ಭಾರತೀಯರ' ಮನ್ ಕಿ ಬಾತ್' ಬಿಂಬಿಸಿದ ದೆಹಲಿ ಸ್ತಬ್ಧಚಿತ್ರ ಪ್ರದರ್ಶನ
ನವದೆಹಲಿ, ಜನವರಿ 26: ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ 23 ಸ್ತಬ್ದ ಚಿತ್ರಗಳು ದೆಹಲಿಯ ರಾಜಪಥದಲ್ಲಿ ಅನಾವರಣಗೊಂಡವು. 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 23 ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ಇದೇ ಮೊದಲ ಬಾರಿಗೆ ಆಕಾಶವಾಣಿಯ 'ಮನ್ ಕಿ ಬಾತ್' ಕಾರ್ಯಕ್ರಮ ಪ್ರತಿಬಿಂಬಿಸುವ ಸ್ತಬ್ದಚಿತ್ರ ಮುಂಚೂಣಿಯಲ್ಲಿ ಉಳಿದೆಲ್ಲ ಸ್ತಬ್ದ ಚಿತ್ರಗಳನ್ನು ಮುನ್ನಡೆಸಿದ್ದುದು ವಿಶೇಷವಾಗಿತ್ತು.
ಅಲ್ಲದೇ ಕೇಂದ್ರ ಆದಾಯ ತೆರಿಗೆ ಇಲಾಖೆ ಕೂಡ ಈ ಬಾರಿ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ಮತ್ತೊಂದು ವಿಶೇಷ. ವಿದೇಶಾಂಗ ಇಲಾಖೆಯು ಏಷಿಯನ್ ರಾಷ್ಟ್ರಗಳ ಸಂಬಂಧದ ಕುರಿತಂತೆ ಸ್ತಬ್ದಚಿತ್ರ ಪ್ರದರ್ಶಿಸಿತು.
20 ವರ್ಷ ಬಳಿಕ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿತ್ತು. ಚೀನಾ ಗಡಿಯಲ್ಲಿ ಹಗಲಿರುಳು ಹಿಮದಲ್ಲಿ ಸ್ನೋ ಸ್ಕೂಟರ್ ಗಳ ಮೂಲಕ ಗಡಿ ಕಾಯುವ ಮನಮುಟ್ಟುವಂತಿತ್ತು ಅದರ ಸ್ತಬ್ದಚಿತ್ರ.
ಯುವಸಬಲೀಕರಣ, ಕೃಷಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ವಿಭಾಗಗಳ ಸ್ತಬ್ಧ ಚಿತ್ರಗಳು ಮತ್ತು ಕ್ಲೀನ್‍ಮನಿ ಸಂದೇಶ ಸಾರುವ ಪ್ರತಿರೂಪದ ಮೆರವಣಿಗೆಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳೂ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಥಸಂಚಲನ ಆರಂಭವಾಗುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ನಂತರ ಅವರು 10 ಸದಸ್ಯ ಆಸಿಯಾನ್ ರಾಷ್ಟ್ರಗಳಾದ ಮ್ಯಾನ್ಮರ್, ವಿಯೆಟ್ನಾಂ, ಫಿಲಿಫೈನ್ಸ್, ಥೈಲ್ಯಾಂಡ್, ಸಿಂಗಪೂರ್, ಬ್ರುನೈ, ಇಂಡೋನೇಷ್ಯಾ, ಮಲೇಷ್ಯಾ, ಲಾವೋಸ್ ಮತ್ತು ಕಾಂಬೋಡಿಯಾ ದೇಶಗಳ ಮುಖ್ಯಸ್ಥರೊಂದಿಗೆ ರಾಜ್‍ಪಥ್ ಮಾರ್ಗದ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಧಾನ ವೇದಿಕೆಗೆ ಆಗಮಿಸಿದರು. ಆ ದೇಶಗಳ ಅಧಿಪತಿಗಳೊಂದಿಗೆ ಮೋದಿ ಪರೇಡ್ ಅನ್ನು ವೀಕ್ಷಿಸಿದರು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವರಾದ ರಾಜ್‍ನಾಥ್ ಸಿಂಗ್, ಅರುಣ್ ಜೇಟ್ಲಿ, ಜೆ.ಡಿ.ನಡ್ಡಾ, ಸ್ಮೃತಿ ಇರಾನಿ, ರವಿಶಂಕರ್‍ಪ್ರಸಾದ್, ಹರ್ಷವರ್ಧನ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಹಸ್ರಾರು ಮಂದಿ 69ನೇ ಗಣರಾಜ್ಯೋತ್ಸವದ ಅತ್ಯಾಕರ್ಷಕ ಪರೇಡ್ ಅನ್ನು ವೀಕ್ಷಿಸಿದರು. ಗಣರಾಜ್ಯೋತ್ಸವ ಮತ್ತು ಆಸಿಯಾನ್ ರಾಷ್ಟ್ರಗಳ 10 ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಭೂತಪೂರ್ವ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವನ್ಯಜೀವಿ ಸ್ತಬ್ಧಚಿತ್ರ ಪ್ರದರ್ಶನ
ನವದೆಹಲಿಯಲ್ಲಿ ನಡೆದ ೬೯ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ವನ್ಯಜೀವಿ ಸ್ತಬ್ಧಚಿತ್ರ ಪ್ರದರ್ಶನ ವಿಶೇಷವಾಗಿತ್ತು. ಅದರಲ್ಲಿ ಹುಲಿ, ಕಾಡಾನೆಗಳು, ಮುಸುವಾ, ಕಾಡೆಮ್ಮೆಗಳ ಪ್ರತಿಕೃತಿಯನ್ನು ಪಥಸಂಚಲನದಲ್ಲಿ ಪ್ರದರ್ಶಿಸಲಾಯಿತು.

ಆಲ್ ಇಂಡಿಯಾ ರೇಡಿಯೋ ಮನ್ ಕಿ ಬಾತ್
ಆಲ್ ಇಂಡಿಯಾ ರೇಡಿಯೋ ತನ್ನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ವಿವಿಧ ಜಾತಿ-ಧರ್ಮಗಳ ಸಂಕೇತವನ್ನು ಒಳಗೊಂಡ ಸ್ತಬ್ದಚಿತ್ರವನ್ನು ಪ್ರದರ್ಶಿಸಿತ್ತಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನೂ ಪ್ರತಿಬಿಂಬಿಸುತ್ತಿತ್ತು.

ಹಿಮಾಚಲ ಪ್ರದೇಶ ಮಣಿಪುರಿ ಸ್ತಬ್ಧಚಿತ್ರ
ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳ ಆದ್ಯಾತ್ಮ ಮತ್ತು ಪ್ರಾದೇಶಿಕ ವೈಶಿಷ್ಟ್ಯ ಬಿಂಬಿಸುವ ಸ್ತಬ್ದಚಿತ್ರ ಗಮನ ಸೆಳೆಯಿತು.

ಕಾಸ್ಮೀರಿ ಪ್ರಜೆ ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಸ್ತಬ್ಧಚಿತ್ರ
ಹಿಂದೂ ಮತ್ತು ಮುಸ್ಲೀಂ ಬಾಂಧವ್ಯದ ಬದುಕು ಬೆಸೆಯುವ ಜಮ್ಮು ಮತ್ತು ಕಾಶ್ಮೀರದ ಸ್ತಬ್ಧ ಚಿತ್ರದಲ್ಲಿ ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸುವ ಕಾಶ್ಮೀರಿ ಪ್ರಜೆಯ ದೃಶ್ಯ ಆಕರ್ಷಕವಾಗಿತ್ತು.

ಗುಜರಾತ್ ನ ಖಾದಿ ಚಳವಳಿ ಸ್ತಬ್ಧಚಿತ್ರ
ಗುಜರಾತ್ ರಾಜ್ಯದ ಸ್ತಬ್ಧ ಚಿತ್ರ ಮಹಾತ್ಮ ಗಾಂಧೀಜಿ ಖಾದಿ ಚಳವಳಿಯನ್ನು ಮನೋಜ್ಞವಾಗಿ ಅಭಿವ್ಯಕ್ತಗೊಳಿಸಿತು. ರಾಟಿ ಮೂಲಕ ನೂಲು ಸುತ್ತುವ ಕಾಯಕದಲ್ಲಿ ತೊಡಗಿದ್ದ ಗಾಂಧೀಜಿಯ ಸ್ತಬದ್ದಚಿತ್ರ ಹಾಗೂ ಅದರ ಸುತ್ತ ಗಾಂಧೀಸ್ಮೃತಿ ಹಾಡುತ್ತ ಸಾಗಿದ ಕಲಾವಿದರು ಗಾಂಧೀತತ್ವದ ಪ್ರಸ್ತುತತೆಯನ್ನು ಒತ್ತಿ ಹೇಳಿದವು.

ತೆರಿಗೆ ಪಾವತಿ ಮೂಲಕ ಆರ್ಥಿಕ ಸದೃಢತೆಯತ್ತ ಕೊಂಡೊಯ್ಯುವ ಚಿತ್ರ
ಆದಾಯ ತೆರಿಗೆ ಇಲಾಖೆಯ ಸ್ತಬ್ದ ಚಿತ್ರ ದೇಶದ ಎಲ್ಲ ವಲಯಗಳ ನಾಗರಿಕರು ತೆರಿಗೆ ಪಾವತಿಸುವ ಮೂಲಕ ದೇಶವನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ಯಬೇಕೆಂಬ ಸಂದೇಶ ರವಾನಿಸಿತು.

ಭಯೋತ್ಪಾದಕರನ್ನು ಸದೆ ಬಡಿಯುವ ಚಿತ್ರ
ರಾಷ್ಟ್ರೀಯ ಸುರಕ್ಷಾ ಪಡೆಯ ಸ್ತಬ್ಧ ಚಿತ್ರವು ಎನ್ ಎಸ್ ಜಿ ಕಮಾಂಡೋಗಳು ದೇಶದ ವಿರುದ್ಧ ಹುನ್ನಾರ ನಡೆಸಿದ್ದ ಭಯೋತ್ಪಾದಕರನ್ನು ಸದೆ ಬಡೆಯುವ ದೃಶ್ಯವನ್ನು ಮನಮುಟ್ಟುವಂತೆ ಚಿತ್ರಿಸಿತ್ತು.

ವಿದೇಶಾಂಗ ವ್ಯವಹಾರಗಳ ಇಲಾಖೆ ರೂಪಿಸಿದ ಚಿತ್ರ
ವಿದೇಶಾಂಗ ವ್ಯವಹಾರಗಳ ಇಲಾಖೆ ನಿರೂಪಿಸಿದ್ದ ಏಷಿಯನ್ (ASEAN) ರಾಷ್ಟ್ರಗಳ ನಾಗರಿಕರ ಪ್ರತಿನಿಧಿತ್ವವನ್ನು ವೇಷಭೂಷಣಗಳ ಮೂಲಕ ಕಲಾವಿದರು ಪ್ರದರ್ಶಿಸಿದ್ದುದು ಗಮನ ಸೆಳೆಯಿತು.

ಶತೃಗಳ ವಿರುದ್ಧ ಹೋರಾಡಿದ ಶಿವಾಜಿ ಮಹಾರಾಜ್ ಸ್ತಬ್ಧಚಿತ್ರ
ಮಹಾರಾಷ್ಟ್ರದ ಚಕ್ರಚರ್ತಿ ಶಿವಾಜಿ ಮಹಾರಾಜ್ ಶತೃಗಳ ವಿರುದ್ಧ ಹೋರಾಡಿದ ವೀರರಸದ ದೃಶ್ಯ ಸ್ತಬ್ದಚಿತ್ರದ ಮೂಲಕ ಮೂಡಿಬಂತು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications