• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋರಾಯ್ತು ಟಿಕ್ ಟಾಕ್ ಬ್ಯಾನ್ ಸದ್ದು: ಇಳಿಕೆಯಾಯ್ತು ರೇಟಿಂಗ್

|

ನವ ದೆಹಲಿ, ಮೇ 21: ಟಿಕ್ ಟಾಕ್ ಆಪ್ ಬ್ಯಾನ್ ಮಾಡಬೇಕು ಎನ್ನುವ ಸದ್ದು ಭಾರತದಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ. ಕೊರೊನಾ ನಡುವೆ ಈ ಕೂಗು ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮಾಡಬೇಕು ಎನ್ನುವ ಅಭಿಯಾನ ಮತ್ತೆ ನಡೆಯುತ್ತಿದೆ.

ಅನೇಕರು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪರ್ ಆಪ್ ಸ್ಟೋರ್‌ನಲ್ಲಿ ಟಿಕ್‌ಟಾಕ್ ಆಪ್‌ಗೆ 1 ಸ್ಟಾರ್ ರೇಟಿಂಗ್ ನೀಡಿ, ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ತಮ್ಮ ಕಮೆಂಟ್‌ಗಳ ಮೂಲಕ ಟಿಕ್‌ಟಿಕ್ ಬ್ಯಾನ್‌ಗೆ ಧ್ವನಿಗೂಡಿಸಿದ್ದಾರೆ.

ಗೂಡ್ಸ್ ರೈಲಿನಲ್ಲಿ ಟಿಕ್‌ಟಾಕ್ ಮಾಡಲು ಹೋದ ಯುವಕ: ಮುಂದೇನಾಯ್ತು?ಗೂಡ್ಸ್ ರೈಲಿನಲ್ಲಿ ಟಿಕ್‌ಟಾಕ್ ಮಾಡಲು ಹೋದ ಯುವಕ: ಮುಂದೇನಾಯ್ತು?

ಟಿಕ್‌ಟಾಕ್‌ ಚೀನಾ ಮೂಲದ ಬೈಟ್‌ಡ್ಯಾನ್ಸ್ ಸಂಸ್ಥೆಯ ಒಡೆತನದ ಆಪ್ ಆಗಿದೆ. ಶಾರ್ಟ್ ವಿಡಿಯೋ ಆಪ್ ಇದಾಗಿದ್ದು, ಶಾರ್ಟ್ ಟೈಮ್‌ನಲ್ಲಿಯೇ ದೊಡ್ಡ ಜನಪ್ರಿಯತೆ ಪಡೆಯಿತು. ಯುವ ಜನತೆಯ ಫೇವರೇಟ್‌ ಆಪ್‌ಗಳನ್ನು ಮುಂಚುಣಿಯಲ್ಲಿ ಇದೆ.

ಸದ್ಯ, ಟಿಕ್‌ಟಾಕ್ ವಿರುದ್ಧ ಅಭಿಯಾನ ನಡೆಯುತ್ತಿದ್ದು, ಅನೇಕರು ಟಿಕ್‌ ಟಾಕ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಇದರಿಂದ ಟಿಕ್‌ಟಾಕ್‌ ರೇಟಿಂಗ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 4.6 ರೇಟಿಂಗ್‌ನಿಂದ 1.3 ರೇಟಿಂಗ್‌ಗೆ ಇಳಿದಿದೆ. ಜೊತೆಗೆ ಟಿಕ್‌ಟಾಕ್ ಲೈಟ್ ಆಪ್ ಕೂಡ 1.1 ಸ್ಟಾರ್‌ ರೇಟಿಂಗ್ ಸಿಕ್ಕಿದೆ.

ಟಿಕ್‌ಟಾಕ್ ಆಪ್ ಅನ್ನು ಭಾರತದಲ್ಲಿಯೇ ಅತಿ ಹೆಚ್ಚು ಬಳಕೆ ಮಾಡುತ್ತಾರೆ. ಟಿಕ್‌ ಟಾಕ್‌ ಭಾರತದಲ್ಲಿ 119.3 ಮಿಲಿಯನ್‌ ಬಳಕೆದಾರನ್ನು ಹೊಂದಿದೆ.

ಭಾರತದ ನಂತರ ಅಮೆರಿಕಾ, ಟರ್ಕಿ, ರಷ್ಯಾ, ಬ್ರೆಜಿಲ್ ಹಾಗೂ ಪಾಕಿಸ್ತಾನದಲ್ಲಿ ಟಿಕ್‌ಟಾಕ್ ಬಳಕೆದಾರರು ಹೆಚ್ಚಾಗಿದ್ದಾರೆ. ಆಶ್ಚರ್ಯ ಎಂದರೇ ಚೀನಾದಲ್ಲಿಯೇ ಟಿಕ್‌ಟಾಕ್‌ ಬಳಕೆಯನ್ನು ಹೆಚ್ಚು ಮಾಡುವುದಿಲ್ಲ.

English summary
Tiktok india ratings fall down to 1.3 in google play store. Many indian users supporting tiktok ban campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X