ಮಾನಸ ಸರೋವರ ಯಾತ್ರಿಕರಿಗೆ ಸುಷ್ಮಾ ಶುಭ ಹಾರೈಕೆ
ನವದೆಹಲಿ, ಜೂ.15: ಚೀನಾ ದೇಶದ ಸಹಕಾರದಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊಸ ಮಾರ್ಗ ತೆರೆದುಕೊಂಡಿದೆ. ನಾಥುಲಾ ಪಾಸ್ ಮಾರ್ಗವಾಗಿ ಭಾರತದ ಭಕ್ತಾದಿಗಳು ಪವಿತ್ರ ತಾಣವನ್ನು ತಲುಪಬಹುದಾಗಿದೆ. ಮಂಗಳವಾರ ಯಾತ್ರಿಗಳ ಮೊದಲ ತಂಡಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಭ ಹಾರೈಸಿದರು.
ಐದು ದಿನಗಳ ಹಿಂದೆ ಟಿಬೆಟ್, ಉತ್ತರಾಖಂಡ್ ಲಿಪುಲೇಖ್ ಮಾರ್ಗದಲ್ಲಿ ತೆರಳುವ ಮೊದಲ ತಂಡಕ್ಕೆ ಸುಷ್ಮಾ ಅವರು ಇದೇ ರೀತಿ ಶುಭ ಹಾರೈಸಿ, ಹರ ಹರ ಮಹಾದೇವ್ ಎಂದಿದ್ದರು.
ಚೀನಾ ಆಕ್ರಮಿತ ಟಿಬೇಟ್ ಭಾಗದಲ್ಲಿರುವ ಕೈಲಾಸ ಪರ್ವತವನ್ನು ಪರಿಕ್ರಮ ಮಾಡಲು ಯಾತ್ರಾರ್ಥಿಗಳು ಉತ್ತರ ಖಂಡದ ಲಿಪ್‌ಲೇಖ್ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಇದು ದುರ್ಗಮ ಹಾದಿಯಾಗಿದ್ದು, ಅನೇಕ ಕಡೆ ಯಾತ್ರಾರ್ಥಿಗಳು ಹಲವು ಕಿ.ಮೀ. ಚಾರಣ ನಡೆಸಬೇಕಿದೆ. ಹಾಗಾಗಿ ವಯೋವೃದ್ಧರು ಈ ಹಾದಿಯಲ್ಲಿ ಸಾಗಲು ಸಾಕಷ್ಟು ಪ್ರಯಾಸ ಪಡಬೇಕಿದೆ.
People to people contact is important aspect of diplomacy, esp in religious tourism(KailashMansarovar): Sushma Swaraj pic.twitter.com/T66LThSzZr
— ANI (@ANI_news) June 16, 2015 ಆದರೆ, ಈಗ ಚೀನಾ-ಭಾರತ ನಡುವಿನ ಒಪ್ಪಂದದಿಂದಾಗಿ ಸಿಕ್ಕಿಂನ ನಾಥುಲಾ ಪಾಸ್ ಮೂಲಕ ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರಕ್ಕೆ ತೆರಳಬಹುದು. ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮಾರ್ಗವೂ ಬಳಕೆಯಲ್ಲಿರಲಿದೆ. ಜೊತೆಗೆ ನಾಥುಲಾ ಪಾಸ್ ಮಾರ್ಗವೂ ಯಾತ್ರಿಗಳಿಗೆ ಲಭ್ಯವಾಗಲಿದೆ.
surely those who are going for Kailash Mansarovar yatra will be thanking Chinese govt in their minds for making yatra possible:Sushma Swaraj
— ANI (@ANI_news) June 16, 2015 ಸಿಕ್ಕಿಂ ಮಾರ್ಗದಲ್ಲಿ ಹೋಗ ಬಯಸುವ ಯಾತ್ರಿಗಳು ಗ್ಯಾಂಗ್ ಟಕ್ ನಲ್ಲಿ ಎರಡು ದಿನ ತಂಗುವುದು ಕಡ್ಡಾಯಗೊಳಿಸಲಾಗಿದೆ. ನಂತರ ಶೇರಾಥಾಂಗ್ ನಲ್ಲಿ ಮುಂದಿನೆ ನೆಲೆ ಕಾಣಬಹುದಾಗಿದೆ. ಇಲ್ಲದಿದ್ದರೆ ಶಿಗಾತ್ಸೆ ಮೂಲಕ ಕೈಲಾಸ ಮಾನಸ ಸರೋವರ ತಲುಪಬಹುದಾಗಿದೆ ಎಂದು ಸಿಕ್ಕಿಂ ಪ್ರವಾಸೋದ್ಯಮ ಇಲಾಖೆ ಹೇಳಿದೆ.
We will make sure that old people will also be able to take sight of Lord Shiva without facing prob: Sushma Swaraj
— ANI (@ANI_news) June 16, 2015 ಮೊದಲ ತಂಡ ಜೂನ್ 22ರಂದು ಚೀನಾ ಪ್ರವೇಶಿಸಲಿದೆ. ಈ ವರ್ಷ ಒಟ್ಟು 1,330 ಜನರು ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದಾರೆ. 1,660 ಮಂದಿಗೆ ಅನುಮತಿ ನೀಡಲಾಗಿತ್ತು. ಈ ಪೈಕಿ 1080 ಜನರು ಉತ್ತರಾಖಂಡ ಮಾರ್ಗದಿಂದ (60 ಜನರ ತಂಡದಂತೆ 18 ಬ್ಯಾಚ್) ಹಾಗೂ 250 ಜನರು ಸಿಕ್ಕಿಂ ರಾಜ್ಯದ ನಾಥು-ಲಾ ಮಾರ್ಗದಿಂದ (ತಲಾ 50 ಜನರ ಐದು ತಂಡಗಳು) ತೆರಳಲಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications