ಶಶಿ ತರೂರ್‌ಗೆ ಸಿಟ್ ಕೇಳಿದ 6 ಪ್ರಮುಖ ಪ್ರಶ್ನೆಗಳು
ನವದೆಹಲಿ, ಜ. 20: ಸುನಂದಾ ಪುಷ್ಕರ್ ಹತ್ಯೆ ಪ್ರಕರಣದ ವಿಶೇಷ ತನಿಖಾ ದಳವು ಸೋಮವಾರ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ.
ಕಳೆದ ವಾರವೇ ಶಶಿ ತರೂರ್ ಅವರಿಗೆ ನೋಟಿಸ್ ನೀಡಿದ್ದರೂ ವಿಚಾರಣೆಗೊಳಪಡಿಸಲು ಹಲವು ದಿನಗಳನ್ನೇ ತೆಗೆದುಕೊಳ್ಳಲಾಯಿತು. ಈ ಮಧ್ಯೆ ತರೂರ್ ತಮ್ಮ ವಕೀಲರನ್ನು ಭೇಟಿ ಮಾಡಿ ಪೊಲೀಸರಿಗೆ ನೀಡಬೇಕಾದ ಪ್ರತಿಕ್ರಿಯೆಗಳ ಕುರಿತು ಚರ್ಚಿಸಿದರು. [4 ತಾಸು ತರೂರ್ ವಿಚಾರಣೆ]

ಪೊಲೀಸರು ಶಶಿ ತರೂರ್ ಅವರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಆರು ಪ್ರಶ್ನೆಗಳು ಹೀಗಿವೆ. [ಪೊಲೀಸರು ಸಿದ್ಧಪಡಿಸಿದ 11 ಪ್ರಶ್ನೆಗಳು]
1) ವೈದ್ಯರು ಸೂಚಿಸಿರದಿದ್ದರೂ ಸುನಂದಾ ಹತ್ತಿರ ಅಪ್ರಾಕ್ಸ್ ಮಾತ್ರೆಗಳು ಏಕೆ ಇದ್ದವು?
2) ಅವರ ದೇಹದ ಮೇಲೆ 15 ಗಾಯದ ಗುರುತುಗಳು ಏಕೆ ಮೂಡಿದವು? ನೀವು ಅವರ ಮೇಲೆ ಹಲ್ಲೆ ನಡೆಸಿದ್ದಿರಾ? [ಸುನಂದಾಗೆ ಇಂಜೆಕ್ಷನ್ ಚುಚ್ಚಿದ್ದು ಪರಿಚಿತರು]
3) ಸುನಂದಾರಿಂದ ಪ್ರತಿಕ್ರಿಯೆ ಸಿಗದ ತಕ್ಷಣ ಏಕೆ ಆಸ್ಪತ್ರೆಗೆ ಸಾಗಿಸಲಿಲ್ಲ? ಆ ಕ್ಷಣವೇ ಏಕೆ ಪೊಲೀಸರಿಗೆ ತಿಳಿಸಲಿಲ್ಲ?
4) ಸಾವಿನ ಕಾರಣಗಳನ್ನು ಊಹಿಸಿ ಎಐಐಎಂಎಸ್ ವೈದ್ಯರಿಗೆ ಇ ಮೇಲ್ ಕಳುಹಿಸಿದ್ದು ಏಕೆ? [ದುಬೈನಲ್ಲಿ ತರಾರ್ ಜೊತೆ ತರೂರ್ ರಾತ್ರಿ ಕಳೆದರೇ?]
5) ಸುನಂದಾ ತಾವೇ ಹೇಳಿಕೊಳ್ಳದಿದ್ದರೂ ಅವರಿಗೆ ಲೂಪಸ್ ರೋಗವಿದೆ ಎಂದು ನೀವು ಹೇಳಿದ್ದೇಕೆ?
6) ನಿಮಗೆ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಹೇಗೆ ಗೊತ್ತು? ನೀವು ಅವರೊಂದಿಗೆ ದುಬೈನಲ್ಲಿ ವಾಸಿಸಿದ್ದಿರಾ?












Click it and Unblock the Notifications