ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನಾವೋ ಅತ್ಯಾಚಾರ; ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಉತ್ತರ ಪ್ರದೇಶದ ಉನ್ನಾವೋದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ದೆಹಲಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಐಪಿಸಿ ಕಲಂ 376 (2) ಪ್ರಕಾರ ಕುಲದೀಪ್ ಸಿಂಗ್ ಸೆಂಗರ್‌ ಸಾಯುವವರೆಗೂ ಜೈಲಿನಲ್ಲಿ ಕೊಳೆಯಬೇಕಾಗಿದ್ದು, ದೆಹಲಿಯ ತೀಸ್ ಹಜಾರ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಲ್ಲದೇ ಸೆಂಗರ್, ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರುಪಾಯಿ ಪರಿಹಾರ ನೀಡಬೇಕು ಹಾಗೂ ವಿಚಾರಣೆಯ ವೆಚ್ಚ 15 ಲಕ್ಷ ರುಪಾಯಿಯನ್ನು ಪಾವತಿಸಬೇಕು ಎಂದು ತೀರ್ಪು ನೀಡಿದೆ.

Unnao Rape Case: Life Imprisonment For MLA Kuldeep Singh Sengar

ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿದ ನಂತರ, ಕುಲದೀಪ್ ಸಿಂಗ್ ಸೆಂಗರ್ ಪ್ರಕರಣದಲ್ಲಿ ಅಪರಾಧಿಯಾಗಿದ್ದಾನೆ ಎಂದು ಕಳೆದ ಮಂಗಳವಾರ ಆದೇಶ ನೀಡಿ, ಶಿಕ್ಷೆ ಘೋಷಣೆಯನ್ನು ಡಿ.20 ಕ್ಕೆ ಮುಂದೂಡಿತ್ತು. ನ್ಯಾಯಾಲಯಕ್ಕೆ ಇಂದು ಬೆಳಿಗ್ಗೆ 12 ಗಂಟೆಗೆ ಹಾಜರಾದ ಕುಲದೀಪ್ ಹಾಗೂ ಸಂತ್ರಸ್ತೆಯ ಕುಟುಂಬದವರು ಸುಮಾರು ಒಂದು ಗಂಟೆ ಕೋರ್ಟ್ ಹಾಲ್‌ನಲ್ಲಿ ಇದ್ದರು. ಈ ವೇಳೆ ಸಂತ್ರಸ್ತೆಯ ಪರ ವಕೀಲರು, 'ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು' ಎಂದು ಮನವಿ ಮಾಡಿದರು. ಸೆಂಗರ್ ಪರ ವಕೀಲರು, 'ಸೆಂಗರ್ ಕುಟುಂಬಕ್ಕೆ ಯಾರೂ ದಿಕ್ಕು ಇಲ್ಲ. ಹೀಗಾಗಿ ನ್ಯಾಯಾಲಯ ದಯೆ ತೋರಿಸಬೇಕು' ಎಂದು ಮನವಿ ಮಾಡಿದರು. ಮನವಿ ಆಲಿಸಿದ ನ್ಯಾಯಾಧೀಶರು, ಮಧ್ಯಾಹ್ನ 2 ಗಂಟೆಗೆ ತೀರ್ಪು ಪ್ರಕಟಿಸಿದರು. ತೀರ್ಪು ಪ್ರಕಟಿಸುವಾಗ ಸೆಂಗರ್ ಕಣ್ಣೀರು ಹಾಕುತ್ತಿದ್ದ.

English summary
Unnao Rape Case: Life Imprisonment For MLA Kuldeep Singh Sengar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X