ರಾಹುಲ್‌ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಯಾರು

ನವದೆಹಲಿ, ಜ.31-ಹತ್ತು ವರ್ಷದಿಂದ ಚಾತಕ ಪಕ್ಷಿಯಂತೆ ಕಾದಿದ್ದು ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ಚುನಾವಣಾ ಸಾರಥಿ ರಾಹುಲ್‌ ಗಾಂಧಿ ಅವರನ್ನು ತಮ್ಮ 'ಟೈಮ್ಸ್ ನೌ' ವಾಹಿನಿಗಾಗಿ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ:

* ಅರ್ನಬ್ ಗೋಸ್ವಾಮಿ ವಯಸ್ಸು 40 ವರ್ಷ (ಜನನ 9-10-1973). * ಹುಟ್ಟೂರು: ಗೌಹಾಟಿ, ಅಸ್ಸಾಂ (ಅಸ್ಸಾಂ ಭಾಷೆಯಲ್ಲಿ অৰ্ণৱ গোস্বামী) * ಶಿಕ್ಷಣ: ಹಿಂದೂ ಕಾಲೇಜು (ದಿಲ್ಲಿ ವಿವಿ), ಸೈಂಟ್ ಆ್ಯನ್ಸ್ (ಆಕ್ಸ್ ಫರ್ಡ್) . ಪತ್ನಿಯ ಹೆಸರು Samyabrata Goswami. ಒಬ್ಬ ಪುತ್ರ.

ಅರ್ನಬ್ ಗೋಸ್ವಾಮಿ ಪ್ರಾಮಾಣಿಕರಾ? ಈ ಬಗ್ಗೆ ಇತ್ತೀಚೆಗೆ ಬಿಜೆಪಿಯ Minakshi Lekhi ಅವರು ಕೆಣಕಿದಾಗ ನಾನೆಂದಿಗೂ ಅಂತಹ ಕೆಲಸ ಮಾಡಿಲ್ಲ. what did you say? Never Ever, Ever Ever say that ಎಂದು ತಮ್ಮ ಪ್ರಾಮಾಣಿಕತೆ ಬಗ್ಗೆ ರೋಚಕವಾಗಿ ಹೇಳಿಕೊಂಡಿದ್ದರು.

NDTVಯಲ್ಲಿ ಪ್ರಣವ್ ರಾಯ್ ಕೈಕೆಳಗೆ ಪಳಗಿದವರು

NDTVಯಲ್ಲಿ ಪ್ರಣವ್ ರಾಯ್ ಕೈಕೆಳಗೆ ಪಳಗಿದವರು

1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾಗಿ ಈಗ Times Now ಪ್ರಧಾನ ಸಂಪಾದಕ. ಅದಕ್ಕೂ ಮುನ್ನ, ಆಕ್ಸ್ ಫರ್ಡ್ ವಿವಿಯಲ್ಲಿ ಶಿಕ್ಷಣ ಮುಗಿಸುತ್ತಿದ್ದಂತೆ ಕೋಲ್ಕೊತ್ತಾದ The Telegraph ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. * CNN IBN ಪ್ರಧಾನ ಸಂಪಾದಕ ರಾಜದೀಪ್ ಸರ್ದೇಸಾಯಿ ಜತೆ NDTVಯಲ್ಲಿ ಪ್ರಣವ್ ರಾಯ್ ಕೈಕೆಳಗೆ ಪಳಗಿದವರು.

ಬಾಲ್ಯದಲ್ಲಿ ತಾತಂದಿರ ಜೋರು ಪ್ರಭಾವ

ಬಾಲ್ಯದಲ್ಲಿ ತಾತಂದಿರ ಜೋರು ಪ್ರಭಾವ

ಅಸ್ಸಾಂನ ನ್ಯಾಯವಾದಿಗಳ ಕುಟುಂಬದಲ್ಲಿ ಜನಿಸಿದವರು. ಪುರಾಣ ಪ್ರಸಿದ್ಧ ಕಾಮಾಕ್ಯ ದೇವಿಯ ಮಂದಿರದ ಬಳಿ ಇವರ ಅಜ್ಜನ ಮನೆ. ಇವರ ತಾತ (ಅಪ್ಪನ ಅಪ್ಪ) ರಜನಿಕಂಠ ಗೋಸ್ವಾಮಿ. ನ್ಯಾಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಮತ್ತೊಬ್ಬ ತಾತ (ಅಮ್ಮನ ಅಪ್ಪ) ಗೌರಿಶಂಕರ ಭಟ್ಟಾಚಾರ್ಯ ಅವರು ಅನೇಕ ವರ್ಷ ಕಾಲ ಅಸ್ಸಾಂ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದವರು (ಕಮ್ಯುನಿಸ್ಟ್). ಅವರೂ ನ್ಯಾಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಬರಹಗಾರರು ಮತ್ತು ಅಸ್ಸಾಂ ಸಾಹಿತ್ಯ ಸಭಾ ಪ್ರಶಸ್ತಿ ಪುರಸ್ಕೃತರು. ಚಿತ್ರ ಕೃಪೆ:www.outlookindia.com

ಅರ್ನಬ್ ಗೋಸ್ವಾಮಿ ಅಪ್ಪ ವಾಯುಪಡೆಯಲ್ಲಿ ಇಂಜಿನಿಯರ್

ಅರ್ನಬ್ ಗೋಸ್ವಾಮಿ ಅಪ್ಪ ವಾಯುಪಡೆಯಲ್ಲಿ ಇಂಜಿನಿಯರ್

ಅರ್ನಬ್ ಗೋಸ್ವಾಮಿ ಅಪ್ಪ: ಭಾರತೀಯ ವಾಯುಪಡೆಯಲ್ಲಿ ಇಂಜಿನಿಯರ್ ಆಗಿದ್ದರು. ಹಾಗಾಗಿ ಅರ್ನಬ್ ಗೆ ಅನೇಕ ನಗರಗಳಲ್ಲಿ ಶಿಕ್ಷಣ ಪಡೆಯುವಂತಾಯಿತು. ದಿಲ್ಲಿಯ ದಂಡುಪ್ರದೇಶದಲ್ಲಿದ್ದ ಮೌಂಟ್ ಸೈಂಟ್ ಮೇರಿ ಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ, ಮುಂದೆ ಜಬಲ್ಪುರ ದಂಡುಪ್ರದೇಶದಲ್ಲಿ ಪಿಯುಸಿ ಶಿಕ್ಷಣ ಪಡೆದರು.

ಸುಶಿಕ್ಷಿತ ಅರ್ನಬ್ ಗೋಸ್ವಾಮಿ

ಸುಶಿಕ್ಷಿತ ಅರ್ನಬ್ ಗೋಸ್ವಾಮಿ

ದಿಲ್ಲಿ ವಿಶ್ವವಿದ್ವಾಲಯದ ಹಿಂದೂ ಕಾಲೇಜಿನಲ್ಲಿ Sociology ವಿಷಯದಲ್ಲಿ (ಸಮಾಜಶಾಸ್ತ್ರ) ಪದವಿ. ಮುಂದೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ St. Antony's College ನಲ್ಲಿ Social Anthropology ವಿಷಯದಲ್ಲಿ 1994ರಲ್ಲಿ ಸ್ನಾತಕೋತ್ತರ ಪದವಿ.Combating Terrorism: The Legal Challenge ಎಂಬ ಪುಸ್ತಕವನ್ನು ಬರೆದಿದ್ದಾರೆ.

ಅರ್ನಬ್ ಗೋಸ್ವಾಮಿ ಸುದ್ದಿ ಗಾರುಡಿಗ

ಅರ್ನಬ್ ಗೋಸ್ವಾಮಿ ಸುದ್ದಿ ಗಾರುಡಿಗ

2008ರ ಅಕ್ಟೋಬರಿನಲ್ಲಿ ಸಂಸತ್ತಿನಲ್ಲಿ ನಡೆದ ಮಹತ್ವದ ವಿಶ್ವಾಸಮತ ಯಾಚನೆ ಕಲಾಪವನ್ನು ಸತತವಾಗಿ 26 ಗಂಟೆ ಕಾಲ ವರದಿ ಮಾಡಿದ ಸುದ್ದಿ ಗಾರುಡಿಗ. 26/11 ಮುಂಬೈ ದಾಳಿ ಸಂದರ್ಭದಲ್ಲಿ ನಿರಂತರವಾಗಿ 65 ಗಂಟೆ ಕಾಲ ನೇರ ಪ್ರಸಾರದಲ್ಲಿ ಆಂಕರ್ ಆಗಿದ್ದರು. ಇವರು ಗಳಿಸಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅನೇಕ ದಿಗ್ಗಜರನ್ನು ಸಂದರ್ಶಿಸಿದ ಖ್ಯಾತಿ.

ರಾಹುಲ್ ಗಾಂಧಿಯ ಬಾಲಿಶ ಉತ್ತರಗಳು ವ್ಯಾಪಕ ಚರ್ಚೆಗೆ

ರಾಹುಲ್ ಗಾಂಧಿಯ ಬಾಲಿಶ ಉತ್ತರಗಳು ವ್ಯಾಪಕ ಚರ್ಚೆಗೆ

ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನೂ ಸಂದರ್ಶಿಸಿದರು. ರಾಹುಲ್ ಗಾಂಧಿಯ ಬಾಲಿಶ/ ಕಳಪೆ ಉತ್ತರಗಳು ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿವೆ. ಸ್ವತಃ ಅರ್ನಬ್ ಗೋಸ್ವಾಮಿ ಅವರೇ ಸಂದರ್ಶನ ಪ್ರಸಾರವಾದ ಬಳಿಕ ಮೂರು ದಿನಗಳ ಕಾಲ ಸಂದರ್ಶನದ ಆಳ-ಅಗಲಗಳನ್ನು Frankly Speaking with Arnab ಕಾರ್ಯಕ್ರಮದಲ್ಲಿ ತೆರೆದಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+