ಅಣ್ಣನೊಂದಿಗೆ ಸಂಭೋಗಿಸಲು ಹೇಳಿದ ಗಂಡನ ಹತ್ಯೆ!

ನವದೆಹಲಿ, ಮಾರ್ಚ್ 25 : ತನ್ನ ಅಣ್ಣನೊಡನೆ ಸಂಭೋಗಕ್ಕೆ ಬಲವಂತ ಮಾಡಿದ ಗಂಡನನ್ನು ಹೆಂಡತಿಯೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಘಟನೆಯ ವಿವರ ಓದುಗರನ್ನು ಬೆಚ್ಚಿಬೀಳಿಸುವಂತಿದೆ.

ಹದಿನೆಂಟು ವರ್ಷಗಳ ಹಿಂದೆ ಮದುವೆಯಾಗಿದ್ದರೂ ಸತತವಾಗಿ ಗರ್ಭಪಾತ ಮಾಡಿಸಿ ತನ್ನ ಹೆಂಡತಿಯನ್ನೇ ಸತತವಾಗಿ ದೌರ್ಜನ್ಯಕ್ಕೀಡು ಮಾಡಿದ್ದ ಆ ಗಂಡ. ಅಲ್ಲದೆ, ಹೆಂಡತಿಯ ಅಣ್ಣನೊಂದಿಗೆ ಸಂಭೋಗ ನಡೆಸಲು ಒತ್ತಾಯಿಸುತ್ತಿದ್ದ.

ಆ ನಿರ್ಲಜ್ಜ, ನಿರ್ದಯಿ ಗಂಡ ಇಷ್ಟೆಲ್ಲ ಮಾಡುತ್ತಿದ್ದುದು ಒಂದೇ ಕಾರಣಕ್ಕೆ. ಅದು ಗಂಡು ಮಗು ಬೇಕೆಂದು! ತನ್ನ ವಂಶ ವೃದ್ಧಿಯಾಗಲಿ ಮತ್ತು ತನ್ನ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗುವಂತಾಗಲಿ ಎಂದು ಆತ ಗಂಡು ಮಗುವಿಗಾಗಿ ಹಪಹಪಿಸುತ್ತಿದ್ದ. [ಸರಸವಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಟೆಕ್ಕಿ]

Woman arrested for murdering husband in New Delhi

ಈ ಘಟನೆ ಬೆಳಕಿಗೆ ಬಂದಿದ್ದು ಆ ಮಹಿಳೆ ತನ್ನ ಗಂಡನ ಹತ್ಯೆಯಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದಾಗ. ಮನೆಗೆ ಇಬ್ಬರು ಅತಿಥಿಗಳ ಬಂದಿದ್ದರು. ರಾತ್ರಿ ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ. ಎಚ್ಚರವಾದಾಗ ತನ್ನ ಗಂಡನ ಹತ್ಯೆಯಾಗಿತ್ತು ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಳು.

ಆದರೆ, ಸಿಸಿಟಿವಿ ಕ್ಯಾಮೆರಾದ ಫುಟೇಜನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಸತ್ತ ಗಂಡನ ಬಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂದಿದೆ. ಆತ ಮತ್ತಾರೂ ಅಲ್ಲ ಆಕೆಯ ಅಣ್ಣ. ಮತ್ತಷ್ಟು ಆಳವಾಗಿ ವಿಚಾರಣೆ ಮಾಡಿದಾಗ ತಾನೇ ಅಣ್ಣನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದನ್ನು ಅಳುತ್ತ ಬಾಯಿಬಿಟ್ಟಿದ್ದಾಳೆ. [ಮರ್ಮಾಂಗಕ್ಕೆ ಒದ್ದು ಗಂಡನ ಕೊಲೆ ಮಾಡಿದ್ಲು ಹೆಂಡ್ತಿ]

ಆ ಘಟನೆಯ ವಿವರ ಹೀಗಿದೆ : ತನಗೆ ಗಂಡು ಮಗು ಬೇಕೆಂದು ಗಂಡ ಪೀಡಿಸುತ್ತಲೇ ಇದ್ದ. ಪ್ರತಿಬಾರಿ ಗರ್ಭದಲ್ಲಿರುವುದು ಹೆಣ್ಣುಮಗು ಎಂದು ಪತ್ತೆ ಮಾಡಿ ಗರ್ಭಪಾತವಾಗುವಂತೆ ಮಾಡಿಸುತ್ತಿದ್ದ. ಒಂದು ಬಾರಿ ಉಳಿಸಿಕೊಂಡ ಮಗು ನಾಲ್ಕು ವರ್ಷವಿದ್ದಾಗ ಅಪೌಷ್ಟಿಕತೆಯಿಂದ ಸತ್ತುಹೋಯಿತು.

ತನ್ನಿಂದ ಸಾಧ್ಯವಿಲ್ಲದಿದ್ದಾಗ ನಿನ್ನ ಅಣ್ಣನೊಂದಿಗೆ ಸಂಭೋಗಿಸು ಎಂದು ಆತ ಪೀಡಸಲು ಆರಂಭಿಸಿದ್ದ. ಒಪ್ಪಿಕೊಳ್ಳದಿದ್ದರೆ ನಿನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುತ್ತೇನೆ, ಇಲ್ಲದಿದ್ದರೆ ವೇಶ್ಯಾವಾಟಿಕೆ ತಳ್ಳುತ್ತೇನೆ ಎಂದೆಲ್ಲ ಗೋಳು ಹೊಯ್ದುಕೊಳ್ಳುತ್ತಿದ್ದ. [ಅಯ್ಯೋ ದೇವ್ರೆ, ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ]

ಸಾಲದೆಂಬಂತೆ, ಆಕೆ ಅಣ್ಣ ಆತನ ಬಳಿ ಸಾಲ ಪಡೆದಿದ್ದ ಮತ್ತು ತನ್ನದೇ ಕಂಪನಿಯಲ್ಲಿ ಕೆಲಸ ಕೊಟ್ಟಿದ್ದ. ಆತನ ಅಸಹಾಯಕತೆಯ ದುರ್ಲಾಭ ಪಡೆದು ಸ್ವಂತ ಸೋದರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪ್ರೇರೇಪಿಸುತ್ತಿದ್ದ. ಇದರಿಂದ ಇಬ್ಬರೂ ಬೇಸತ್ತು ಹೋಗಿದ್ದರು.

ಒಂದು ದಿನ ಇಬ್ಬರೂ ಸೇರಿಕೊಂಡು ಆತನನ್ನು ಕೊಂದುಹಾಕುವ ಪ್ಲಾನ್ ಹಾಕಿದ್ದಾರೆ. ಆತನಿಗೆ ಮತ್ತು ಬರುವಂತೆ ಮಾಡಿ, ದುಪಟ್ಟಾದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ನಂತರ ಯಾರೋ ಬಂದು ಆತನ ಹತ್ಯೆ ಮಾಡಿದ್ದಾರೆ ಎಂದು ಕತೆಕಟ್ಟಿ ಪೊಲೀಸರಿಗೆ ತಿಳಿಸಿದ್ದಾರೆ. ಕೊನೆಗೆ ಸತ್ಯ ಬಯಲಾಗಿದೆ. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+