ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಪ್ಯಾಟ್ ಪ್ರಮಾಣೀಕರಣ: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

|
Google Oneindia Kannada News

ನವದೆಹಲಿ, ಮೇ 7: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳೊಂದಿಗೆ (ಇವಿಎಂ) ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂಬ 21 ವಿರೋಧ ಪಕ್ಷಗಳ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿನ ಒಂದರಿಂದ ಐದು ಮತಗಟ್ಟೆಗಳಿಂದ ಇವಿಎಂ ಜತೆ ವಿವಿಪ್ಯಾಟ್ ಚೀಟಿಗಳನ್ನು ಹೊಂದಿಸುವ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಏಪ್ರಿಲ್ 8ರ ತನ್ನ ಆದೇಶವನ್ನು ಮರುಪರಿಶೀಲನೆಗೆ ಒಳಪಡಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಒಳಗೊಂಡ ನ್ಯಾಯಪೀಠ ನಿರಾಕರಿಸಿತು.

ಮತಯಂತ್ರ ದೋಷ: ಸುಪ್ರೀಂ ಮೊರೆ ಹೋಗಲಿರುವ ವಿಪಕ್ಷಗಳು ಮತಯಂತ್ರ ದೋಷ: ಸುಪ್ರೀಂ ಮೊರೆ ಹೋಗಲಿರುವ ವಿಪಕ್ಷಗಳು

'ನಮ್ಮ ಆದೇಶವನ್ನು ಮಾರ್ಪಾಡು ಮಾಡಲು ನಾವು ಬಯಸುವುದಿಲ್ಲ' ಎಂದು ನ್ಯಾಯಪೀಠ ಹೇಳಿತು.

Supreme Court Rejects 21 opposition parties petition seeking increase VVPAT verification

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ವಿವಿಪ್ಯಾಟ್ ಅನ್ನು ಇವಿಎಂನೊಂದಿಗೆ ಪ್ರಮಾಣೀಕರಿಸುವ ಪ್ರಮಾಣವನ್ನು ಕನಿಷ್ಠ ಶೇ 25ಕ್ಕೆ ಏರಿಸಬೇಕೆಂದು ಕೋರಿದರು. ಈ ಪರಿಶೀಲನೆಯ ಪ್ರಮಾಣವನ್ನು 0.44ರಿಂದ ಕೇವಲ ಶೇ 2ಕ್ಕೆ ಏರಿಸಿರುವ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿದರು. ಈ ಆದೇಶದಿಂದ ಯಾವುದೇ ಮಹತ್ವದ ವ್ಯತ್ಯಾಸ ಉಂಟಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು.

ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ

ಸುಪ್ರೀಂಕೋರ್ಟ್ ಆದೇಶದ ಬಳಿಕ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ನ್ಯಾಯಾಲಯದ ಆದೇಶವನ್ನು ಅರ್ಜಿದಾರರು ಗೌರವಿಸುತ್ತೇವೆ. ಚುನಾವಣೆಯಲ್ಲಿನ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿತ್ತು ಎಂದರು.

21 ವಿಪಕ್ಷಗಳ ಅರ್ಜಿಗೆ ಮನ್ನಣೆ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್21 ವಿಪಕ್ಷಗಳ ಅರ್ಜಿಗೆ ಮನ್ನಣೆ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಲೋಪವುಳ್ಳ ಇವಿಎಂಗಳು ಕಂಡುಬಂದ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಇವಿಎಂನಲ್ಲಿ ಒಂದು ಪಕ್ಷಕ್ಕೆ ಮತ ಹಾಕಿದರೆ, ಬೇರೊಂದು ಪಕ್ಷಕ್ಕೆ ಅದು ದಾಖಲಾಗುತ್ತಿತ್ತು ಎಂದು ಆರೋಪಿಸಿದ್ದರು.

ಅರ್ಜಿದಾರರ ಬೇಡಿಕೆಯನ್ನು ನ್ಯಾಯಾಲಯ ಒಪ್ಪಿಕೊಂಡರೆ ಫಲಿತಾಂಶ ನೀಡಲು ಇನ್ನೂ ಆರು ದಿನಗಳ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿತ್ತು.

English summary
Lok Sabha elections 2019: The Supreme Court has rejected the petition by 21 opposition parties seeking to increase VVPAT slips with EVM at least to 50 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X