ಚಾಲನೆ ನೀಡಿದ ಮರುದಿನವೇ ಕೈಕೊಟ್ಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು!

ನವದೆಹಲಿ, ಫೆಬ್ರವರಿ 16: ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಮರುದಿನವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಕೈಕೊಟ್ಟಿದೆ.

ಮೊದಲ ಸಂಚಾರ ನಡೆಸಿದ್ದ ರೈಲು, ಶನಿವಾರ ಬೆಳಿಗ್ಗೆ ವಾರಣಾಸಿಯಿಂದ ದೆಹಲಿಗೆ ಮರಳುವ ವೇಳೆ ಕೆಟ್ಟುನಿಂತಿದೆ.

ಉತ್ತರ ಪ್ರದೇಶದ ವಾರಣಾಸಿಯಿಂದ 18 ಕಿ.ಮೀ. ದೂರದಲ್ಲಿರುವ ತುಡ್ಲಾ ಜಂಕ್ಷನ್ ಬಳಿ ಬೆಳಿಗ್ಗೆ 6.30ರಿಂದ ರೈಲು ನಿಂತಿದೆ. 'ಜಾನುವಾರು ಮೇಲೆ ರೈಲು ಹರಿದುಹೋಗಿ ಅಡ್ಡಿಯುಂಟಾಗಿರುವ ಸಾಧ್ಯತೆ ಇದೆ. ಇದು ವಾಣಿಜ್ಯ ಓಡಾಟದ ಸಂಚಾರವಾಗಿರಲಿಲ್ಲ. ರೈಲಿನ ವಾಣಿಜ್ಯ ಓಡಾಟವು ಫೆ.17ರಿಂದ ಆರಂಭವಾಗಲಿದೆ. ಅಡ್ಡಿಯನ್ನು ಸರಿಪಡಿಸಿದ ಬಳಿಕ ದೆಹಲಿಗೆ ಬೆಳಿಗ್ಗೆ 8.15ರ ಸುಮಾರಿಗೆ ರೈಲು ಹೊರಟಿದೆ' ಎಂದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ.

Vande Bharat Express breaks down returning to delhi from varanasi near tudla

ಆದರೆ ಅಲ್ಲಿನ ಎಂಜಿನಿಯರ್‌ಗಳು, ತಾಂತ್ರಿಕ ಕಾರಣದಿಂದ ರೈಲಿನ ಮೇಲಿನ ನಿಯಂತ್ರಣಗಳು ವೈಫಲ್ಯ ಕಂಡಿದ್ದು, ಸದ್ಯ ಸರಿಪಡಿಸಲಾಗದ ಸ್ಥಿತಿಯಲ್ಲಿದೆ. ರೈಲಿನಲ್ಲಿದ್ದ ಪತ್ರಕರ್ತರು ಮತ್ತು ಇತರರನ್ನು ಎರಡು ಬೇರೆ ರೈಲುಗಳಲ್ಲಿ ಕಳುಹಿಸಲಾಗಿದೆ. ಈ ರೈಲು ಭಾನುವಾರ ತನ್ನ ಮೊದಲ ವಾಣಿಜ್ಯಾತ್ಮಕ ಓಡಾಟ ನಡೆಸಬೇಕಿದೆ. ರೈಲಿನ ಕೆಲವು ಕೋಚ್‌ಗಳಲ್ಲಿ ವಿದ್ಯುತ್ ಪೂರೈಕೆ ಸಹ ಸಮರ್ಪಕವಾಗಿ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ವಾರಣಾಸಿಯಿಂದ ಹೊರಟಾಗಲೇ ರೈಲಿನಲ್ಲಿ ಅನುಮಾನಾಸ್ಪದ ಸದ್ದು ಹೊರಬಂದಿತ್ತು. ಟ್ರೈಲಿಂಗ್‌ ಕೋಚ್‌ಗಳಲ್ಲಿ ಒಂದು ಕೋಚ್‌ನ ಚಕ್ರ ಜಾಮ್ ಆಗಿತ್ತು. ನಾಲ್ಕು ಕೋಚ್‌ಗಳಿಗೆ ವಿದ್ಯುತ್ ಪೂರೈಕೆಯೇ ಆಗದ ಕಾರಣ ಸಂಪೂರ್ಣ ಸ್ಥಗಿತಗೊಂಡಿದ್ದವು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+