ಸುನಂದಾ ಹತ್ಯೆ : ಸಿಟ್ ಪ್ರಶ್ನೆಗೆ ತರೂರ್ ಕೊಟ್ಟ ಉತ್ತರ
ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಅವರ ಪತಿ ಶಶಿ ತರೂರ್‌ರನ್ನು ವಿಶೇಷ ತನಿಖಾ ದಳದ ಸದಸ್ಯರು ಗುರುವಾರ ಸುಮಾರು ಐದು ಗಂಟೆಗಳ ಕಾಲ ಪ್ರಶ್ನೆಗೊಳಪಡಿಸಿದರು. ಈ ಬಾರಿ ಎಲ್ಲ ಪ್ರಶ್ನೆಗಳೂ ಐಪಿಎಲ್ ವಿವಾದದ ಕುರಿತಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಿಟ್ ಕೇಳಿದ ಪ್ರಶ್ನೆಗಳು : ಐಪಿಎಲ್ ಪಂದ್ಯಾವಳಿಯ ಕೊಚ್ಚಿ ಟಸ್ಕರ್ಸ್ ತಂಡದ ವ್ಯವಹಾರದಲ್ಲಿ ಸುನಂದಾ ಪುಷ್ಕರ್ ಅವರು ಮುಂಚೂಣಿಯಲ್ಲಿದ್ದರೆ? ಸುನಂದಾ ಅವರು ತಮ್ಮ ಪಾಲಿನ ಸ್ವೀಟ್ ಇಕ್ವಿಟಿ ಹಣ 75 ಕೋಟಿ ರು.ಗಳನ್ನು ಬಿಟ್ಟುಬಿಡಬೇಕೆಂದು ತರೂರ್ ಸಲಹೆ ನೀಡಿದ್ದರೇ? [ಅಮರ್ ಸಿಂಗ್ ಗೆಸಮನ್ಸ್]
ಸುನಂದಾ ಅವರು ಹಣ ಕೇಳಿದ್ದರೂ ಕೊಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದರೇ? ಐಪಿಎಲ್ ವಿವಾದವು ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿತ್ತೇ? ಸುನಂದಾ ಅವರು ನಿಮ್ಮ ಅಪರಾಧಗಳನ್ನು ಮುಚ್ಚಿಡುತ್ತಿದ್ದಾರೆಂದು ಪತ್ರಕರ್ತೆಯೋರ್ವರಿಗೆ ಹೇಳಿದ್ದೇಕೆ? [ಕುರುಡು ಕಾಂಚಾಣದ ಕೈವಾಡ]

ತರೂರ್ ಕೊಟ್ಟ ಉತ್ತರಗಳು : ಶಶಿ ತರೂರ್ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಸುನಂದಾ ಅವರ ಮೇಲೆ ಒತ್ತಡಗಳಿರಲಿಲ್ಲ. ಯಾವುದೇ ಸ್ವೀಟ್ ಇಕ್ವಿಟಿ ಹಣ ನೀಡಬೇಕೆಂಬ ಬಲವಂತವನ್ನೂ ಮಾಡಿರಲಿಲ್ಲ ಎಂದು ತರೂರ್ ಉತ್ತರಿಸಿದ್ದಾರೆ. [ಸಾಕ್ಷಿ ನಾಶ : ನಾಲ್ವರ ಮೇಲಿದೆ ಶಂಕೆ]
ಐಪಿಎಲ್ ಕುರಿತು ಇಬ್ಬರೂ ಸೇರಿ ನಿರ್ಧಾರ ಪಡೆದಿದ್ದೇವೆ. ಈ ಮಧ್ಯೆ ಯಾವುದೇ ವಿವಾದ ಉಂಟಾಗಿಲ್ಲ ಎಂದು ತರೂರ್ ತಿಳಿಸಿದ್ದಾರೆ. ಸುನಂದಾ ಅವರು ಐಪಿಎಲ್ ವ್ಯವಹಾರದಲ್ಲಿ ಬದಲಿ ಪ್ರತಿನಿಧಿಯಾಗಿರಲಿಲ್ಲ. ಅಲ್ಲದೆ, ಸ್ವೀಟ್ ಇಕ್ವಿಟಿ ಹಣವು ನನಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಸುನಂದಾ ಅವರನ್ನು ಬದಲಿ ಪ್ರತಿನಿಧಿ ಎಂದು ಕರೆಯಲು ಸಾಧ್ಯವಿಲ್ಲ. [ಬಟ್ಟೆ, ಶೂ ಒಯ್ದವರು ಯಾರು?]
ಐಪಿಎಲ್ ಕೇಂದ್ರಿತ ತನಿಖೆ : ಹತ್ಯೆ ಪ್ರಕರಣ ತನಿಖೆಯಲ್ಲಿ ಐಪಿಎಲ್ ವಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಅದು ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಪಿತೂರಿ ಸರಿಯಾಗಿ ಅರ್ಥವಾಗುತ್ತದೆ ಎಂದು ತಿಳಿಸಿದ್ದರು.












Click it and Unblock the Notifications