ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ್ರೆ ಕಾವೇರಿ ಸಮಸ್ಯೆ ಖಲ್ಲಾಸ್: ಬಿಎಸ್ವೈ

|
Google Oneindia Kannada News

ನವದೆಹಲಿ, ಜೂನ್ 20: ನಾನು ಕರ್ನಾಟಕದ ಮುಖ್ಯಮಂತ್ರಿ ಆದರೆ ಕೇಂದ್ರದಲ್ಲಿ ಮೋದಿ ಅವರ ಸಹಕಾರ ಪಡೆದು ಕಾವೇರಿ ಜಲ ವಿವಾದವನ್ನು ಶಾಶ್ವತವಾಗಿ ಬಗೆಹರಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿ ಮಂಗಳವಾರ ಹೇಳಿದ್ದಾರೆ.
ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ದಶಕಗಳಿಂದ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಬಗೆಹರಿಯದೆ ಉಳಿದಿರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಬಗೆಹರಿಸುತ್ತದೆ ಎಂದಿದ್ದಾರೆ.

yeddyurappa


ಬರಗಾಲ ಪರಿಸ್ಥಿತಿ ಎದುರಾದಾಗ ಹಾಗೂ ರೈತರ ಪ್ರತಿಭಟನೆಗಳು ಕಾವೇರಿ ಜಲ ವಿವಾದವನ್ನು ಜೀವಂತವಾಗಿಟ್ಟಿವೆ. ಪ್ರತಿ ಬಾರಿ ಚುನಾವಣೆಗಳು ಬಂದಾಗ ಇದೇ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ.
ಕರ್ನಾಟಕ ಬಿಜೆಪಿಯೊಳಗೆ ಆಂತರಿಕ ಭಿನ್ನಮತ ಹೆಚ್ಚುತ್ತಿದೆ ಎಂಬ ಸೂಚನೆ ದೊರೆತ ಕೂಡಲೇ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಆ ನಂತರ ಯಡಿಯೂರಪ್ಪ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ.
ಅವರ ಪ್ರವಾಸದ ವೇಳೆ ದಲಿತರ ಮತಗಳನ್ನು ಸೆಳೆಯುವ ಎಲ್ಲ ಪ್ರಯತ್ನ ನಡೆಸಿದ್ದಾರೆ. ದಲಿತರ ಕಾಲೋನಿಗಳಿಗೆ ಭೇಟಿ ನೀಡಿ, ಅವರ ಮನೆಗಳಲ್ಲಿ ಊಟ-ತಿಂಡಿ ಮಾಡಿದ್ದಾರೆ. ದಲಿತ ವಿರೋಧಿ ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿಯನ್ನು ಅದರಿಂದ ಹೊರತರಲು ಯಡಿಯೂರಪ್ಪ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿಯ ಮತಬ್ಯಾಂಕ್ ನ ಬುಟ್ಟಿಯಿಂದ ಹೊರಗಿರುವ ಸಮುದಾಯಗಳನ್ನು ಸೆಳೆಯಲು ಬೆವರು ಹರಿಸುತ್ತಿದ್ದಾರೆ. ಇದೀಗ ಯಡಿಯೂರಪ್ಪ ಅವರು ನೀಡಿದ ಕಾವೇರಿ ವಿವಾದ ಬಗೆಹರಿಸುವ ಹೇಳಿಕೆ, ರೈತಾಪಿ ವರ್ಗಕ್ಕೆ ಹತ್ತಿರವಾಗಲು ಆಡಿದಂತಿದೆ.

English summary
The state president of Karnataka BJP has assured to solve the Cauvery river water sharing crisis if he becomes Chief Minister. Speaking to reporters in Delhi on Tuesday, the BJP's chief ministerial candidate for Karnataka said that his government, if voted to power would soon resolve the decades-old crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X