ್ಯ ಸೇರಲು ಪ್ರತೀ ರಾತ್ರಿ 10 ಕಿಮೀ ಓಟ: 'ರನ್ನಿಂಗ್ ಬಾಯ್'ಗೆ ನೋಯ್ಡಾ DM ಸಹಾಯಹಸ್ತ

ನೋಯ್ಡಾ ಮಾರ್ಚ್ 24: 19 ವರ್ಷದ ಯುವಕನೊಬ್ಬ ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ ತನ್ನ ಮನೆಗೆ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದೆ. ಈ ವಿಡಿಯೋವನ್ನು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡ ಯುವಕನನ್ನು ಪ್ರದೀಪ್ ಮೆಹ್ರಾ ಎಂದು ಗುರುತಿಸಲಾಗಿದೆ. ಈ ಯುವಕ ಸೈನಿಕ ಶಾಲೆಯನ್ನು ಸೇರುವ ಆಸೆಯಿಂದಾಗಿ ಪ್ರತೀ ರಾತ್ರಿ 10 ಕಿಮೀ ಓಡುತ್ತಾನೆ.

ಮಧ್ಯರಾತ್ರಿ ಈ ಯುವಕ ಓಡುವುದನ್ನು ಗಮನಿಸಿದ ವಿನೋದ್ ಕಪ್ರಿ ಯುವಕನಿಗೆ ಡ್ರಾಪ್ ನೀಡುವುದಾಗಿ ಹೇಳಿದರು. ಆದರೆ ಅದನ್ನು ನಿರಾಕರಿಸಿದ ಪ್ರದೀಪ್ ಮೆಹ್ರಾ ತಾನು ಸೇನೆಗೆ ಸೇರಲು ದೈಹಿಕವಾಗಿ ತರಬೇತಿ ಪಡೆಯಲು ಸೆಕ್ಟರ್ 16 ರಿಂದ ಬರೋಲಾದಲ್ಲಿರುವ ತನ್ನ ಮನೆಗೆ ಪ್ರತಿ ರಾತ್ರಿ 10 ಕಿಮೀ ಓಡುತ್ತೇನೆ ಎಂದು ಹೇಳಿದ್ದಾರೆ. ಪ್ರದೀಪ್ ರನ್ನಿಂಗ್ ಹಾಗೂ ಹೇಳಿಕೆಯನ್ನು ವಿಡಿಯೋ ಮಾಡಿದ ವಿನೋದ್ ಕಪ್ರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪ್ರದೀಪ್ ಜೀವನ ಕಥೆಯನ್ನು ಕೇಳಿದ ಅನೇಕರು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಜೊತೆಗೆ ಯೋಗಿ ಸರ್ಕಾರ ಕೂಡ ಮೆಹ್ರಾಗೆ ಸಹಾಯ ಹಸ್ತ ಚಾಚಿದೆ.

ಮಂಗಳವಾರ ಗೌತಮ್ ಬುದ್ ನಗರದ ಜಿಲ್ಲಾಧಿಕಾರಿ ಸುಹಾಸ್ ಎಲ್ ವೈ ಅವರು ಪ್ರದೀಪ್ ಮತ್ತು ಅವರ ಸಹೋದರನನ್ನು ತಮ್ಮ ಕಚೇರಿಗೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿದರು ಎಂದು ಆಜ್ ತಕ್ ವರದಿ ಮಾಡಿದೆ. ಸಭೆಯಲ್ಲಿ ಪ್ರದೀಪ್ ಅವರು 12 ನೇ ತರಗತಿ ಪಾಸಾಗಿದ್ದು, ಪದವಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂದು ಡಿಎಂಗೆ ತಿಳಿಸಿದರು. ಆದರೆ ಅವರು ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ಸೇನೆಗೆ ಸೇರಲು ಬಯಸುತ್ತಾರೆ. ಅದಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ಪ್ರದೀಪ್ ಅವರು ಅನೇಕ ಸಂಸ್ಥೆಗಳು ಮತ್ತು ಕಾಲೇಜುಗಳಿಂದ ಹಲವಾರು ಕೊಡುಗೆಗಳನ್ನು ಪಡೆದಿದ್ದಾರೆ. ಅವರೆಲ್ಲರೂ ಪ್ರದೀಪ್ ಅವರಿಗೆ ಉಚಿತವಾಗಿ ಶಿಕ್ಷಣ ನೀಡಲು ಸಿದ್ಧರಾಗಿದ್ದಾರೆ ಎಂದು ಡಿಎಂಗೆ ತಿಳಿಸಿದರು. ಪ್ರದೀಪ್ ಅವರು ಯಾವ ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂಬ ಮಾಹಿತಿ ಮೇರೆಗೆ ಅವರಿಗೆ ಸೈನ್ಯಕ್ಕೆ ತರಬೇತಿಯನ್ನು ನೀಡುವುದಾಗಿ ಹೇಳಿದ್ದಾರೆ.

Noida DM Offers to Train ‘Running Boy’ Pradeep For Army, Assures Assistance For Mother’s Treatment

ಕಳೆದ ಎರಡು ವರ್ಷಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್ ಅವರ ಅಸ್ವಸ್ಥ ತಾಯಿಯ ಬಗ್ಗೆಯೂ ಡಿಎಂ ಮಾತನಾಡಿದರು. ಜೊತೆಗೆ ಪ್ರದೀಪ್ ಅವರ ತಾಯಿಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡರು ಮತ್ತು ಸಾಧ್ಯವಾದರೆ ಅವರ ತಾಯಿಯ ಚಿಕಿತ್ಸೆಯನ್ನು ಗೌತಮ್ ಬುದ್ಧ ನಗರದಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಡಿಎಂ ಕೂಡ ಪ್ರದೀಪ್ ಅವರನ್ನು ಹಲವು ಬಾರಿ ಹೊಗಳಿ ಹಲವರಿಗೆ ಪ್ರದೀಪ್ ಸ್ಪೂರ್ತಿಯಾಗಿದ್ದಾರೆ ಎಂದರು.

ಡಿಎಂ ಜೊತೆಗೆ ಮಾತುಕತೆ ಬಳಿಕೆ ಪ್ರದೀಪ್ ಸುದ್ದಿಗಾರರೊಂದಿಗೆ ಮಾತನಾಡಿ, ''ನಾನು ಇಂದು ನೋಯ್ಡಾ ಡಿಎಂ ಅನ್ನು ಭೇಟಿ ಮಾಡಿದ್ದೇನೆ. ಅವರು ನನ್ನ ತಾಯಿಯ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಮತ್ತು ಆರ್ಥಿಕ ನೆರವು ನೀಡುವುದಾಗಿ ಹೇಳಿದರು. ಸೈನ್ಯಕ್ಕೆ ಸೇರುವ ತಯಾರಿಯಲ್ಲಿ ನನಗೆ ತರಬೇತಿ ನೀಡುವುದಾಗಿ ಹೇಳಿದರು. ನಾನು ಸದ್ಯಕ್ಕೆ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ'' ಎಂದಿದ್ದಾರೆ.

ಮಿಡ್ನೈಟ್ ರನ್ ವಿಡಿಯೊ

ವಿಡಿಯೋದಲ್ಲಿ ಪ್ರದೀಪ್ ತನ್ನ ಭುಜದ ಮೇಲೆ ಸಣ್ಣ ಬ್ಯಾಗ್ ಮತ್ತು ಕೈಯಲ್ಲಿ ಮೊಬೈಲ್ ಫೋನ್‌ನೊಂದಿಗೆ ಮಧ್ಯರಾತ್ರಿಯ ಹೊತ್ತಿಗೆ ನಗರದ ರಸ್ತೆಯಲ್ಲಿ ಓಡುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ತನ್ನ ಮನೆಗೆ ಪ್ರಯಾಣಿಸಲು ಅವಕಾಶ ನೀಡಿದಾಗ, ಪ್ರದೀಪ್ ಸಹಾಯವನ್ನು ನಿರಾಕರಿಸಿದ್ದಾರೆ. ಜೊತೆಗೆ ತಾವು ಸೇನೆಗೆ ಸೇರಲು ದೈಹಿಕವಾಗಿ ತರಬೇತಿ ಪಡೆಯಲು ಸೆಕ್ಟರ್ 16 (ಕೆಲಸದ ಸ್ಥಳ) ನಿಂದ ಬರೋಲಾದಲ್ಲಿರುವ ತನ್ನ ಮನೆಗೆ ಪ್ರತಿ ರಾತ್ರಿ 10 ಕಿಮೀ ಓಡುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ.

ಮಾತ್ರವಲ್ಲದೆ "ಬೆಳಗ್ಗೆ, ನಾನು ಕೆಲಸಕ್ಕೆ ಹೋಗಬೇಕು ಮತ್ತು ಆಹಾರವನ್ನು ಬೇಯಿಸಬೇಕು" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ಕಂಪನಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ತನ್ನ ಹಿರಿಯ ಸಹೋದರನೊಂದಿಗೆ ನೋಯ್ಡಾದಲ್ಲಿ ತಾನು ಉಳಿದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ತಾಯಿ ಅಲ್ಮೋರಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಡಿಯೊ ಕ್ಲಿಪ್ ವೈರಲ್ ಆಗುತ್ತದೆ ಎಂದು ಚಿತ್ರ ನಿರ್ಮಾಪಕರು ಹೇಳಿದಾಗ ಪ್ರದೀಪ್ "ಯಾರು ಗುರುತಿಸುತ್ತಾರೆ?" ಎಂದು ಪ್ರತಿಕ್ರಿಯಿಸಿದ್ದಾರೆ.

ಅವರ ವಿಡಿಯೊ ಹುಚ್ಚುಚ್ಚಾಗಿ ವೈರಲ್ ಆಗುತ್ತಿದ್ದಂತೆ ಯುವಕ ಪ್ರತಿಯೊಬ್ಬರೂ ತನ್ನ ಕನಸಿನ ಮೇಲೆ ಕೇಂದ್ರೀಕರಿಸಲು ಅವಕಾಶ ನೀಡುವಂತೆ ವಿನಂತಿಸಿದರು. ಈಗಾಗಲೇ ವೈರಲ್ ಆಗಿರುವ ತನ್ನ ವೀಡಿಯೊವನ್ನು ಜನರು ಹಂಚಿಕೊಳ್ಳಲು ನನಗಿಷ್ಟವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು ಆದರೆ ಶಾಂತಿಯಿಂದ ತನ್ನ ಗುರಿಯತ್ತ ಕೆಲಸ ಮಾಡಲು ಅವಕಾಶ ನೀಡುವಂತೆ ಎಲ್ಲರಿಗೂ ಒತ್ತಾಯಿಸಿದರು.

Recommended Video

      ಹಿಂದೂ ಯೋಧನಿಗೆ ತಿಲಕ ಇಡಲು ಅನುಮತಿ ಕೊಟ್ಟ ಯುಎಸ್ ವಾಯು ಸೇನೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+