• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿ

|
Google Oneindia Kannada News

ನವದೆಹಲಿ, ಜೂನ್ 30: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ನಿನ್ನೆಯಷ್ಟೇ (ಜೂನ್ 29) ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಭಾರೀ ಮಾರುಕಟ್ಟೆಯನ್ನು ಹೊಂದಿರುವ ಟಿಕ್‌ ಟಾಕ್ ಭಾರತ ಸರ್ಕಾರವನ್ನು ಭೇಟಿ ಮಾಡಿ ಬ್ಯಾನ್ ಕುರಿತು ಚರ್ಚಿಸಲಿದೆ.

   Modi's to address the nation today at 4 P.M | Oneindia Kannada

   ಕೇಂದ್ರ ಸರ್ಕಾರದ ಭೇಟಿಗೆ ಆಹ್ವಾನ ಸಿಕ್ಕ ಹಿನ್ನೆಲೆಯಲ್ಲಿ 'ಪ್ರತಿಕ್ರಿಯಿಸಲು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸುವ ಅವಕಾಶಕ್ಕಾಗಿ' ಸರ್ಕಾರವನ್ನು ಭೇಟಿ ಮಾಡುವುದಾಗಿ ಕಂಪನಿಯ ಭಾರತದ ಮುಖ್ಯಸ್ಥ ನಿಖಿಲ್ ಗಾಂಧಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.

   ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

   'ಕಂಪನಿಯು ಭಾರತೀಯ ಕಾನೂನಿನಡಿಯಲ್ಲಿ ಎಲ್ಲಾ ಡೇಟಾ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಅನುಸರಿಸುತ್ತಲೇ ಇದೆ ಮತ್ತು ಚೀನಾದಲ್ಲಿ ಸೇರಿದಂತೆ ವಿದೇಶಿ ಸರ್ಕಾರಗಳೊಂದಿಗೆ ಭಾರತೀಯರ ಯಾವುದೇ ಬಳಕೆದಾರ ಮಾಹಿತಿಯನ್ನು ಹಂಚಿಕೊಂಡಿಲ್ಲ , ಸರ್ಕಾರದೊಂದಿಗೆ ಸಭೆ ನಡೆಸಿದಾಗ ಈ ಕುರಿತು ಸ್ಪಷ್ಟಪಡಿಸಲಿದೆ'' ಎಂದಿದ್ದಾರೆ.

   'ಇದಲ್ಲದೆ, ಭವಿಷ್ಯದಲ್ಲಿ ನಮ್ಮನ್ನು ವಿನಂತಿಸಿದರೆ ನಾವು ಹಾಗೆ ಮಾಡುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸಮಗ್ರತೆಗೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ 'ಎಂದು ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಲವು ಗಂಟೆಗಳ ಹಿಂದೆ ಆಪಲ್ ಮತ್ತು ಗೂಗಲ್ ಪ್ಲೇ ಆಪ್ ಸ್ಟೋರ್‌ಗಳಿಂದ ಚೀನೀ ಬೈಟೆಡೆನ್ಸ್ ಒಡೆತನದ ಹೆಲೋ ಜೊತೆಗೆ ಈ ಅಪ್ಲಿಕೇಶನ್ ಕಣ್ಮರೆಯಾಯಿತು.

   ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ತನ್ನ 'ಸಾರ್ವಭೌಮತ್ವ ಮತ್ತು ಭದ್ರತೆಗೆ' ಬೆದರಿಕೆ ಎಂದು ಸೋಮವಾರ ನಿಷೇಧಿಸಿದೆ.

   English summary
   Chinese short video platform Tik Tok to meet Indian government regarding their ban in India. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X