ಐಸಿಎಸ್‌ಇ ಫಲಿತಾಂಶ ಪ್ರಕಟ: ಮುಂಬೈನ ಸ್ವಯಂ ದಾಸ್ ಟಾಪರ್
ನವದೆಹಲಿ, ಮೇ 14: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ತನ್ನ 10ನೇ ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ.
ಐಸಿಎಸ್‌ಇ ಫಲಿತಾಂಶ ಶೇ.98.5ರಷ್ಟು ಆಗಿದ್ದರೆ ಐಎಸ್‌ಸಿ ಪರೀಕ್ಷೆ ಫಲಿತಾಂಶ ಶೇ.96.21ರಷ್ಟು ದಾಖಲಾಗಿದೆ. ಮುಂಬೈನ ಸ್ವಯಂ ದಾಸ್ ಶೇ.99.4ರಷ್ಟು ಅಂಕಗಳೊಂದಿಗೆ ಸಿಎಸ್‌ಇ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಐಎಸ್‌ಸಿ ಪರೀಕ್ಷೆಯಲ್ಲಿ 99.5ರಷ್ಟು ಅಂಕಗಳನ್ನು ಏಳು ವಿದ್ಯಾರ್ಥಿಗಳು ಗಳಿಸಿ, ಏಳೂ ಜನ ಮೊದಲ ಸ್ಥಾನದಲ್ಲಿದ್ದಾರೆ.

ಈ ವರ್ಷ ಫೆಬ್ರವರಿ 26ರಿಂದ ಸಿಎಸ್‌ಇ ಹಾಗೂ ಏಪ್ರಿಲ್ 12ರಿಂದ ಐಎಸ್‌ಸಿ ಪರೀಕ್ಷೆಗಳು ನಡೆದಿದ್ದವು. ಐಸಿಎಸ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು 97.63ರಷ್ಟು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದರೆ, ಶೇ.94.96ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸಿಐಎಸ್‌ಇ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಶೇ.98.95ರಷ್ಟು ಹಾಗೂ ವಿದ್ಯಾರ್ಥಿಗಳು 98.15ರಷ್ಟು ಪಾಸಾಗಿದ್ದಾರೆ.












Click it and Unblock the Notifications