ತ್ರಿವರ್ಣ ಧ್ವಜ ವಿನ್ಯಾಸಕಾರನ ಜನ್ಮದಿನ ನೆನಪಿಸಿಕೊಂಡ ಟ್ವಿಟ್ಟಿಗರು

ತ್ರಿವರ್ಣ ಧ್ವಜ ಎಂದರೆ ಭಾರತದ ಪ್ರತಿಯೊಬ್ಬ ದೇಶಭಕ್ತನೂ ರೋಮಾಂಚನಗೊಳ್ಳುತ್ತಾನೆ. ಅದನ್ನು ನೋಡುತ್ತಿದ್ದಂತೆಯೇ ದೇಶಪ್ರೇಮ ಉಕ್ಕುತ್ತದೆ. ಆದರೆ ಭಾರತೀಯತೆಯ ಪ್ರತೀಕವಾದ ಈ ಧ್ವಜವನ್ನು ವಿನ್ಯಾಸಗೊಳಿಸಿದ್ದು ಯಾರು ಎಂಬ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಆಂಧ್ರಪ್ರದೇಶದ ಮಚಲಿಪಟ್ಟಣದ ಹಳ್ಳಿಯೊಂದರಲ್ಲಿ ಜನಿಸಿದ ಪಿಂಗಳಿ ವೆಂಕಯ್ಯ ಅವರೇ ನಮ್ಮ ತ್ರಿವರ್ಣ ಧ್ವಜದ ವಿನ್ಯಾಸಕಾರರು.

ಇಂದು ಅವರ ಜನ್ಮ ದಿನ. ಆಗಸ್ಟ್ 2, 1876 ರಲ್ಲಿ ಜನಿಸಿದ ವೆಂಕಯ್ಯ, ಪ್ರಾಥಮಿಕ ಶಿಕ್ಷಣಗಳನ್ನು ಮಚಲಿಪಟ್ಟಣದಲ್ಲಿ ಮುಗಿಸಿ, ನಂತರ ಉನ್ನತ ಶಿಕ್ಷಣಕ್ಕಾಗಿ ಕೋಲಂಬೋಕ್ಕೆ ತೆರಳಿದರು.

ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.

ವಜ್ರಗಳ ಗಣಿಗಾರಿಕೆಯಲ್ಲಿ ಪರಿಣಿತಿ ಪಡೆದಿದ್ದ ಕಾರಣಕ್ಕೆ ಪಿಂಗಳಿ ವೆಂಕಯ್ಯ ಅವರನ್ನು ಡೈಮಂಡ್ ವೆಂಕಯ್ಯ ಎಂದೂ, ಹತ್ತಿಗೆ ಸಂಬಂಧಿಸಿದ ಅಧ್ಯಯನದಲ್ಲೂ ಅಪಾರ ಜ್ಞಾನ ಹೊಂದಿದ್ದ ಕಾರಣಕ್ಕೆ ಕಾಟನ್ ವೆಂಕಯ್ಯ ಎಂದೂ ಅವರನ್ನು ಕರೆಯುತ್ತಿದ್ದರು.

2009 ರಲ್ಲಿ ಇವರಿಗೆ ಗೌರವ ನೀಡುವುದಕ್ಕಾಗಿ, ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನೂ ಬಿಡುಗಡೆಮಾಡಲಾಗಿತ್ತು. 1963 ರ ಜುಲೈ 4 ರಂದು ಅವರು ಇಹಲೋಕ ತ್ಯಜಿಸಿದರು.
ಇಂದು ಅವರ ಜನ್ಮ ದಿನ. ಟ್ವಿಟ್ಟಿಗರು ಮರೆಯದೇ ಪಿಂಗಳಿ ಅವರನ್ನು ನೆನಪಿಸಿಕೊಂಡು, ಅವರ ನೀಡಿದ ಕೊಡುಗೆಗಾಗಿ ಕೃತಜ್ಞತೆ ಅರ್ಪಿಸಿದ್ದಾರೆ.

ಅವರು ಕೇವಲ ಸ್ವಾತಂತ್ರ್ಯ ಹೊರಾಟಗಾರರಲ್ಲ!

"ಪಿಂಗಳಿ ವೆಂಕಯ್ಯ ಅವರ ಜನ್ಮದಿನದಂದು ಅವರನ್ನು ನೆನಪಿಸಿಕೊಳ್ಳೋಣ. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ. ಬದಲಾಗಿ ಕಲಾವಿದ. ನಮ್ಮ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿದ್ದಾರೆ.

ಧ್ವಜ ವಿನ್ಯಾಸಕಾರ

ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರನ್ನು ಅವರ ಜಯಂತಿಯಂದು ನೆನಪಿಸಿಕೊಳ್ಳೋಣ ಎಂದು ಕೇಮದ್ರ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

ತ್ರಿವರ್ಣ ಧ್ವಜವೇ ಚೆಂದ

ಪಿಂಗಳಿ ವೆಂಕಯ್ಯ ಅವರಿಗೆ ನಮನಗಳು. ನಮ್ಮ ತ್ರಿವರ್ಣ ಧ್ಜವನ್ನು ವಿನ್ಯಾಸಗೊಳಿಸುವ ಮುಲಕ ದೇಶಭಕ್ತಿ ಮತ್ತು ಹೆಮ್ಮೆಯನ್ನು ಅವರು ಹೆಚ್ಚಿಸಿದ್ದಾರೆ. ಎಲ್ಲಕ್ಕಿಂತ ನಮ್ಮ ತ್ರಿವರ್ಣ ಧ್ವಜವೇ ಚೆಂದ ಎಂದು ಶ್ರದ್ಧಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ರಾಧಾ ಮೋಹನ್ ಸಿಂಗ್

ಸ್ವಾತಂತ್ರ್ಯ ಹೋರಾಟಗಾರ ಮತ್ತು ನಮ್ಮ ತ್ರಿವರ್ಣಧ್ವಜದ ಹಿಂದಿನ ಶಕ್ತಿ ಪಿಂಗಳಿ ವೆಂಕಯ್ಯ ಅವರಿಗೆ ಅವರ ಜನ್ಮದಿನದಂದು ನನ್ನ ನಮನಗಳು ಎಂದು ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅವರೇ ನಮ್ಮ ದೇಶದ ನಿಜವಾದ ಹೀರೋ

ನಾವು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುತ್ತೇವೆ. ಆದರೆ ಅದನ್ನು ವಿನ್ಯಾಸಗೊಳಿಸುವಲ್ಲಿ ಶ್ರಮಿಸಿದ ವ್ಯಕ್ತಿಯನ್ನು ಮರೆತುಬಿಟ್ಟಿದ್ದೇವೆ. ಅದನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ನಮ್ಮ ದೇಶದ ನಿಜವಾದ ಹೀರೋ ಎಂದು ವೆಂಕಟೇಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+