ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

By Mahesh
|
Google Oneindia Kannada News

ನವದೆಹಲಿ,ಜೂ.15: ಐಪಿಎಲ್‌ ಸ್ಥಾಪಕ, ಮಾಜಿ ಚೇರ್ಮನ್ ಲಲಿತ್ ಮೋದಿ ಅವರ ವೀಸಾ ವಿಸ್ತರಣೆಗೆ ಮಾನವೀಯ ನೆಲೆಯಲ್ಲಿ ನೆರವು ನೀಡಿದ ತಪ್ಪಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮುಂದೆ ಕಾಂಗ್ರೆಸ್ ನ ಯುವ ಪ್ರತಿಭಟನೆ ಮಾಡುವಂತಾಗಿದೆ. ಸುಷ್ಮಾ ಅವರದ್ದು ಸ್ವಹಿತಾಸಕ್ತಿಯೇ ಹೊರತು ಇಲ್ಲಿ ಯಾವ ಮಾನವೀಯ ನೆಲೆಯೂ ಕಂಡು ಬಂದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ನೈತಿಕ ಹೊಣೆ ಹೊತ್ತು ಸುಷ್ಮಾ ಸ್ವರಾಜ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯುವ ಕಾಂಗ್ರೆಸ್ ಎಚ್ಚರಿಸಿದೆ. ['ಸುಷ್ಮಾ ಮೇಡಂ, ಇದೇ ರೀತಿ ದಾವೂದ್ ಗೂ ಹೆಲ್ಪ್ ಮಾಡ್ತೀರಾ?']

700 ಕೋಟಿ ರು.ಗಳ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ, ಬಂಧನಕ್ಕೆ ಹೆದರಿ ವಿದೇಶದಲ್ಲಿರುವ ಲಲಿತ್ ಮೋದಿಗೆ ಮಾನವೀಯತೆಯ ನೆಪವೊಡ್ಡಿ ಸಹಾಯ ಮಾಡಿರುವುದು ಎಷ್ಟು ಸರಿ? ಸಚಿವೆ ಸುಷ್ಮಾ ಸ್ವರಾಜ್ ಮತ್ತು ಲಲಿತ್ ಮೋದಿ ಕುಟುಂಬದ ನಡುವೆ ಇರುವ ಸಂಬಂಧಗಳು ಎಲ್ಲರಿಗೂ ತಿಳಿದಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಶಾಂತ್ ಭೂಷಣ್ ಆಗ್ರಹ:

ಪ್ರಶಾಂತ್ ಭೂಷಣ್ ಆಗ್ರಹ:

ಈ ಪ್ರಕರಣದಲ್ಲಿ ಮಾನವೀಯ ನೆಲೆ ಎಲ್ಲಿಯೂ ಇಲ್ಲ. ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಹಿತಾಸಕ್ತಿಯ ಕೆಲಸವಾಗಿದ್ದು, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಶುಷ್ಮಾ ಸ್ವರಾಜ್‌ರವರ ಪುತ್ರಿಯೇ ಲಲಿತ್ ಮೋದಿ ಅವರ ಪರ ವಕೀಲೆ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.

ಆರೆಸ್ಸೆಸ್ ಕೂಡಾ ಬೆಂಬಲ ನೀಡುತ್ತಿದೆ ಏಕೆ?

ದೇಶದ ವಿಷಯ ಬಂದರೆ ಪಕ್ಷಾತೀತವಾಗಿ ಯೋಚಿಸುವ ಸಂಘಟನೆ ಎನಿಸಿಕೊಂಡಿರುವ ಆರೆಸ್ಸೆಸ್ ಕೂಡಾ ಸುಷ್ಮಾ ಸ್ವರಾಜ್ ಅವರ ಬೆಂಬಲಕ್ಕೆ ನಿಂತಿರುವುದು ಅಚ್ಚರಿಯ ವಿಷಯ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಯುವ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

ಯುವ ಕಾಂಗ್ರೆಸ್ ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮೋದಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ

ಮೋದಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಈಗ ಎಂಬುದು ಕುತೂಹಲಕಾರಿಯಾಗಿದೆ ಎಂದು ಸೀತಾರಾಮ್ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.

English summary
The Youth Congress on Monday(Jun.15) protested near union Minister Sushma Swaraj's residence over allegations that she facilitated former Indian Premier League (IPL) chief Lalit Modi's travel to Portugal for his wife's treatment last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X