• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಂದೆಯ ಶವಕ್ಕೆ ಅಳುತ್ತಲೇ ಸೆಲ್ಯೂಟ್ ಹೊಡೆದ ಮಗಳು

By Kiran B Hegde
|

ನವದೆಹಲಿ, ಜ. 30: ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಸೆಣಸಾಟದಲ್ಲಿ ಮಂಗಳವಾರ ವೀರಮರಣವನ್ನಪ್ಪಿದ 2/9 ಗೂರ್ಖಾ ರೈಫಲ್ಸ್‌ನಲ್ಲಿ ಕರ್ನಲ್ ಎಂ.ಎನ್. ರಾಯ್ (39) ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನವದೆಹಲಿಯ ಕಂಟೋನ್ಮೆಂಟ್‌ನಲ್ಲಿ ಗುರುವಾರ ನಡೆಯಿತು.

ಈ ಸಂದರ್ಭ ಅವರ 11 ವರ್ಷ ವಯಸ್ಸಿನ ಮಗಳು ತಂದೆಯ ಜೀವರಹಿತ ಶರೀರದ ಎದುರು ನಿಂತು ಉಮ್ಮಳಿಸಿ ಬರುತ್ತಿದ್ದ ದುಃಖದ ಮಧ್ಯೆಯೂ ಸೆಲ್ಯೂಟ್ ಹೊಡೆದಿದ್ದು ಇಡೀ ದೇಶದ ಗಮನ ಸೆಳೆದಿದೆ.

ಪಕ್ಕದಲ್ಲಿಯೇ ನಿಂತಿದ್ದ 6 ವರ್ಷ ವಯಸ್ಸಿನ ಮುಗ್ಧ ಸಹೋದರ ಏನೂ ತಿಳಿಯದೆ ಸುಮ್ಮನೆ ನಿಂತಿದ್ದ. ರಾಯ್ ಪುತ್ರಿ ಅಲ್ಕಾ ಅಂತಹ ದುಃಖದ ಸಂದರ್ಭದಲ್ಲೂ "ನನ್ನ ತಂದೆ ಓರ್ವ ವೀರ" ಎಂದು ಹೇಳಿಕೊಂಡಿದ್ದಾರೆ. [ಅಸ್ಸಾಂ ದಾಳಿಯ ಸೂತ್ರದಾರ ಅರೆಸ್ಟ್]

ಭಾರತೀಯ ಸೇನಾಧಿಕಾರಿ ಕರ್ನಲ್ ಮುನೀಂದ್ರ ನಾಥ ರಾಯ್ ತಮ್ಮ ಸೇವೆಗಾಗಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ಗಳಿಸಿದ್ದರು. ಆದರೆ, ಸಂಭ್ರಮದಲ್ಲಿ ಮೈಮರೆಯದ ರಾಯ್ ಮರುದಿನವೇ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೆಣಸಾಟಕ್ಕೆ ನಿಂತು ಹುತಾತ್ಮರಾದರು. ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. [ಪಾಕಿಸ್ತಾನಿ ಶಿಕ್ಷಕರಿಗೆ ಪೆನ್ ಜೊತೆ ಗನ್]

ಇಡೀ ಕುಟುಂಬವೇ ಸೈನ್ಯದಲ್ಲಿ : ಮುನೀಂದ್ರ ನಾಥ್ ಪಾರ್ಥಿವ ಶರೀರಕ್ಕೆ ಗೂರ್ಖಾ ರೈಫಲ್ಸ್‌ನಲ್ಲಿಯೇ ಅಧಿಕಾರಿಯಾಗಿರುವ ಅವರ ಸಹೋದರ ಕರ್ನಲ್ ಡಿ.ಎನ್. ರಾಯ್ ಅಗ್ನಿ ಸ್ಪರ್ಷ ಮಾಡಿದರು. ಭಾರತೀಯ ಭೂದಳದ ಮುಖ್ಯಸ್ಥ ದಲ್ಬೀರ್ ಸಿಂಗ್ ಈ ಸಂದರ್ಭದಲ್ಲಿ ಇದ್ದರು. [ಉಗ್ರರ ಸ್ವರ್ಗ ಪಾಕ್]

ಎಂ.ಎನ್. ರಾಯ್ ಪತ್ನಿ ಪ್ರಿಯಾಂಕಾ ಅವರಿಗೆ ಸೋನಿಯಾ ಗಾಂಧಿ ಪತ್ರ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಯ್ ಅವರ ಮತ್ತೋರ್ವ ಸಹೋದರ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2002ರಲ್ಲಿ ರಘುನಾಥ ದೇಗುಲದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದರು.

ವೀರ ತಂದೆಗೆ ಮಗಳ ಕೊನೆಯ ಸೆಲ್ಯೂಟ್

ವೀರ ತಂದೆಗೆ ಮಗಳ ಕೊನೆಯ ಸೆಲ್ಯೂಟ್

ಕರ್ನಲ್ ಎಂ.ಎನ್. ರಾಯ್ ಪಾರ್ಥಿವ ಶರೀರದ ಎದುರು ನಿಂತರ ಮಗಳು ಅಲ್ಕಾ ದುಃಖ ಭರಿತ ಸ್ಥಿತಿಯಲ್ಲಿಯೂ ಅಂತಿಮವಾಗಿ ಸೆಲ್ಯೂಟ್ ಹೊಡೆದರು. ನನ್ನ ತಂದೆ ವೀರ ಎನ್ನುವ ಮೂಲಕ ತಾನೋರ್ವ ಸೇನಾಧಿಕಾರಿಯ ಮಗಳು ಎಂಬುದನ್ನು ನಿರೂಪಿಸಿದರು.

ರಾಯ್ ಶವದೆದುರು ದುಃಖತಪ್ತ ಪತ್ನಿ

ರಾಯ್ ಶವದೆದುರು ದುಃಖತಪ್ತ ಪತ್ನಿ

ಕರ್ನಲ್ ಎಂ.ಎನ್. ರಾಯ್ ಪಾರ್ಥಿವ ಶವದೆದುರು ಪತ್ನಿ ಪ್ರಿಯಾಂಕಾ ರೋದಿಸಿದರು. ಕುಟುಂಬ ವರ್ಗದವರು ಪಕ್ಕದಲ್ಲಿಯೇ ಇದ್ದು ಅವರನ್ನು ಸಮಾಧಾನಪಡಿಸಿದರು.

ಅಸಹಾಯಕ ಅಜ್ಜ, ಮೊಮ್ಮಗಳು

ಅಸಹಾಯಕ ಅಜ್ಜ, ಮೊಮ್ಮಗಳು

ಎಂ.ಎನ್. ರಾಯ್ ಪಾರ್ಥಿವ ಶರೀರದೆದುರು ಅವರ ತಂದೆ ಹಾಗೂ ಮಗಳು ಅಲ್ಕಾ ರೋದಿಸಿದರು. ಈ ಸಂದರ್ಭದಲ್ಲೂ ಮಗಳು ಸೆಲ್ಯೂಟ್ ಹೊಡೆಯುವುದನ್ನು ಮರೆಯಲಿಲ್ಲ.

ದುಃಖತಪ್ತ ಕುಟುಂಬ

ದುಃಖತಪ್ತ ಕುಟುಂಬ

ನವದೆಹಲಿಯ ಕಂಟೋನ್ಮೆಂಟ್‌ನಲ್ಲಿಟ್ಟಿದ್ದ ಕರ್ನಲ್ ಎಂ.ಎನ್. ರಾಯ್ ಶವದ ಎದುರು ಅವರ ಕುಟುಂಬ ವರ್ಗದವರು ರೋದಿಸಿದರು.

ಸೇನಾ ಗೌರವ

ಸೇನಾ ಗೌರವ

ಕರ್ನಲ್ ಎಂ.ಎನ್. ರಾಯ್ ಅವರ ಶವಕ್ಕೆ ಭೂದಳದ ಮುಖ್ಯಸ್ಥರು ಸೇರಿದಂತೆ ಇತರ ಸೇನಾಧಿಕಾರಿಗಳು ಸೆಲ್ಯೂಟ್ ಹೊಡೆದರು.

ಕುಟುಂಬದಿಂದ ಪುಷ್ಪನಮನ

ಕುಟುಂಬದಿಂದ ಪುಷ್ಪನಮನ

ಎಂ.ಎನ್. ರಾಯ್ ಪಾರ್ಥಿವ ಶರೀರದ ಅಂತಿ ಸಂಸ್ಕಾರದ ಮೊದಲು ಅವರ ಕುಟುಂಬ ವರ್ಗದವರು ಪುಷ್ಪನಮನ ಸಲ್ಲಿಸಿದರು.

ಮಗನ ಶವಕ್ಕೆ ತಂದೆಯ ಅಶ್ರುತರ್ಪಣ

ಮಗನ ಶವಕ್ಕೆ ತಂದೆಯ ಅಶ್ರುತರ್ಪಣ

ಎಂ.ಎನ್. ರಾಯ್ ಅವರ ಶವಕ್ಕೆ ದುಃಖತಪ್ತ ತಂದೆ ಅಶ್ರುತರ್ಪಣ ಸಲ್ಲಿಸಿದರು.

ಸೇನಾ ಗೌರವ

ಸೇನಾ ಗೌರವ

ಎಂ.ಎನ್. ರಾಯ್ ಅವರ ಶವವನ್ನು ಹೊತ್ತು ನಡೆಯುತ್ತಿರುವ ಸೈನಿಕರು. ಸೇನಾಧಿಕಾರಿಗಳು ಹಾಗೂ ಸೈನಿಕರು ಸುತ್ತಲೂ ನಿಂತು ಸೆಲ್ಯೂಟ್ ಹೊಡೆದರು. ಕುಟುಂಬ ವರ್ಗದವರು ಶವದ ಹಿಂದೆ ಸಾಗಿದರು.

English summary
Colonel Munindra Nath Rai's 11-year-old daughter saluted her father for the last time as she burst out in tears. She told "my father is brave".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X