ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೋಲ್‌ಗಳೇ ನನಗೆ ಪಾಠ ಹೇಳಿಕೊಟ್ಟಿವೆ; ರಾಹುಲ್

|
Google Oneindia Kannada News

ನವದೆಹಲಿ, ಫೆಬ್ರುವರಿ 13: ನನ್ನ ಅಜ್ಜಿ ಹಾಗೂ ತಂದೆ ತಮ್ಮ ನಿಲುವಿಗೆ ಬದ್ಧರಾಗಿ ನಿಂತಿದ್ದರಿಂದ ಕೊಲ್ಲಲ್ಪಟ್ಟರು ಎಂಬುದು ನನಗೆ ಹೆಮ್ಮೆಯ ವಿಷಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧದ ಅಣಕದ ಟ್ರೋಲ್ ಗಳ ಕುರಿತು ಮಾತನಾಡಿರುವ ಅವರು, ನನ್ನನ್ನು ನಾಯಕನಾಗಿ ಪರಿಷ್ಕರಿಸಿಕೊಳ್ಳಲು ಟ್ರೋಲ್ ಗಳು ಸಹಾಯ ಮಾಡಿವೆ ಎಂದು ಹೇಳಿಕೊಂಡಿದ್ದಾರೆ. ಟ್ರೋಲ್ ಗಳಿಂದಲೇ ನಾನು ಪಾಠ ಕಲಿತಿದ್ದೇನೆ ಎಂದಿದ್ದಾರೆ. ಮುಂದೆ ಓದಿ...

 ಭಾರತದ ಭಾಗ ಚೀನಾ ಪಾಲಾಗಿದೆ; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ಭಾರತದ ಭಾಗ ಚೀನಾ ಪಾಲಾಗಿದೆ; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

 ಅಜ್ಜಿ, ತಂದೆ ಕುರಿತು ರಾಹುಲ್ ಮಾತು

ಅಜ್ಜಿ, ತಂದೆ ಕುರಿತು ರಾಹುಲ್ ಮಾತು

ಚಿಕಾಗೋದ ದೀಪೇಶ್ ಚಕ್ರವರ್ತಿ ವಿಶ್ವವಿದ್ಯಾಲಯದ ವರ್ಚುಯಲ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, "ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಜ್ಜಿ ಹಾಗೂ ತಂದೆ ಗಟ್ಟಿಯಾದ ನಿಲುವು ಹೊಂದಿದ್ದರು. ಈ ಕಾರಣಕ್ಕೆ ಅವರು ಹುತಾತ್ಮರಾದ ಬಗ್ಗೆ ನನಗೆ ಹೆಮ್ಮೆಯಿದೆ. ನನಗೆ ಅದು ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯಿತು. ಇದು ನನ್ನ ನೆಲೆಯನ್ನು ಹಾಗೂ ಏನು ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿತು ಎಂದು ಹೇಳಿದ್ದಾರೆ.

 ಕುಟುಂಬ ರಾಜಕಾರಣದ ಕುರಿತು ಹೇಳಿಕೆ

ಕುಟುಂಬ ರಾಜಕಾರಣದ ಕುರಿತು ಹೇಳಿಕೆ

ಕುಟುಂಬ ರಾಜಕಾರಣದ ಕುರಿತು ಟೀಕೆಗಳ ಕುರಿತು ಮಾತನಾಡಿದ ಅವರು, ನಮ್ಮ ಕುಟುಂಬದವರು ಪ್ರಧಾನ ಮಂತ್ರಿಯಾಗಿ ಮೂವತ್ತು ವರ್ಷಗಳು ಕಳೆದಿವೆ. ಇದರಲ್ಲಿ ಕುಟುಂಬ ರಾಜಕೀಯವೇನು ಬಂತು? ಎಂದು ಹೇಳಿದ್ದಾರೆ.

"ಆಲೋಚನೆಗಳಲ್ಲೂ ಬದಲಾವಣೆ"

ತಮ್ಮ ರಾಜಕೀಯ ಪಯಣದ ಕುರಿತು ಮಾತು ಹಂಚಿಕೊಂಡ ಅವರು, "ಈ ರಾಜಕೀಯ ಪಯಣದಲ್ಲಿ ಇಷ್ಟು ದಿನದಲ್ಲಿ ನನ್ನ ಆಲೋಚನೆಗಳಲ್ಲೂ ಸಾಕಷ್ಟು ಬದಲಾವಣೆಯಾಗಿವೆ. ಏಕೆ ರಾಜಕೀಯಕ್ಕೆ ಬಂದೆ ಎಂಬುದನ್ನು 15-20 ವರ್ಷಗಳ ಹಿಂದೆ ಕೇಳಿದ್ದರೆ, ಇಂದಿನ ನನ್ನ ಉತ್ತರಕ್ಕಿಂತ ಅದು ತುಂಬಾ ಭಿನ್ನವಾಗಿರುತ್ತಿತ್ತು ಎಂದು ಹೇಳಿದ್ದಾರೆ.

"ಟ್ರೋಲ್‌ಗಳಿಂದ ನಾನು ಪಾಠ ಕಲಿತಿದ್ದೇನೆ"

ಬೇರೆ ಆಲೋಚನೆಗಳು ನನ್ನ ಆಲೋಚನೆಗಳ ಮೇಲೆ ದಾಳಿ ನಡೆಸಿದರೆ, ನನ್ನನ್ನು ನಾನು ಮತ್ತೆ ಪರಿಷ್ಕರಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ಟ್ರೋಲ್ ಗಳು ನನ್ನನ್ನು ತಿದ್ದಿಕೊಳ್ಳಲು ಸಹಾಯ ಮಾಡಿವೆ. ನಾನು ಏನು ಮಾಡಬೇಕು ಎಂಬುದನ್ನು ಟ್ರೋಲ್ ಗಳು ಹೇಳಿಕೊಟ್ಟಿವೆ. ಟ್ರೋಲ್ ಗಳು ನನಗೆ ಮಾರ್ಗದರ್ಶನ ನೀಡಿವೆ. ನಾನು ಹೇಗೆ, ಯಾವುದರ ಪರ ನಿಲ್ಲಬೇಕು ಎಂಬುದನ್ನು ಹೇಳಿಕೊಟ್ಟಿವೆ ಎಂದು ಹೇಳಿದರು.

English summary
The trolls help me refine myself as a leader said congress leader Rahul gandhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X