ನನ್ನನ್ನು ಮುಗಿಸಲು 'ಪ್ರಭಾವಿ'ಗಳಿಂದ ಆದೇಶವಾಗಿದೆ ಎಂದ ಕೇಜ್ರಿವಾಲ್
ನವದೆಹಲಿ, ನವೆಂಬರ್ 21: ದೆಹಲಿಯಲ್ಲಿ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಮಂಗಳವಾರ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ್ದು ದೊಡ್ಡ ಸುದ್ದಿಯಾಗಿತ್ತು. ಅದಾದ ಮರು ದಿನ ಬುಧವಾರ, ಇದೊಂದು ಸಣ್ಣ ಘಟನೆ ಖಂಡಿತಾ ಅಲ್ಲ ಮತ್ತು ಈ ದಾಳಿಗೆ ಆದೇಶ ನೀಡಿ, ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.
"ಕಳೆದ ಎರಡು ವರ್ಷದಲ್ಲಿ ನಾಲ್ಕು ಸಲ ನನ್ನ ಮೇಲೆ ದಾಳಿಯಾಗಿದೆ. ಇದು ಸಣ್ಣ ವಿಷಯ ಅಲ್ಲ. ದಾಳಿಕೋರರಿಗೆ ಆದೇಶ ಮಾಡಲಾಗಿದೆ. ನಾವು ಅವರಿಗೆ ತಡೆಯಾಗಿದ್ದೇವೆ. ಒಟ್ಟಾಗಿ, ಅವರೆಲ್ಲ ನನ್ನನ್ನು ಕೊಲ್ಲಲು ಬಯಸಿದ್ದಾರೆ. ಅವರು ಪದೇಪದೇ ನನ್ನ ಮೇಲೆ ದಾಳಿಗೆ ಆದೇಶ ನೀಡುತ್ತಿದ್ದಾರೆ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಅನಿಲ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದೆ. 41 ವರ್ಷದ ಆತ ಗುರ್ ಗಾಂವ್ ನ ಸಂಸ್ಥೆಯೊಂದರ ನೌಕರ. 'ಆಪ್' ಮುಖಂಡ ರಾಘವ್ ಛದಾ ಮಾತನಾಡಿ, ದಾಳಿಕೋರನ ಮುಖದ ಮೇಲೆ ಕೈ ಹಾಕಿದ ದಾಳಿಕೋರ ಮೊದಲಿಗೆ ಕನ್ನಡಕವನ್ನು ಬೇರ್ಪಡಿಸಿದ. ಕನ್ನಡಕದ ಒಂದು ಗಾಜು ಕೆಳಗೆ ಬಿದ್ದರೆ ಮತ್ತೊಂದು ಆರೋಪಿ ಕೈಯಲ್ಲೇ ಉಳಿಯಿತು ಎಂದಿದ್ದಾರೆ.

ಈ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಪೊಲೀಸರ ಜತೆಗೂಡಿ ಬಿಜೆಪಿಯವರು ನಡೆಸಿದ ಪಿತೂರಿ ಇದು ಎಂದು ಆರೋಪಿಸಿದ್ದಾರೆ. ಇವತ್ತು ಖಾರದ ಪುಡಿ. ಅದು ಪಿಸ್ತೂಲ್ ಅಥವಾ ಆಸಿಡ್ ಆದರೂ ಆಗಬಹುದಿತ್ತು. ಪ್ರಶ್ನೆ ಏನೆಂದರೆ, ಏಕೆ ಹೀಗೆ ಪದೇ ಪದೇ ಆಗುತ್ತದೆ? ದೆಹಲಿ ಪೊಲೀಸರು ಬಿಜೆಪಿ ಕೈಯಲ್ಲಿ ಇರದೆ ಇದೆಲ್ಲ ಆಗುವುದಿಲ್ಲ ಎಂದಿದ್ದಾರೆ.












Click it and Unblock the Notifications