ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳ ಹೆಚ್ಚಿಸದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆ ಡ್ರಾಮಾ

|
Google Oneindia Kannada News

ನವದೆಹಲಿ, ಆಗಸ್ಟ್ 18: ಕೊರೊನಾ ವೈರಸ್ ಸೋಂಕಿನ ಸಂಕಷ್ಟದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಅನೇಕರು ವೇತನ ಕಡಿತದ ಅನಿವಾರ್ಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಂಪೆನಿಗಳೂ ವಹಿವಾಟಿನಲ್ಲಿ ಹಿನ್ನಡೆ ಉಂಟಾಗಿರುವುದರಿಂದ ಉದ್ಯೋಗ ಕಡಿತ ಮತ್ತು ವೇತನ ಕಡಿತಗಳನ್ನು ಮಾಡುತ್ತಿವೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವೇತನ ಸಿಗುವುದೇ ಕಷ್ಟ ಎನ್ನುವಂತಾಗಿರುವಾಗ ಉದ್ಯೋಗ ಬಡ್ತಿ ಮತ್ತು ವೇತನ ಹೆಚ್ಚಳದ ಪ್ರಕ್ರಿಯೆಗಳಂತೂ ಹೆಚ್ಚಿನ ಕಂಪೆನಿಗಳಲ್ಲಿ ಕನಸಾಗಿದೆ. ಇದರಿಂದಾಗಿ ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಬೆಂಗಳೂರು ಏರ್‌ಪೋರ್ಟ್‌ಲ್ಲಿ ರೈಲ್ವೆ ಲೋಕೋಪೈಲಟ್ ಅಪಹರಣ, ದರೋಡೆಬೆಂಗಳೂರು ಏರ್‌ಪೋರ್ಟ್‌ಲ್ಲಿ ರೈಲ್ವೆ ಲೋಕೋಪೈಲಟ್ ಅಪಹರಣ, ದರೋಡೆ

ತನಗೆ ವೇತನದಲ್ಲಿ ಏರಿಕೆ ಮಾಡದ ಬಾಸ್ ವಿರುದ್ಧ ಆಕ್ರೋಶಗೊಂಡ ನಿರ್ಮಾಣ ಸಂಸ್ಥೆಯೊಂದರ ಉದ್ಯೋಗಿ, ಸಾರ್ವಜನಿಕವಾಗಿ ತನಗೆ ಕಪಾಳಮೋಕ್ಷ ಮಾಡಿದ ಘಟನೆ ಮತ್ತು ವೇತನ ಹೆಚ್ಚಿಸದ ಕೋಪವನ್ನು ತಣಿಸಿಕೊಳ್ಳಲು ದರೋಡೆಯ ನಾಟಕವಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮುಂದೆ ಓದಿ...

ದರೋಡೆ ಮಾಡಿ ತಾನೇ ಮಾಹಿತಿ ನೀಡಿದ

ದರೋಡೆ ಮಾಡಿ ತಾನೇ ಮಾಹಿತಿ ನೀಡಿದ

ದರೋಡೆ ಮಾಡಿದ ವ್ಯಕ್ತಿ ವಿಜಯ್ ಪ್ರತಾಪ್ ದೀಕ್ಷಿತ್ ಬಳಿಕ ತಾನೇ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸುದೀರ್ಘ ಸಮಯದಿಂದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೂ ಸರಿಯಾಗಿ ವೇತನ ಹೆಚ್ಚಳ ಮಾಡದ ಕಾರಣ ಸೇಡು ತೀರಿಸಿಕೊಳ್ಳಲು ಆತ ಹೀಗೆ ಮಾಡಿದ್ದಾನೆ.

10 ಲಕ್ಷ ರೂ ದರೋಡೆ

10 ಲಕ್ಷ ರೂ ದರೋಡೆ

ಫರಿದಾಬಾದ್‌ನ ಬಾರಾ ಪುಲ್ಲಾ ಫ್ಲೈಓವರ್ ಸಮೀಪ ದರೋಡೆ ನಡೆದಿರುವ ಬಗ್ಗೆ ಆಗಸ್ಟ್ 13ರಂದು ಪೊಲೀಸರಿಗೆ ದೀಕ್ಷಿತ್ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಉದ್ಯೋಗದಾತ ನಿತಿನ್ ಅವರಿಂದ 2 ಲಕ್ಷ ರೂ ನಗದು ಮತ್ತು 10 ಲಕ್ಷ ರೂ.ನ ಚೆಕ್ ಪಡೆದುಕೊಂಡಿದ್ದು, ಅವರ ಸೂಚನೆಯಂತೆ ನಗದು ಹಣವನ್ನು ಕಂಪೆನಿಯ ಮ್ಯಾನೇಜರ್ ರಮೇಶ್ ಭಾಟಿಯಾ ಅವರಿಗೆ ಒಪ್ಪಿಸಿದ್ದಾಗಿ ವಿಚಾರಣೆ ವೇಳೆ ವಿವರಿಸಿದ್ದಾನೆ.

ಫಿನಾಯಿಲ್ ಮಾರುವ ನೆಪದಲ್ಲಿ ದರೋಡೆ; ದಾವಣಗೆರೆ ಪೊಲೀಸರಿಂದ ಅಲರ್ಟ್ಫಿನಾಯಿಲ್ ಮಾರುವ ನೆಪದಲ್ಲಿ ದರೋಡೆ; ದಾವಣಗೆರೆ ಪೊಲೀಸರಿಂದ ಅಲರ್ಟ್

ಬೆದರಿಸಿ ದರೋಡೆ ಮಾಡಿದ್ದ ಮೂವರು

ಬೆದರಿಸಿ ದರೋಡೆ ಮಾಡಿದ್ದ ಮೂವರು

ಬಳಿಕ ಮಾಡೆಲ್ ಟೌನ್‌ನಲ್ಲಿ ಮಹೇಶ್ ಎಂಬುವವರಿಗೆ ಚೆಕ್ ನೀಡಿ ಅವರಿಂದ 10 ಲಕ್ಷ ರೂ ನಗದು ಪಡೆದುಕೊಂಡು, ಅದನ್ನು ಬ್ಯಾಗ್‌ನಲ್ಲಿರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಸಂಜೆ ಆರು ಗಂಟೆ ಸುಮಾರಿಗೆ ಫರೀದಾಬಾದ್‌ಗೆ ಮರಳುವ ವೇಳೆ ಸರಾಯ್ ಕಾಳೆ ಖಾನ್ ಪ್ರದೇಶದಲ್ಲಿ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಆಯುಧ ತೋರಿಸಿ ಅವರ ಬೈಕ್ ಏರಿದ್ದ. ಮತ್ತೊಂದು ಬೈಕ್‌ನಲ್ಲಿ ಬಂದ ಇನ್ನಿಬ್ಬರು ಕೂಡ ಆತನನ್ನು ಫಾಲೋ ಮಾಡಿದ್ದರು. ಬಾರಾ ಪುಲ್ಲಾ ಫ್ಲೈ ಓವರ್ ಸಮೀಪ ಬಂದಾಗ ಮೂವರು ವ್ಯಕ್ತಿಗಳು ಸೇರಿ ದೀಕ್ಷಿತ್ ಅವರ ಚೀಲದಲ್ಲಿದ್ದ 10 ಲಕ್ಷ ರೂ ನಗದು ಮತ್ತು ಆತನ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾಗಿ ತಿಳಿಸಿದ್ದ.

ವಿರೋಧಾಭಾಸದ ಹೇಳಿಕೆ

ವಿರೋಧಾಭಾಸದ ಹೇಳಿಕೆ

ದೀಕ್ಷಿತ್ ನೀಡಿದ್ದ ದೂರಿನನ್ವಯ ಐಪಿಸಿ ಸೆಕ್ಷನ್‌ಗಳಾದ 392 ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಈ ವೇಳೆ ದೀಕ್ಷಿತ್‌ನ ಬಾಸ್‌ನನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು. ಅಪರಾಧ ನಡೆದ ಸ್ಥಳಕ್ಕೆ ದೀಕ್ಷಿತ್‌ನನ್ನು ಕರೆದುಕೊಂಡು ಹೋಗಿ ಪ್ರಕರಣದ ಮರುಸೃಷ್ಟಿ ಮಾಡುವ ವೇಳೆ ದೀಕ್ಷಿತ್ ತನ್ನ ಹೇಳಿಕೆಗಳನ್ನು ಬದಲಿಸಲು ಆರಂಭಿಸಿದ್ದ. ಆತನ ಹೇಳಿಕೆಗಳಲ್ಲಿ ವಿರೋಧಾಭಾಸಗಳನ್ನು ಗಮನಿಸಿದ ಪೊಲೀಸರನ್ನು ಮತ್ತೆ ಆತನನ್ನು ವಿಚಾರಣೆಗೆ ಒಳಪಡಿಸಿದರು. ಕೊನೆಗೆ ಕಂಗಾಲಾದ ದೀಕ್ಷಿತ್, ಬಾಸ್ ನಿತಿನ್ ಮೇಲೆ ಸೇಡು ತೀರಿಸಿಕೊಳ್ಳಲು ಈ ದರೋಡೆ ನಾಟಕವಾಡಿದ್ದಾಗಿ ತಿಳಿಸಿದ್ದಾನೆ.

ಸಾರ್ವಜನಿಕವಾಗಿ ಹೊಡೆದಿದ್ದ ಮಾಲೀಕ

ಸಾರ್ವಜನಿಕವಾಗಿ ಹೊಡೆದಿದ್ದ ಮಾಲೀಕ

ಈ ಕಂಪೆನಿಯಲ್ಲಿ ಸುದೀರ್ಘ ಸಮಯದಿಂದ ಕೆಲಸ ಮಾಡುತ್ತಿದ್ದರೂ ಕಂಪೆನಿ ಮಾಲೀಕ ಒಮ್ಮೆಯೂ ವೇತನ ಹೆಚ್ಚಳ ಮಾಡಿರಲಿಲ್ಲ. ಆತನ ಸಂಪಾದನೆ ದೈನಂದಿನ ಬದುಕಿಗೆ ಸಾಲುತ್ತಿರಲಿಲ್ಲ. ಒಮ್ಮೆ ಕಂಪೆನಿ ಮಾಲೀಕ ಸಾರ್ವಜನಿಕವಾಗಿ ಕೆನ್ನೆಗೆ ಹೊಡೆದು ಬೀಳುವಂತೆ ಮಾಡಿದ್ದ. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ದೀಕ್ಷಿತ್, ಕಂಪೆನಿಯ ಹಣವನ್ನು ಲಪಟಾಯಿಸಿ ದರೋಡೆಯ ನಾಟಕವಾಡಿದ್ದ. ಆತ ದೋಚಿದ್ದ ಸಂಪೂರ್ಣ ಹತ್ತು ಲಕ್ಷ ರೂ ಹಣವನ್ನು ಆತನ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

English summary
A man has staged a robbery to take revenge against his employer for not getting salary hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X