ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಲು ಎಕ್ಸ್‌ಎಲ್‌ಆರ್‌ಐ ವಿಶೇಷ ಕೇಂದ್ರ!

|
Google Oneindia Kannada News

ನವದೆಹಲಿ, ಮಾರ್ಚ್ 8: ದೆಹಲಿ-ಎನ್ಆರ್ ಸಿ ಕ್ಯಾಂಪಸ್ ನಲ್ಲಿ ಲಿಂಗ ಸಮಾನತೆ ಮತ್ತು ಅಂತರ್ಗತ ನಾಯಕತ್ವ ಕೇಂದ್ರವನ್ನು ಸ್ಥಾಪಿಸಲು ಎಕ್ಸ್‌ಎಲ್‌ಆರ್‌ಐ- ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮುಂದಾಗಿದೆ. ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ.

ಮಹಿಳಾ ದಿನಾಚರಣೆ ಹಿನ್ನೆಲೆ "ಮಹಿಳೆಯರಲ್ಲಿ ನಾಯಕತ್ವ" ಎಂಬ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಜಗತ್ತಿನಾದ್ಯಂತ ಕೊವಿಡ್-19 ಸಂದಿಗ್ಧ ಸ್ಥಿತಿಯಲ್ಲಿ ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಹಿಳೆಯರನ್ನೂ ಕೂಡ ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಉತ್ತೇಜಿಸಲಾಗುತ್ತಿದೆ.

ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು ಲಿಂಗ ಸಮಾನತೆ ಮತ್ತು ಅಂತರ್ಗತ ನಾಯಕತ್ವ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ.

XLRI Sets Up A Centre For Gender Equality and Inclusive Leadership At Delhi-NCR Campus

ಹಳೆ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ತಂಡ:

ಎಕ್ಸ್‌ಎಲ್‌ಆರ್‌ಐ ಒಂದು ಸಂಸ್ಥೆಯಾಗಿ ನೈತಿಕತೆ, ಸುಸ್ಥಿರತೆ ಮತ್ತು ಸಾಮಾಜಿಕ ಉದ್ಯಮಶೀಲತೆಯಂತಹ ವಿವಿಧ ವಿಷಯಗಳನ್ನು ತೆಗೆದುಕೊಳ್ಳುವುದರಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿ ಇರುತ್ತದೆ. ಈ ಕೇಂದ್ರವು ವೃತ್ತಿಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಒಂದು ದೊಡ್ಡ ತಂಡವನ್ನು ಒಟ್ಟುಗೂಡಿಸುತ್ತದೆ. ಅದೇ ತಂಡ ಮಹಿಳೆಯರ ದೈನಂದಿನ ಜೀವನ ಪರಿವರ್ತನೆ ನಿಟ್ಟಿನಲ್ಲಿ ಸಂಸ್ಥೆಗೆ ಸಹಕರಿಸಲಿದ್ದಾರೆ.

ಅಕಾಡೆಮಿ ಮತ್ತು ಕೈಗಾರಿಕೆ ನಡುವೆ ಸಂಪರ್ಕ:
ಝಜ್ಜರ್ ಸಮೀಪದ 37 ಎಕರೆ ವಿಶಾಲವಾದ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವು ಗುರ್ಗಾಂವ್ ನಿಂದ 45 ನಿಮಿಷಗಳ ಪ್ರಯಾಣದ ಅಂತರದಲ್ಲಿದೆ. ದೆಹಲಿ-ಎನ್‌ಸಿಆರ್ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಕೇಂದ್ರವು ಎಕ್ಸ್‌ಎಲ್‌ಆರ್‌ಐ ಬಯಕೆಯಂತೆ ಕೈಗಾರಿಕೋದ್ಯಮ ಮತ್ತು ಅಕಾಡೆಮಿಗಳ ನಡುವೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಿದೆ.
ಸಹಾಯಕ ಪ್ರಾಧ್ಯಾಪಕ ಪ್ರೊ.ಶ್ರೇಯಾಶಿ ಚಕ್ರವರ್ತಿ ನೇತೃತ್ವದಲ್ಲಿ ಹೊಸ ಕೇಂದ್ರ ಸ್ಥಾಪಿಸಲಾಗಿದೆ. ಭಾರತೀಯ ಕಚೇರಿಗಳಲ್ಲಿ ಅಸಮಾನತೆ, ನಿರ್ವಹಣಾ ತರಬೇತಿ, ಮಹಿಳಾ ಉದ್ಯೋಗಿಗಳಿಗೆ ವೃತ್ತಿಯ ಅನುಭವವು ಕೇಂದ್ರದ ಪ್ರಾಥಮಿಕ ಸಂಶೋಧನಾ ಆಸಕ್ತಿದಾಯಕ ವಿಷಯಗಳಾಗಿವೆ. 2017ರಲ್ಲಿ ಇವರು ಎಚ್‌ಆರ್‌ಎಂ ಕ್ಷೇತ್ರದಲ್ಲಿ ಅತ್ಯುತ್ತಮ ಡಾಕ್ಟರಲ್ ಡಿಸರ್ಟೇಶನ್ ಪ್ರಶಸ್ತಿಗೆ ಭಾಜನರಾಗಿದ್ದರು.

English summary
XLRI Sets Up A Centre For Gender Equality and Inclusive Leadership At Delhi-NCR Campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X