ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಜೆಟ್ ಟ್ರೇಲರ್ ಅಷ್ಟೆ, ಮುಂದಿದೆ ಇನ್ನೂ ದೊಡ್ಡ ಯೋಜನೆಗಳು: ಮೋದಿ

|
Google Oneindia Kannada News

Recommended Video

Union Budget 2019 : ಈ ಬಜೆಟ್ ಟ್ರೈಲರ್ ಅಷ್ಟೇ, ಮುಂದೆ ಇನ್ನೂ ಜನಪ್ರಿಯ ಯೋಜನೆಗಳಿವೆ ಅಂದ್ರು ಮೋದಿ

ನವದೆಹಲಿ, ಫೆಬ್ರವರಿ 01: ಮಧ್ಯಂತರ ಬಜೆಟ್ ಅನ್ನು ಚುನಾವಣಾ ನಂತರ ತಮ್ಮ ಸರ್ಕಾರ ಮಂಡಿಸಲಿರುವ ಪೂರ್ಣ ಬಜೆಟ್‌ನ ಟ್ರೈಲರ್‌ ಎಂದು ಕರೆದಿರುವ ಪ್ರಧಾನಿ ಮೋದಿ, ಮುಂದಿನ ಪೂರ್ಣ ಬಜೆಟ್‌ನಲ್ಲಿ ಹೆಚ್ಚಿನ ಯೋಜನೆ, ಘೋಷಣೆ ಇರಲಿವೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ : ಕಾರ್ಮಿಕ ವಲಯಕ್ಕೆ ಸಿಕ್ಕ ಯೋಜನೆಗಳೇನು?

ಬಜೆಟ್‌ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನಿ ಅವರು, ಇದು ಕೇವಲ ಆರಂಭ ಅಷ್ಟೆ ಮುಂದಿನ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಮಂಡಿಸುವ ಪೂರ್ಣ ಬಜೆಟ್‌ ಈ ಮಧ್ಯಂತರ ಬಜೆಟ್‌ಗಿಂತಲೂ ಬೃಹತ್ ಆಗಿರಲಿದ್ದು, ಬಡ, ಮಧ್ಯಮವರ್ಗಕ್ಕೆ ವರವಾಗಲಿದೆ ಎಂದರು.

ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು

ಸಾಮಾನ್ಯ ವರ್ಗ, ಕಾರ್ಮಿಕ ವರ್ಗ, ರೈತಾಪಿ ವರ್ಗ, ಉದ್ದಿಮೆದಾರರು, ಸಣ್ಣ ಉದ್ದಿಮೆದಾರರು ಎಲ್ಲ ವರ್ಗಕ್ಕೂ ಬಜೆಟ್ ಸಂತಸವನ್ನು ನೀಡಿದೆ. ಉತ್ಪಾದನೆ ಹೆಚ್ಚಳ, ಜಿಡಿಪಿ ಹೆಚ್ಚಳಕ್ಕೆ ಒತ್ತು ನೀಡುವುದರೊಂದಿಗೆ ಹೊಸ ಭಾರತ ನಿರ್ಮಾಣಕ್ಕೆ ಪೂರಕವಾದ ಬಜೆಟ್ ಇದಾಗಿದೆ ಎಂದು ಮಧ್ಯಂತರ ಬಜೆಟ್ ಅನ್ನು ಮೋದಿ ಹೊಗಳಿದರು.

This budget will take India on the path to development: Modi

ಸಾಮಾನ್ಯ ವರ್ಗದ ಔದಾರ್ಯ ಮತ್ತು ಪ್ರಾಮಾಣಿಕ ತೆರಿಗೆ ಪಾವತಿಯಿಂದಾಗಿ ದೇಶದ ಅಭಿವೃದ್ಧಿ ಸಾಧ್ಯವಾಗಿತ್ತು. ಬಡವರಿಗೆ ಸೌಕರ್ಯಗಳು ಸಾಧ್ಯವಾಗಿದ್ದವು. ಅಂತಹಾ ಪ್ರಾಮಾಣಿಕ ವರ್ಗಕ್ಕೆ ಸಂತಸ ನೀಡುವ ಒತ್ತಡ ನಮ್ಮ ಮೇಲೆ ಇತ್ತು ನಾವದನ್ನು ಉಳಿಸಿಕೊಂಡಿದ್ದೇವೆ. 5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ನೀಡಿ ಮಧ್ಯಮವರ್ಗವನ್ನು ನಿರಾಳಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ಭಾರತದ ಭವ್ಯ ಭವಿಷ್ಯತ್ತಿಗೆ 10 ಪ್ರಮುಖ ಅಂಶಗಳ 'ವಿಷನ್ 2030'

ಕಾಲಕಾಲಕ್ಕೆ ಹಲವು ಸರ್ಕಾರಗಳು ರೈತರಿಗೆ ಹಲವು ಯೋಜನೆಗಳನ್ನು ನೀಡುತ್ತಲೇ ಬಂದಿವೆ. ಆದರೆ ಅವು 2-3 ಕೋಟಿ ರೈತರಿಗಷ್ಟೆ ಸಹಾಕವಾಗುತ್ತಿದ್ದವು. ಆದರೆ ನಮ್ಮ ಸರ್ಕಾರದ 'ಕಿಸಾನ್ ಸಮ್ಮಾನ್ ನಿಧಿ ಸ್ಕೀಂ' ಯೋಜನೆಯಿಂದ 12 ಕೋಟಿ ರೈತರಿಗೆ ಸಹಾಯವಾಗುತ್ತದೆ. 5 ಮತ್ತು ಅದಕ್ಕಿಂತಲೂ ಕಡಿಮೆ ಜಮೀನು ಹೊಂದಿದ ರೈತರಿಗೆ ಇದರ ಲಾಭ ದೊರೆಯಲಿದೆ ಎಂದು ಮೋದಿ ಮಾಹಿತಿ ನೀಡಿದರು.

English summary
This is an Interim Budget. This is just a trailer of the budget which, after elections, will take India on the path to development said PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X