ತಬ್ಲೀಗ್ ಜಮಾತ್ ಸಭೆಯಿಂದಾಗಿ ಕೊರೊನಾ ವೇಗವಾಗಿ ಹಬ್ಬಿದ್ದು ಹೇಗೆ?
ನವದೆಹಲಿ, ಏಪ್ರಿಲ್ 03 : ಮಾರ್ಚ್ ತಿಂಗಳಿನಲ್ಲಿ ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಕೊರೊನಾ ವೇಗವಾಗಿ ಹರಡಲು ಕಾರಣವಾಗಿದೆ.
ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವಿವಿಧ ದೇಶಗಳ 295 ಜನರಿಗೆ ಕೊರೊನಾ ಸೋಂಕು ತಗುಲಿದೆ. ಭಾರತದಲ್ಲಿಯೇ ಈ ಸಭೆಯಲ್ಲಿ ಪಾಲ್ಗೊಂಡ ಶೇ 60 ರಷ್ಟು ಜನರಿಗೆ ಸೋಂಕು ತಗುಲಿದೆ.
ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ದೆಹಲಿಯಲ್ಲಿ 141, ಮಹರಾಷ್ಟ್ರದಲ್ಲಿ 88, ತಮಿಳುನಾಡಿನಲ್ಲಿ 75 ಹೀಗೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರೆಲ್ಲರೂ ಸಭೆಯಲ್ಲಿ ಪಾಲ್ಗೊಂಡವರು.

ದೆಹಲಿಯಲ್ಲಿ 141 ಪ್ರಕರಣಗಳಲ್ಲಿ 129 ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ಕೊರೊನಾ ಸೋಂಕು ಹಬ್ಬಿದೆ.
ತಮಿಳುನಾಡಿನಲ್ಲಿ 75 ಪ್ರಕರಣಗಳಲ್ಲಿ 74 ಪ್ರಕರಣ ತಬ್ಲೀಗ್ ಜಮಾತ್‌ಗೆ ಸಂಪರ್ಕ ಹೊಂದಿದೆ. ತೆಲಂಗಾಣದಲ್ಲಿ 27 ರಲ್ಲಿ 26, ಕರ್ನಾಟಕದಲ್ಲಿ 14ರಲ್ಲಿ 13, ಆಂಧ್ರದಲ್ಲಿನ ಎಲ್ಲಾ 32 ಪ್ರಕರಣ ತಬ್ಲೀಗ್ ಜಮಾತ್‌ಗೆ ಸಂಪರ್ಕ ಹೊಂದಿದೆ.
ರಾಜಸ್ಥಾನದಲ್ಲಿ 13ರಲ್ಲಿ 3, ಮಹಾರಾಷ್ಟ್ರದಲ್ಲಿ 88ರಲ್ಲಿ 8 ಪ್ರಕರಣ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಸಂಬಂಧಿಸಿದ್ದು, ಇಡೀ ದೇಶದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಈ ಸಭೆಯೇ ಕಾರಣವಾಗಿದೆ.
"ಕಳೆದ ಎರಡು ದಿನದಲ್ಲಿ 647 ಮಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಗುರುವಾರ 12 ಜನರು ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗೆ ಸಾವಿಗೀಡಾದವರು ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.












Click it and Unblock the Notifications