ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ರಿಲೀಫ್ ನೀಡಿದ ದೆಹಲಿ ಹೈಕೋರ್ಟ್

Recommended Video

      Delhi High Court has granted temporary relief to DKS wife and mother | Oneindia Kannada

      ನವದೆಹಲಿ, ಅಕ್ಟೋಬರ್ 16: ಡಿಕೆ ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

      ಇನ್ನು ಹತ್ತು ದಿನಗಳ ಕಾಲ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರನ್ನು ಇಡಿ ಹತ್ತು ದಿನಗಳ ಕಾಲ ವಿಚಾರಣೆ ನಡೆಸದಿರಲು ಹೈಕೋರ್ಟ್ ಸೂಚನೆ ನೀಡಿದೆ.

      ಅನಾರೋಗ್ಯದ ನೆಪವೊಡ್ಡಿ ಇಡಿ ವಿಚಾರಣೆಗೆ ರಿಪೀಫ್ ಸಿಕ್ಕಿದೆ. ಉಷಾಗೂ ಸೋಮವಾರಕ್ಕೆ ಮುಂದೂಡಿದೆ. ಡಿ. ಕೆ. ಶಿವಕುಮಾರ್ ಪತ್ನಿ ಉಷಾಗೆ ಅಕ್ಟೋಬರ್ 17 ರಂದು ಮತ್ತು ತಾಯಿ ಗೌರಮ್ಮಗೆ ಅಕ್ಟೋಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು.

      Temporary Relief For DK Shivakumar Mother And Wife

      ಗೌರಮ್ಮ ಮಂಗಳವಾರ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ದೆಹಲಿ ಕಚೇರಿಗೆ ಬರುವಂತೆ ಇಡಿ ಸಮನ್ಸ್ ನೀಡಿದೆ. ಆದ್ದರಿಂದ, ದೆಹಲಿ ಹೈಕೋರ್ಟ್‌ನಲ್ಲಿ ಸಮನ್ಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಅರ್ಜಿಯ ವಿಚಾರಣೆ ನಡೆದಿದೆ.

      ಈಗ ಪಡೆದಿರುವ ಸಮನ್ಸ್ ಹಿಂಪಡೆಯಲಾಗುತ್ತದೆ, ಸಮನ್ಸ್ ರದ್ದು ಕೋರಿದ್ದ ವಿಚಾರಣೆ ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ.
      ಹೊಸದಾಗಿ ಮತ್ತೆ ಸಮನ್ಸ್ ಜಾರಿಗೊಳಿಸುವ ಬಗ್ಗೆ ಇಡಿ ಹೇಳಿಕೆ ನೀಡಿದೆ. ಉಷಾ ಕೂಡ ಗುರುವಾರ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

      ಡಿ. ಕೆ. ಶಿವಕುಮಾರ್ ಕುಟುಂಬ ಸದಸ್ಯರ ನಡುವೆಯೇ ಹಲವು ಹಣಕಾಸಿನ ವ್ಯವಹಾರ ನಡೆದಿದೆ. ಡಿ. ಕೆ. ಶಿವಕುಮಾರ್‌ಗೆ ಉಷಾ 2.60 ಕೋಟಿ ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ, ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ. ಹಣದ ವ್ಯವಹಾರದ ಬಗ್ಗೆ ಮಾಹಿತಿ ಪಡೆಯಲು ಇಡಿ ನೋಟಿಸ್ ನೀಡಿತ್ತು.

      ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

      ಮಂಗಳವಾರ ಡಿ. ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಪರ ವಕೀಲರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿದ್ದರು.

      ಡಿಕೆ ಶಿವಕುಮಾರ್ ತಾಯಿ ಗೌರಮ್ಮ ವಯಸ್ಸಾಗಿದ್ದು, ದೆಹಲಿವರೆಗೆ ಬಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+