'ಜಮ್ಮು-ಕಾಶ್ಮೀರದ ಶಾಂತಿಗೆ ಭಂಗ ತಂದವರು ನೇರವಾಗಿ ಜೈಲಿಗೆ'

ನವದೆಹಲಿ, ಅಕ್ಟೋಬರ್ 21: ಜಮ್ಮು-ಕಾಶ್ಮೀರದ ಶಾಂತಿ, ಅಭಿವೃದ್ಧಿಗೆ ಭಂಗ ತಂದರೆ ಅಂಥವರನ್ನು ಜೈಲಿಗೆ ಹಾಕಲಾಗುವುದು ಎಂದುಬಿಜೆಪಿ ನಾಯಕ ರಾಮ್ ಮಾಧವ್ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮೊದಲ ಬಾರಿಗೆ ಶ್ರೀನಗರದಲ್ಲಿ ಭಾಷಣ ಮಾಡಿದ ಅವರು, ಇದುವರೆಗೆ ಕಾಶ್ಮೀರದ ಕೆಲವು ಕುಟುಂಬಗಳಿಗೆ ಅಥವಾ ಕೆಲವು ನಾಯಕರಿಗೆ ಎಲ್ಲವನ್ನೂ ಮಾಡಲಾಗುತ್ತಿತ್ತು, ಆದರೆ ಈಗ ಏನಾಗುತ್ತಿದೆ, ಈ ಲಕ್ಷಾಂತರ ಕುಟುಂಬಗಳಿಗಾಗಿ ಮತ್ತು ಸಾಮಾನ್ಯ ಕಾಶ್ಮೀರಿಗಳಿಗಾಗಿ ರಾಜ್ಯ ನಡೆಯುತ್ತಿದೆ ಎಂದರು.

 ಶಾಂತಿ ಹಾಗೂ ಅಭಿವೃದ್ಧಿಗೆ ಎರಡು ಮಾರ್ಗಗಳು

ಶಾಂತಿ ಹಾಗೂ ಅಭಿವೃದ್ಧಿಗೆ ಎರಡು ಮಾರ್ಗಗಳು

ಜಮ್ಮು ಮತ್ತು ಕಾಶ್ಮೀರ ಶಾಂತಿ ಮತ್ತು ಅಭಿವೃದ್ಧಿಗೆ ಈಗ ಕೇವಲ ಎರಡು ಮಾರ್ಗಗಳಿವೆ ಅದಕ್ಕೆ ಯಾರೇ ಅಡ್ಡ ಬಂದರು ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು, ಇದಕ್ಕೆ ಭಾರತದಲ್ಲಿ ಅನೇಕ ಜೈಲುಗಳಿವೆ ರಾಮ್ ಮಾಧವ್ ಹೇಳಿದರು. 'ಶಾಂತಿ ಮತ್ತು ಸೌಹಾರ್ದತೆಗಾಗಿ 200-300 ಜನರನ್ನು ಜೈಲುಗಳಲ್ಲಿ ಇರಿಸಬೇಕಾಗಿ ಬಂದಲ್ಲಿ ನಾವು ಅವರನ್ನು ಜೈಲಿನಲ್ಲಿ ಇರಿಸಲು ಸೂಚಿಸುತ್ತೇವೆ ಎಂದರು.

 ಶಾಂತಿಗೆ ಭಂಗ ತರದೆ ರಾಜಕೀಯ ಮಾಡಬಹುದು

ಶಾಂತಿಗೆ ಭಂಗ ತರದೆ ರಾಜಕೀಯ ಮಾಡಬಹುದು

ನೀವು ಶಾಂತಿಗೆ ಭಂಗವಾಗದೆ ಇರುವಂತೆ ನಿಮ್ಮ ರಾಜಕೀಯವನ್ನು ಮಾಡಬಹುದು. ಜೈಲಿನೊಳಗೆ ಕುಳಿತ ಕೆಲವು ನಾಯಕರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ, ಜನರಿಗೆ ಗನ್ ತೆಗೆದುಕೊಂಡು ತಮ್ಮನ್ನು ತ್ಯಾಗ ಮಾಡಲು ಸೂಚಿಸುತ್ತಾರೆ. ಆದರೆ ಆ ನಾಯಕರು ಮೊದಲು ಮುಂದೆ ಬಂದು ತಮ್ಮನ್ನು ತ್ಯಾಗ ಮಾಡುವಂತೆ ನಾನು ಅವರನ್ನು ಕೇಳಿಕೊಳ್ಳುತ್ತೇನೆ ಎಂದು ರಾಮ್ ಮಾಧವ್ ತಿಳಿಸಿದರು.

 ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು

ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು

ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಶಾಂತಿ ನೆಲೆಸಿದಾಗ ಪ್ರವಾಸೋದ್ಯಮವೂ ತನ್ನಿಂತಾನೆ ಹೆಚ್ಚಾಗುತ್ತದೆ. ನಾನು ಇದನ್ನು ಎಲ್ಲೆಡೆ ಜನರಿಗೆ ಹೇಳುತ್ತೇನೆ, ನೀವು ರಜಾದಿನಕ್ಕೆ ಹೋಗಬೇಕಾದರೆ ಕಾಶ್ಮೀರಕ್ಕೆ ಭೇಟಿ ನೀಡಿ. ಇಡೀ ದೇಶವು ಕಾಶ್ಮೀರವನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದು ತಿಳಿಸಿದರು.

 ಫಾರೂಕ್ ಅಬ್ದುಲ್ಲಾ ಗೃಹಬಂಧನದಲ್ಲಿದ್ದಾರೆ

ಫಾರೂಕ್ ಅಬ್ದುಲ್ಲಾ ಗೃಹಬಂಧನದಲ್ಲಿದ್ದಾರೆ

ಕಾಶ್ಮೀರದಲ್ಲಿ ಹಲವು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿದರು ಕೂಡ ಮೂವರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮತ್ತು ಮೆಹಬೂಬಾ ಮುಫ್ತಿ ಅವರನ್ನು ಇನ್ನೂ ಬಂಧನದಲ್ಲಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+