ಬಜೆಟ್ ಪ್ರತಿಕ್ರಿಯೆ: ಬಾದಾಮಿ ತೋರ್ಸಿ ಕಡ್ಲೆಬೀಜ ಕೊಟ್ರು
ನವದೆಹಲಿ, ಜು.10: 'ಜಾಗತಿಕ ವಿದ್ಯಮಾನಗಳು, ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ, ಸದ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಭವಿಷ್ಯದ ಬಜೆಟ್ ಮಂಡಿಸಲಾಗಿದೆ' ಎಂದು ಚೊಚ್ಚಲ ಬಜೆಟ್ ಮಂಡಿಸಿದ 'ಕಾನೂನು' ಪಂಡಿತ ಅರುಣ್ ಜೇಟ್ಲಿ ಬಜೆಟ್ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೆ, ಇದು ಜನಸಾಮಾನ್ಯರಿಗಾಗಿ ಮಂಡಿಸಿದ ಬಜೆಟ್ ಅಲ್ಲ ಉದ್ಯಮಿಗಳು, ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಮೋದಿ ರೂಪಿಸಿರುವ ನೀಲನಕ್ಷೆ ಎಂದು ವಿಪಕ್ಷಗಳು ಟೀಕಿಸಿವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾತನಾಡುತ್ತಾ, 'ಬಜೆಟ್ ನಲ್ಲಿ ಸಾಮಾಜಿಕ ಕ್ಷೇತ್ರಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ. ದೇಶದ ಸಮಗ್ರತೆ ಕಾಯ್ದುಕೊಳ್ಳುವಲ್ಲಿ ಬಜೆಟ್ ಸೋತಿದೆ ಎಂದಿದ್ದಾರೆ.[ಅರುಣ್ ಜೇಟ್ಲಿ 'ಸ್ಮಾರ್ಟ್' ಬಜೆಟ್ ಹೈಲೈಟ್ಸ್ ]
ಕೇಂದ್ರದ ಮಾಜಿ ರೈಲ್ವೆ ಸಚಿವ, ಹಾಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ಇದು ಕಾರ್ಪೊರೇಟ್ ವಲಯದ ಆದ್ಯತೆ ಮೇರೆಗೆ ಮಂಡಿಸಲಾದ ಬಜೆಟ್, ಅಭಿವೃದ್ಧಿ ಕ್ರಮಗಳು ಕಂಡು ಬಂದಿಲ್ಲ' ಎಂದಿದ್ದಾರೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಎನ್ ಸಿಪಿ ಮುಖಂಡರು, ಅರುಣ್ ಜೇಟ್ಲಿ ಪುತ್ರಿ ಸೇರಿದಂತೆ ಇನ್ನಷ್ಟು ಮಂದಿ ಪ್ರತಿಕ್ರಿಯೆಗಳು ಇಲ್ಲಿವೆ ಓದಿ...

ಬೆಟ್ಟ ತೋಡಿ ಇಲಿ ಹಿಡಿದರು, ಯುಪಿಎ ಬಜೆಟ್ ಕಾಪಿ
'ಬೆಟ್ಟ ತೋಡಿ ಇಲಿ ಹಿಡಿದರು, ಯುಪಿಎ ಬಜೆಟ್ ಕಾಪಿ' ಎಂಬ ಎರಡು ಡೈಲಾಗ್ ಬಹುತೇಕ ನಾಯಕರ ಬಾಯಿಯಿಂದ ಉದುರಿದ ಹೇಳಿಕೆಯಾಗಿದೆ. ಬಿಜೆಪಿ ನಾಯಕರು ಎಂದಿನಂತೆ ಅರುಣ್ ಜೇಟ್ಲಿ ಬಜೆಟ್ ಅನ್ನು ಹೊಗಳಿದರೆ, ವಿಪಕ್ಷಗಳು ತರಾಟೆ ತೆಗೆದುಕೊಂಡಿವೆ. ಈ ಸರಣಿಯಲ್ಲಿ ಪ್ರತಿಕ್ರಿಯೆಗಳನ್ನು ಓದಿ.
|
ದೂರದೃಷ್ಟಿ ಇಲ್ಲ, ಹಣ ದುಬ್ಬರ ಕಥೆ ಏನು?
ದೂರದೃಷ್ಟಿ ಇಲ್ಲ, ಹಣ ದುಬ್ಬರ ಕಥೆ ಏನು?, ಡೀಟೈಲ್ ಗಾಗಿ ಓದಿ ನಂತರ ಟ್ವೀಟ್ ಮಾಡ್ತೇನೆ ಎಂದು ಶಶಿ ತರೂರ್ ಹೇಳಿಕೆ
|
ಸೊನಾಲಿ ಜೇಟ್ಲಿ ಪುತ್ರಿ ಸಂಗೀತಾ ಜೇಟ್ಲಿ ಪತ್ನಿ ಪ್ರಶಂಸೆ
ಎಲ್ಲಾ ಜನಾಂಗ, ಎಲ್ಲಾ ಪ್ರಾಂತ್ಯಕ್ಕೂ ಹೊಂದುವ ಬಜೆಟ್ ಮಂಡಿಸಿದ್ದಾರೆ ಎಂದು ಅರುಣ್ ಜೇಟ್ಲಿ ಪುತ್ರಿ ಸೊನಾಲಿ ಜೇಟ್ಲಿ ಪ್ರಶಂಸಿದರೆ, ತಮ್ಮ ಪತಿ, ಮಹಿಳಾ ಮತ್ತ್ತು ಮಕ್ಕಳ ಅಭಿವೃದ್ಧಿ ಯೋಜನೆ ಪರ ಬಜೆಟ್ ನೀಡಿದ್ದಾರೆ ಎಂದು ಪತ್ನಿ ಸಂಗೀತಾ ಹೊಗಳಿದ್ದಾರೆ.
|
ಇದು ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ನೀಡಿದ ಪ್ರತಿಕ್ರಿಯೆ, ಇದು ಶ್ರೀಮಂತರ ಬಜೆಟ್, ಬಡವರಿಗೆ ಏನು ಇಲ್ಲ, ಬಾದಾಮಿ ತೋರಿಸಿ, ಕಡ್ಲೆಬೀಜ ನೀಡುತ್ತಿದ್ದಾರೆ.
|
ರಕ್ಷಣಾ ಕ್ಷೇತ್ರದಲ್ಲಿ ಎಫ್ ಡಿಐ ಆತಂಕ
ರಕ್ಷಣಾ ಕ್ಷೇತ್ರದಲ್ಲಿ 49% ಎಫ್ ಡಿಐ ಅವಕಾಶ ನೀಡಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಮಾಜಿ ರಕ್ಷಣಾ ಸಚಿವ ಎಕೆ ಅಂಟನಿ
|
ಯುಪಿಎ ಬಜೆಟ್ ಜೆರಾಕ್ಸ್ ಕಾಪಿ
ಇದು ಯುಪಿಎ ಬಜೆಟ್ ಜೆರಾಕ್ಸ್ ಕಾಪಿ ಎಂದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್
|
ಎನ್ ಸಿಪಿನಾಯಕ ನವಾಬ್ ಮಲ್ಲಿಕ್
ಎನ್ ಸಿಪಿನಾಯಕ ನವಾಬ್ ಮಲ್ಲಿಕ್ ಹೇಳಿಕೆ : ಇದು ಅದಾನಿ ಹಾಗೂ ಅಂಬಾನಿಗಾಗಿ ಮಾಡಿದ ಬಜೆಟ್, ಜನ ಸಾಮಾನ್ಯರಿಗಾಗಿ ಅಲ್ಲ.
|
ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ
ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಇದು ದೇಶ ಬಯಸಿದ ಬಜೆಟ್, ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಎಂದಿದ್ದಾರೆ.
|
ಕಾಂಗ್ರೆಸ್ಸಿಗ ಅಭಿಶೇಕ್ ಮನು ಸಿಂಘ್ಬಿ
ಕಾಂಗ್ರೆಸ್ಸಿಗ ಅಭಿಶೇಹ್ಕ್ ಮನು ಸಿಂಘ್ಬಿ ಹೇಳಿಕೆ: ರಾಷ್ಟ್ರ ಹೆಚ್ಚಿನದ್ದನ್ನು ಬಯಸಿತ್ತು, ಚುನಾವಣಾ ಭಾಷಣದ ಭರವಸೆಯೂ ಈಡೇರಿಲ್ಲ. ಬೆಟ್ಟ ಅಗೆದು ಇಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ.
|
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಮಾತನಾಡಿ, ಭಾರಿ ಘೋಷಣೆ ಕಡಿಮೆ ತೋರಿಕೆ, ದೂರದೃಷ್ಟಿ ಇಲ್ಲ.
|
ಕಾಂಗ್ರೆಸ್ಸಿನ ರಾಜೀವ್ ಶುಕ್ಲಾ ಪ್ರತಿಕ್ರಿಯೆ
ಕಾಂಗ್ರೆಸ್ಸಿನ ರಾಜೀವ್ ಶುಕ್ಲಾ ಮಾತನಾಡಿ, ಜನಸಾಮಾನ್ಯರಿಗೆ ಮಾರಕವಾಗುವ ಬಜೆಟ್ ಇದಾಗಿದೆ ಎಂದಿದ್ದಾರೆ.
|
ಗುಲಾಮ್ ನಬಿ ಅಜಾದ್ ಪ್ರತಿಕ್ರಿಯೆ
ಗುಲಾಮ್ ನಬಿ ಅಜಾದ್ ಪ್ರತಿಕ್ರಿಯೆ ಯುಪಿಎ ಯೋಜನೆಗಳನ್ನು ಮರು ನಾಮಕರಣ ಮಾಡಿ ಬಜೆಟ್ ನಲ್ಲಿ ಮಂಡಿಸಲಾಗಿದೆ.












Click it and Unblock the Notifications