• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಶಿ ತರೂರ್ ಗೆ ಎದೆನೋವು; ಆಸ್ಪತ್ರೆಯಿಂದ ಡಿಸ್ಚಾರ್ಜ್

By Srinath
|

ನವದೆಹಲಿ, ಜ.17: ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಶಶಿ ತರೂರ್ ಅವರು ಇಂದು ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತರೂರ್ ಅವರನ್ನು ನವದೆಹಲಿಯ AIIMS ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಇದೀಗ ಅವರು ಅಪಾಯದಿಂದ ಪಾರಾಗಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ಮಹಾ ಸಂಸ್ಥೆಯ ಹೃದ್ರೋಗ ತಜ್ಞರು ತಿಳಿದಿದ್ದಾರೆ. ತಾಜಾ ವರದಿಗಳ ಪ್ರಕಾರ ಆಸ್ಪತ್ರೆಯಿಂದ ತರೂರ್ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ರಾತ್ರಿ ಸಚಿವ ತರೂರ್ ಅವರ ಪತ್ನಿ 52 ವರ್ಷದ ಸುನಂದಾ ಪುಷ್ಕರ್ ಅವರ ಶವ ದೆಹಲಿಯ ಲೀಲಾ ಪ್ಯಾಲೆಸ್ ಹೋಟೆಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

ಅಂದಹಾಗೆ ಮೃತ ಸುನಂದಾರ ಶವಪರೀಕ್ಷೆಯನ್ನು ಇಂದು ಏಮ್ಸ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಸುನಂದಾ ಮತ್ತು ಶಶಿ ಅವರ ಮನೆಗೆ ಬಣ್ಣ ಬಳಿಯುವ ಕಾರ್ಯ ನಡೆದಿತ್ತು. ಸುನಂದಾಗೆ ಪೈಂಟ್ ಅಲರ್ಜಿ ಇದ್ದುದ್ದರಿಂದ ಅವರೊಟ್ಟಿಗೆ ತಾನು ಲೀಲಾ ಪ್ಯಾಲೆಸ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದಾಗಿ ಸಚಿವ ಶಶಿ ತಿಳಿಸಿದ್ದಾರೆ.

2 ದಿನಗಳಿಂದ ಸುನಂದಾ ಸರಿಯಾಗಿ ಊಟ ಮಾಡಿರಲಿಲ್ಲ. ಸರಿಯಾಗಿ ನಿದ್ದೆ ಬರುತ್ತಿಲ್ಲವೆಂದು ನಿದ್ರೆ ಮಾತ್ರೆ ತೆಗೆದುಕೊಂಡಿದ್ದು ಸಾವಿಗೆ ಕಾರಣವಾಗಿರಬಹುದು. ಜತೆಗೆ ಕುಡಿತ ಮತ್ತು ಸ್ಮೋಕಿಂಗ್ ಸಹ ಮಾಡಿದ್ದರು ಎಂದು ಕುಟುಂಬದ ನಿಕಟವರ್ತಿಗಳು ತಿಳಿಸಿದ್ದಾರೆ. ( ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು )

ಅಂತ್ಯಸಂಸ್ಕಾರ ಸಂಜೆ 5.30ಕ್ಕೆ ದೆಹಲಿಯಲ್ಲಿ:

ಶಶಿ ತರೂರ್ ಮತ್ತು ಸುನಂದಾರ ಮದುವೆಯಾಗಿ ಇನ್ನೂ 7 ವರ್ಷ ತುಂಬಿಲ್ಲವಾದ್ದರಿಂದ ಐಪಿಸಿ ಸೆಕ್ಷನ್ 176ರ ಅಡಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಶುಕ್ರವಾರ ರಾತ್ರಿ ನವದೆಹಲಿಯ ಲೀಲಾ ಹೋಟೆಲ್‌ನಲ್ಲಿ ಸಾವನ್ನಪ್ಪಿದ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ 5.30ಕ್ಕೆ ದೆಹಲಿಯಲ್ಲಿ ನೆರವೇರಲಿದೆ.

English summary
Shashi Tharoor admitted to AIIMS for complaining of chest pain. The Union minister of State for Human Resource Development Shashi Tharoor's wife Sunanda Pushkar was found dead at The Leela Hotel, Delhi on Jan17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X