ದೆಹಲಿ ವಿದ್ಯುತ್ ಸಬ್ಸಿಡಿಯಿಂದ ಆಮ್ ಆದ್ಮಿಗಿಂತ ಅಮಿರ್ ಗೆ ಲಾಭ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 15: ದೆಹಲಿ ಸರಕಾರ ವಿದ್ಯುತ್ ಸಬ್ಸಿಡಿ ವಿಚಾರದಲ್ಲಿ ಉದಾರಿ ಏನೋ ಹೌದು. ಆದರೆ ಸಮರ್ಥವಾಗಿಲ್ಲ ಎಂಬ ವರದಿಯೊಂದು ಬಂದಿದೆ. ರಾಹುಲ್ ತೊಂಗಿಯಾ ಸಿದ್ಧಪಡಿಸಿರುವ ಈ ವರದಿ ಹೇಳುವ ಪ್ರಕಾರ, ಈ ಸಬ್ಸಿಡಿಯ ಲಾಭವನ್ನು ಬಡವರಿಗಿಂತ ಹೆಚ್ಚಾಗಿ ಮಧ್ಯಮವರ್ಗದವರು ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಅಂದಹಾಗೆ ಈ ವರದಿಯಲ್ಲಿ ಏನು ಹೇಳಲಾಗಿದೆ ಎಂಬ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

Why Delhi's household electricity subsidy is highly generous, but insufficient

* ಮನೆ ಬಳಕೆಗೆ ದೆಹಲಿ ಸರಕಾರ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಇಡೀ ದೇಶದಲ್ಲೇ ಉದಾರವಾದದ್ದು. ಸಬ್ಸಿಡಿ ಪಡೆಯುವುದಕ್ಕೆ ಇರುವ ಮಾನದಂಡ ಇದೆಯಲ್ಲ, ಅದರಿಂದಾಗಿ ಸರಾಸರಿ ಶೇ 80ರಷ್ಟು ಮನೆಗಳು ಶೇ 50ರಷ್ಟು ತೆರಿಗೆ ಪಾವತಿದಾರರ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ.[ದೆಹಲಿ ಉಪಚುನಾವಣೆ: ಠೇವಣಿ ಕಳೆದುಕೊಂಡ ಆಮ್ ಆದ್ಮಿ ಪಕ್ಷ]

ಕೆಲವು ತಿಂಗಳಂತೂ ಇದು ಶೇ 95ಕ್ಕಿಂತ ಹೆಚ್ಚಾಗುತ್ತದೆ. ದೆಹಲಿ ಎಲೆಕ್ಟ್ರಿಸಿಟಿ ರೆಗ್ಯುಲೆಟರಿ ಕಮಿಷನ್ ವಿಧಿಸಿರುವ ಮಿತಿಗಿಂತ ತುಂಬ ಹೆಚ್ಚಿನ ಸಬ್ಸಿಡಿ ಇದು. ಆ ಕಾರಣಕ್ಕೆ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚಕ್ಕಿಂತ ಕಡಿಮೆ ದರವನ್ನು ವಿಧಿಸಲಾಗುತ್ತಿದೆ.

* ಸಬ್ಸಿಡಿಯ ಅನುಕೂಲವನ್ನು ಶೇಕಡಾವಾರು ಪ್ರಮಾಣದಲ್ಲಿ ಹೇಳುವುದಾದರೆ ಬಡವರಿಗಿಂತ ಹೆಚ್ಚಾಗಿ ಮಧ್ಯಮ ವರ್ಗದವರು ಪಡೆಯುತ್ತಿದ್ದಾರೆ. ಬಡ ವರ್ಗದವರು ಸರಾಸರಿ ಶೇ 33ಕ್ಕಿಂತ ಸ್ವಲ್ಪ ಕಡಿಮೆ ಬಿಲ್ ಮೇಲೆ ನಿವ್ವಳ ಸಬ್ಸಿಡಿ ಪಡೆಯುತ್ತಾರೆ. ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ವಿದ್ಯುತ್ ಬಳಕೆದಾರರು ಶೇ 40ರಷ್ಟು ನಿವ್ವಳ ಸಬ್ಸಿಡಿ ಪಡೆಯುತ್ತಾರೆ.[ಕೋಟಿ ರುಪಾಯಿ ಸಮೋಸ ತಿಂದು, ಟೀ ಕುಡಿದು ತೇಗಿತೆ ಆಪ್?]

*ಮನೆ ಬಳಕೆ ವಿದ್ಯುತ್ ಅನ್ನು ತಿಂಗಳಿಗೆ 100 ಯೂನಿಟ್ ವರೆಗೆ ಬಳಸುವವರೆಗೆ ವರ್ಷಕ್ಕೆ 1 ಸಾವಿರ ರುಪಾಯಿಗಿಂತ ಸ್ವಲ್ಪ ಹೆಚ್ಚು ಸಬ್ಸಿಡಿ ಸಿಗುತ್ತದೆ. ತಿಂಗಳಿಗೆ 300ರಿಂದ 400 ಯೂನಿಟ್ ಬಳಸುವವರೆಗೆ ವರ್ಷಕ್ಕೆ 9 ಸಾವಿರ ರುಪಾಯಿ ಸಬ್ಸಿಡಿ ಸಿಗುತ್ತದೆ.

* ಸಬ್ಸಿಡಿ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ದೊಡ್ಡ ಮೊತ್ತದ ಹಣ ಉಳಿಸಬಹುದು. ತಿಂಗಳ ಮಿತಿಯನ್ನು 400ರಿಂದ 300 ಯೂನಿಟ್ ಗೆ ಇಳಿಸಿದರೂ ಶೇ 30ರಷ್ಟು ತೆರಿಗೆದಾರರ ಹಣ ಉಳಿಸಬಹುದು. ಇನ್ನು ತಿಂಗಳಿಗೆ 200 ಯೂನಿಟ್ ಬಳಸುತ್ತಿರುವವರು ಒಟ್ಟಾರೆ ಜನಸಂಖ್ಯೆಯ ಶೇ 50ರಷ್ಟಿದ್ದಾರೆ (ಇಂದಿನ ಲೆಕ್ಕಾಚಾರದಲ್ಲಿ ಶೇ 80ರಷ್ಟು ಜನಸಂಖ್ಯೆ) ಆದರೆ ಅದರಿಂದ ಒಟ್ಟಾರೆ ಮೊತ್ತದ ಮೂರನೇ ಎರಡು ಭಾಗದಷ್ಟು ಅಥವಾ 1 ಸಾವಿರ ಕೋಟಿ ಉಳಿಸಬಹುದು.[ದೆಹಲಿಯಲ್ಲಿ ಎಎಪಿಯಿಂದ ಅಧಿಕಾರ ದುರುಪಯೋಗ: ವರದಿಯಲ್ಲಿ ಏನಿದೆ?]

* ಒಟ್ಟಾರೆ ಬಡವರಿಗೆ ವರ್ಷಕ್ಕೆ ದೊರೆಯುತ್ತಿರುವ ಸಬ್ಸಿಡಿ 1 ಸಾವಿರ ರುಪಾಯಿಯಾದರೆ, ಶ್ರೀಮಂತರಿಗೆ ವರ್ಷಕ್ಕೆ 9 ಸಾವಿರ ರುಪಾಯಿ ಸಬ್ಸಿಡಿ ದೊರೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi's household electricity subsidy can be considered as highly generous, but inefficient. A report prepared by Dr. Rahul Tongia. Report says that the subsidies are regressive and it is the middle class that enjoys the benefits more than the poor.
Please Wait while comments are loading...