ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ

By ಅನುಷಾ ರವಿ
|
Google Oneindia Kannada News

ನವದೆಹಲಿ, ಜೂನ್ 2: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತು ಉಳಿಸಿಕೊಂಡಿದ್ದಾರೆ. ಪಾಕಿಸ್ತಾನದ ಎರಡೂವರೆ ತಿಂಗಳ ಮಗುವೊಂದರ ಚಿಕಿತ್ಸೆ ಸಲುವಾಗಿ ಭಾರತದ ವೈದ್ಯಕೀಯ ವೀಸಾ ಒದಗಿಸುವುದಾಗಿ ನೀಡಿದ್ದ ಮಾತಿನ ಪ್ರಕಾರ ಆ ಕುಟುಂಬಕ್ಕೆ ವೀಸಾ ದೊರಕಿಸಿ ಕೊಟ್ಟಿದ್ದಾರೆ.

ನನ್ನ ಮಗುವಿನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅದರ ಚಿಕಿತ್ಸೆಗೆ ಭಾರತಕ್ಕೆ ಬರಬೇಕಿದೆ. ನಮಗೆ ವೀಸಾ ದೊರಕಿಸಿ ಕೊಡಿ ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬರು ಟ್ವಿಟ್ಟರ್ ಮೂಲಕ ಕೇಳಿಕೊಂಡಿದ್ದರು. ಇದೀಗ ಆ ಮಗುವಿನ ಕುಟುಂಬಕ್ಕೆ ನಾಲ್ಕು ತಿಂಗಳ ವೈದ್ಯಕೀಯ ವೀಸಾ ಕೊಡಲಾಗಿದೆ.[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]

Sushma Swaraj

ಲಾಹೋರ್ ನಲ್ಲಿ ಎಂಜಿನಿಯರ್ ಅಗಿರುವ ಕನ್ವಲ್ ಸಿದ್ದಿಕ್ ಅವರು ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದರು. ನನ್ನ ಎರಡೂವರೆ ತಿಂಗಳ ಮಗು ಹೃದಯ ಸಮಸ್ಯೆಯಿಂದ ಬಳಲುತ್ತಿದೆ. ಅದಕ್ಕೆ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು. ಎರಡೂ ದೇಶದ ಜನರೂ ಆ ಟ್ವೀಟ್ ವೈರಲ್ ಆಗುವಂತೆ ಮಾಡಿದ್ದರು.[ಪಾಕಿಸ್ತಾನಕ್ಕೆ ಹೋಗುವುದು ಸರಳ, ವಾಪಸ್ ಬರುವುದು ಕಷ್ಟ : ಉಜ್ಮಾ]

ಸನ್ನಿವೇಶದ ಗಾಂಬೀರ್ಯ ಅರ್ಥ ಮಾಡಿಕೊಂಡ ಸಚಿವೆ ಸುಷ್ಮಾ ಸ್ವರಾಜ್, ಆ ಮಗುವಿನ ತಂದೆಗೆ ವೈದ್ಯಕೀಯ ವೀಸಾ ದೊರಕಿಸುವ ಮಾತು ನೀಡಿದರು. ಆ ಮಗವಿಗೆ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡುತ್ತೇನೆ ಎಂದಿದ್ದರು. ಆ ಮಗುವಿವ ತಂದೆಯ ನೆರವಿಗೆ ಬಂದ ಎಲ್ಲರಿಗೂ ಕೃತಜ್ಞತೆ ಹೇಳಿದ್ದಾರೆ.

ಮೇ ಮೂವತ್ತೊಂದರಂದು ಭಾರತೀಯ ಹೈ ಕಮಿಷನ್ ಗೆ ಭೇಟಿ ನೀಡಿ, ವೈದ್ಯಕೀಯ ವೀಸಾ ಕೊಡಲಾಗುವುದು ಎಂದು ಆ ಪಾಕಿಸ್ತಾನದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅದರಂತೆ ಆ ಕುಟುಂಬಕ್ಕೆ ಭಾರತದ ವೀಸಾ ದೊರೆತಿದ್ದು, ಮಗುವಿಗೆ ಚಿಕಿತ್ಸೆ ಸಿಗಲಿದೆ.

English summary
A two and a half-month-old infant from Pakistan will get a chance at life thanks to Sushma Swaraj who kept up her promise of medical visa for the family. Following Sushma Swaraj's assurance on a tweet by a Pakistani man over his son's health condition, the external affairs ministry has granted four-month medical visa to the infant's family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X