ವಿಶ್ವಾಸಮತ: ಸುಪ್ರೀಂಕೋರ್ಟ್ ಕದ ತಟ್ಟಿದ ಪಕ್ಷೇತರ ಶಾಸಕರು
Recommended Video
ನವದೆಹಲಿ, ಜುಲೈ 21: ಇಬ್ಬರು ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ವಿಶ್ವಾಸಮತ ಯಾಚನೆ ಕುರಿತು ತುರ್ತು ಅರ್ಜಿಯೊಂದನ್ನು ಹಾಕಿದ್ದಾರೆ.
ನಾಳೆ (ಸೋಮವಾರ) ಸಂಜೆ 5 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪಕ್ಷೇತರ ಶಾಸಕರು ಸುಪ್ರೀಂ ಮೊರೆ ಹೋಗಿದ್ದಾರೆ.
ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದ ಪಕ್ಷೇತರ ಶಾಸಕರು, ಅತೃಪ್ತ ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾದ ಕೂಡಲೇ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿ ಪಾಳಯ ಸೇರಿದ್ದಾರೆ. ಪ್ರಸ್ತುತ ಇಬ್ಬರೂ ಶಾಸಕರು ಮುಂಬೈನಲ್ಲಿದ್ದಾರೆ ಎನ್ನಲಾಗಿದೆ.

ಗುರುವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಆದರೆ ಎರಡು ದಿನ ಕಲಾಪ ನಡೆದರೂ ಸಹ ಮತಯಾಚನೆ ಆಗಿಲ್ಲ, ಹಾಗಾಗಿ ನಾಳೆಯೇ ವಿಶ್ವಾಸಮತ ಅಂಗೀಕಾರ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಪಕ್ಷೇತರರು ಸುಪ್ರೀಂಗೆ ಅರ್ಜಿ ಹಾಕಿಕೊಂಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರು ಸಹ ಸಿಎಂ ಅವರಿಗೆ ಸೋಮವಾರ ವಿಶ್ವಾಸಮತ ಯಾಚನೆ ಮಾಡಿರೆಂದು ಸೂಚನೆ ನೀಡಿದ್ದಾರೆ. ಈಗ ಸುಪ್ರೀಂಕೋರ್ಟ್ ಸಹ ಸಿಎಂ ಅವರಿಗೆ ನಿರ್ದೇಶನ ನೀಡಿದಲ್ಲಿ ನಾಳೆಯೇ ವಿಶ್ವಾಸಮತ ಯಾಚನೆ ಆಗಿಬಿಡಲಿದೆ.












Click it and Unblock the Notifications