ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಮೀನುಗಾರರಿಗೆ ಬಿಡುಗಡೆ ಭಾಗ್ಯ

By Kiran B Hegde
|
Google Oneindia Kannada News

ನವದೆಹಲಿ, ನ. 20: ಮಾದಕ ದ್ರವ್ಯ ಸಾಗಣೆ ಆರೋಪದ ಮೇಲೆ ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮೂಲದ ಐವರು ಮೀನುಗಾರರು ಗುರುವಾರ ಭಾರತಕ್ಕೆ ಮರಳಿದ್ದಾರೆ. ಅವರನ್ನು ತಕ್ಷಣ ಜೈಲಿಗೆ ವರ್ಗಾಯಿಸಲಾಗುವುದು ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೀನುಗಾರರ ಬಿಡುಗಡೆ ಸುದ್ದಿ ಕೇಳಿದ ಅವರ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಅವರನ್ನು ಭೇಟಿಯಾಗಲು ಕಾತರಗೊಂಡಿರುವುದಾಗಿ ತಿಳಿಸಿದ್ದಾರೆ. [ಪಾಕಿಸ್ತಾನದಿಂದ ಭಾರತೀಯ ಮೀನುಗಾರರ ಬಿಡುಗಡೆ]

fishermen

ಮೋದಿ ಒತ್ತಡಕ್ಕೆ ಮಣಿದ ಶ್ರೀಲಂಕಾ: ಈ ಮೀನುಗಾರರಿಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಾಗ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ತಮಿಳುನಾಡು ಸರ್ಕಾರ ಕೂಡ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮೋದಿ ಮಾತನಾಡಿದ್ದರು. ಆದ್ದರಿಂದ ಮೀನುಗಾರರ ಬಿಡುಗಡೆಗೆ ತಮಿಳುನಾಡು ಬುಧವಾರ ನಿರ್ಧರಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಸರ್ಕಾರದ ಸಚಿವ ಸೇಂಥಿಲ್ ತೋಂಡಮನ್, "ನಾವು ಅಪರಾಧಿಗಳಿಗೆ ಕ್ಷಮೆ ನೀಡಿಲ್ಲ. ಅವರ ಶಿಕ್ಷೆಯ ಪ್ರಮಾಣ ತಗ್ಗಿಸಿದ್ದೇವೆ ಅಷ್ಟೇ" ಎಂದಿದ್ದಾರೆ.

ಈ ಐವರನ್ನು 2011ರಲ್ಲಿ 995 ಗ್ರಾಂ. ಹೆರಾಯಿನ್ ಸಾಗಿಸುತ್ತಿದ್ದಾಗ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಕೋಲಂಬೋ ಹೈ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅವರ ಅಪರಾಧ ಸಾಬೀತಾಗಿತ್ತು. ಎಲ್ಲರಿಗೂ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು.

English summary
The five fishermen who were sentenced to death by the Sri Lankan court on charges of drug trafficking, will reach home on Thursday, Nov 20. After much protests and arguments over what should be done to the those five Indian fishermen, it was finally decided that they will be released by the Sri Lankan court, on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X