10ನೇ ದಿನದ ಅಧಿವೇಶನ: ಉಭಯ ಸದನಗಳಲ್ಲಿ ಯಾವ-ಯಾವ ಮಸೂದೆ ಮಂಡನೆ?
ನವದೆಹಲಿ, ಡಿಸೆಂಬರ್ 13: ಸಂಸತ್ ಚಳಿಗಾಲ ಅಧಿವೇಶನ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಸಭೆಯ 12 ಸಂಸದರ ಅಮಾನತು ಕುರಿತು ವಿರೋಧದ ಮಧ್ಯೆ ರಾಜ್ಯಸಭೆಯು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತು) ತಿದ್ದುಪಡಿ ಮಸೂದೆ, 2021 ಅನ್ನು ಪರಿಗಣಿಸಿದೆ. ಇದೇ ವೇಳೆ ಲೋಕಸಭೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿದೆ.
ಶುಕ್ರವಾರ ನಡೆದ ಚಳಿಗಾಲ ಅಧಿವೇಶನದ ಒಂಬತ್ತನೇ ದಿನದ ಕಲಾಪದಲ್ಲಿ, ಲೋಕಸಭೆಯು CVC (ತಿದ್ದುಪಡಿ), 2021 ಮತ್ತು ದೆಹಲಿ (ವಿಶೇಷ) ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿತು, ರಾಜ್ಯಸಭೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಮತ್ತು ರಿಸರ್ಚ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು.
ರಾಜ್ಯಸಭೆಯಿಂದ 12 ಸಂಸದರನ್ನು ಅಮಾನತುಗೊಳಿಸಿದ ಆದೇಶವನ್ನು ಮರುಪರಿಶೀಲಿಸುವಂತೆ ಕೆಲವು ಪ್ರತಿಪಕ್ಷ ಸದಸ್ಯರು ಬೇಡಿಕೆಯನ್ನು ಮುಂದುವರಿಸಿದರು. ಈ ಹಂತದಲ್ಲಿ ಕಲಾಪಕ್ಕೆ ಅಡೆತಡೆ ಉಂಟಾಗಿದ್ದು, ಸದನವನ್ನು ಮುಂದೂಡಲಾಗಿತ್ತು. ಎರಡನೇ ವಾರದಲ್ಲಿ ರಾಜ್ಯಸಭೆಯ ಕಲಾಪದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಿಂದಿನ ವಾರಕ್ಕಿಂತ ಶೇ.5.6ರಷ್ಟು ಹೆಚ್ಚಳವಾಗಿದೆ.

ಲೋಕಸಭೆಯಲ್ಲಿ ಯಾವ ಮಸೂದೆ?:
ಸಂಸತ್ ಚಳಿಗಾಲ ಅಧಿವೇಶನದ 10ನೇ ದಿನವಾದ ಸೋಮವಾರ ಕೆಳಮನೆ ಆಗಿರುವ ಲೋಕಸಭೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ & ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಲಾಗುತ್ತದೆ.
ರಾಜ್ಯಸಭೆಯಲ್ಲಿ ಯಾವ ಮಸೂದೆ?:
ಸಂಸತ್ ಮೇಲ್ಮನೆ ಆಗಿರುವ ರಾಜ್ಯಸಭೆಯಲ್ಲಿ 'ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು (ವೇತನಗಳು ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ 2021' ಅನ್ನು ಮಂಡಿಸುವುದಕ್ಕೆ ತೀರ್ಮಾನಿಸಲಾಗಿದೆ.












Click it and Unblock the Notifications