Get Updates
Get notified of breaking news, exclusive insights, and must-see stories!

ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪಿತ್ತ ಜಡ್ಜ್ ಯಾದವರಿಗೆ ಭದ್ರತೆ ಇಲ್ಲ!

ನವದೆಹಲಿ, ನ.02: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ ಜಡ್ಜ್ ಎಸ್. ಕೆ ಯಾದವ್ ಅವರಿಗೆ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ತಮಗೆ ಭದ್ರತೆ ಒದಗಿಸುವಂತೆ ಜಡ್ಜ್ ಯಾದವ್ ಕೋರಿದ್ದರು. ಆದರೆ, ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.

ನ್ಯಾ ಎಸ್. ಕೆ ಯಾದವ್ (60) ಅವರು 28 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದರು. ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಶೀ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದರು. ಲಕ್ನೋದ ವಿಶೇಷ ನ್ಯಾಯಾಲಯದಿಂದ ಸೆ.30ರಂದು ಎಲ್ಲರಿಗೂ ಮುಕ್ತಿ ಸಿಕ್ಕಿತ್ತು.

ಆದರೆ, 2019ರಲ್ಲೇ ನಿವೃತ್ತಿ ಹೊಂದಬೇಕಿದ್ದ ಜಡ್ಜ್ ಯಾದವ್ ಅವರು 2015ರಿಂದ ಈ ಕೇಸಿನ ವಿಚಾರಣೆ ಆಲಿಸಿ, 2020ರಲ್ಲಿ ತೀರ್ಪು ನೀಡಿದ್ದರು. ಈಗ ಭದ್ರತೆ ಮುಂದುವರೆಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಲಾಗಿತ್ತು. ಆದರೆ, ಸೆ.30ರಂದು ಬಂದಿರುವ ಪತ್ರದ ಅನ್ವಯ ಭದ್ರತೆ ಮುಂದುವರೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

Supreme Court Refuses Security To former judge SK Yadav Who Delivered Babri Verdict

ಸೆ.1ರಿಂದ ಖಾಸಗಿ ಭದ್ರತಾ ವ್ಯವಸ್ಥೆಯಲ್ಲೇ ಕೋರ್ಟ್ ಆವರಣಕ್ಕೆ ಬಂದು ಸೆ.30ರ ತನಕ ವಿಚಾರಣೆ, ತೀರ್ಪು ಎಲ್ಲವನ್ನು ನ್ಯಾ. ಯಾದವ್ ನೀಡಿದ್ದರು. ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್ ಎನ್ ಶ್ರೀವಾಸ್ತವ, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆ ನಡೆಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ.ಯಾದವ್‌ ಸೆಪ್ಟೆಂಬರ್‌ 16ರಂದೇ ನಿರ್ದೇಶನ ನೀಡಿದ್ದರು. ಆದರೆ, ವಯಸ್ಸು, ಕೊರೊನಾವೈರಸ್ ಹಿನ್ನೆಲೆಯಲ್ಲಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ಕೆಲವು ನಾಯಕರು ವಿನಾಯಿತಿ ಪಡೆದುಕೊಂಡಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಇದುವರೆಗೆ ಹಾಜರುಪಡಿಸಲಾಗಿತ್ತು.

28 ವರ್ಷದಷ್ಟು ಹಳೆಯ ಪ್ರಕರಣವಾದ ಬಾಬ್ರಿ ಮಸೀದಿ ಧ್ವಂಸದ ವಾದ-ಪ್ರತಿವಾದ 2020 ಸೆಪ್ಟೆಂಬರ್ 1ರಂದು ಮುಕ್ತಾಯಗೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ತೀರ್ಪು ಪ್ರಕಟವಾಗಬೇಕಿತ್ತು. ಬದಲಿಗೆ ಸೆಪ್ಟೆಂಬರ್ 30ರಂದು ತೀರ್ಪು ಹೊರ ಬಂದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+