• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂದೇ ಭಾರತ್ ಮಿಷನ್ 3: ಸ್ವದೇಶಕ್ಕೆ ಮರಳಲು ಹೆಚ್ಚಿದ ಬೇಡಿಕೆ

|
Google Oneindia Kannada News

ದೆಹಲಿ, ಜೂನ್ 5: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ 3ನೇ ಹಂತಕ್ಕೆ ತಯಾರಿ ನಡೆದಿದೆ.

ಶುಕ್ರವಾರ ಸುಮಾರು 300 ಏರ್ ಇಂಡಿಯಾ ವಿಮಾನಗಳಿಗೆ ಟಿಕೆಟ್ ಬುಕ್ಕಿಂಗ್ ಅವಕಾಶ ಮಾಡಿಕೊಡಲಾಗಿದ್ದು, ವಿದೇಶದಲ್ಲಿರುವವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ವಂದೇ ಭಾರತ್ ಮಿಷನ್ 2: ಈ ಸಲ ಎಷ್ಟು ಮಂದಿ ಭಾರತಕ್ಕೆ ಬರಲಿದ್ದಾರೆ?ವಂದೇ ಭಾರತ್ ಮಿಷನ್ 2: ಈ ಸಲ ಎಷ್ಟು ಮಂದಿ ಭಾರತಕ್ಕೆ ಬರಲಿದ್ದಾರೆ?

ಮೂರನೇ ಹಂತ ಆಪರೇಷನ್‌ನಲ್ಲೂ ಹೆಚ್ಚಿನ ಪ್ರಯಾಣಿಕರು ಭಾರತಕ್ಕೆ ಹಿಂತಿರುಗಲು ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ನೀಡಿದ ಮೊದಲ ಎರಡು ಗಂಟೆಯಲ್ಲಿ ವೆಬ್‌ಸೈಟ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ 5 ಗಂಟೆಗೆ ಬುಕ್ಕಿಂಗ್ ತೆರೆಯಲಾಗಿದೆ. 6.08 ನಿಮಿಷಕ್ಕೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು. ಆದರೂ, ಆರಂಭ ಎರಡು ಗಂಟೆ ವೆಬ್‌ಸೈಟ್‌ನಲ್ಲಿ ತೊಂದರೆ ಉಂಟಾಗಿದೆ.

ಜೂನ್ 10 ರಿಂದ ಆರಂಭವಾಗುವ ವಂದೇ ಭಾರತ್ ಮಿಷನ್ 3 ಜುಲೈ 1 ರವರೆಗೂ ಕಾರ್ಯಾಚರಣೆ ಮಾಡಲಿದೆ. ಸುಮಾರು 300 ಏರ್ ಇಂಡಿಯಾ ವಿಮಾನಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಯುಕೆ ಮತ್ತು ಆಫ್ರಿಕಾಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಿದೆ.

ಮೇ 7 ರಿಂದ ಜೂನ್ 1ರ ವರೆಗೂ ನಡೆದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಸುಮಾರು 423 ಏರ್ ಇಂಡಿಯಾ ವಿಮಾನಗಳು ಕೆಲಸ ಮಾಡಿದ್ದು, ಒಟ್ಟು 58,867 ಜನ ಭಾರತೀಯರನ್ನು ವಾಪಸ್ ಕರೆದುಕೊಂಡು ಬರಲಾಗಿದೆ.

English summary
Air India opens bookings for around 300 flights to various countries including USA and UK under phase-3 of Vande Bharat Mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X