• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದು ಸುಪ್ರೀಂ ಕೋರ್ಟ್ ನೀಡಿದ 3 ಐತಿಹಾಸಿಕ ತೀರ್ಪುಗಳ ಸುತ್ತ...

|
   ಸುಪ್ರೀಂ ಕೋರ್ಟ್ ನಿರ್ಧಾರದಿಂದ ಮೋದಿ ಸರ್ಕಾರಕ್ಕೆ ಶಾಕ್ | Oneindia Kannada

   ನವದೆಹಲಿ, ಸೆಪ್ಟೆಂಬರ್ 26: ಸುಪ್ರೀಂ ಕೋರ್ಟ್ ನಲ್ಲಿ ಇಂದು ಬಿಡುವಿಲ್ಲದ ಚಟುವಟಿಕೆ! ಒಂದರ ಹಿಂದೊಂದರಂತೆ ಮಹತ್ವದ ಮೂರು ತೀರ್ಪುಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೀಡಿದೆ.

   ಅಕ್ಟೋಬರ್ 2 ರಂದು ನಿವೃತ್ತರಾಗುತ್ತಿರುವ ಸಿಜೆಐ ದೀಪಕ್ ಮಿಶ್ರಾ ಅವರು, ತಮ್ಮ ಸೇವಾವಧಿಯ ಕಾಲದಲ್ಲಿ ನೀಡಿದ ಮಹತ್ವದ ತೀರ್ಪುಗಳಲ್ಲಿ ಇಂದಿನ ಮೂರೂ ತೀರ್ಪುಗಳೂ ಸೇರಿವೆ.

   ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು

   ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣ, ಆಧಾರ್ ಸಾಂವಿಧಾನಿಕ ಮಾನ್ಯತೆಗೆ ಸಂಬಂಧಿಸಿದ ಪ್ರಕರಣ ಮತ್ತು ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆಗಳ ತೀರ್ಪು ಇಂದು ಹೊರಬಿದ್ದಿದೆ.

   ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

   ಈ ಎಲ್ಲಾ ಮಹತ್ವದ ಪ್ರಕರಣಗಳಲ್ಲಿ ಸುಪ್ರೀಂ ನೀಡಿದ ತೀರ್ಪು ಮತ್ತು ಅವುಗಳ ಮುಖ್ಯಾಂಶಗಳು ಇಲ್ಲಿವೆ.

   SC/ST ಬಡ್ತಿ ಮೀಸಲಾತಿ ಅಗತ್ಯವಿಲ್ಲ

   SC/ST ಬಡ್ತಿ ಮೀಸಲಾತಿ ಅಗತ್ಯವಿಲ್ಲ

   * ಬಡ್ತಿ ನೀಡುವಾಗ ಮೀಸಲಾತಿ ಅಗತ್ಯವಿಲ್ಲ

   * ಪ್ರಕರಣವನ್ನು ಸಪ್ತ ಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲು ನಿರಾಕರಣೆ

   * SC/ST ಮತ್ತು OBC ಉದ್ಯೋಗಿಗಳ ದತ್ತಾಂಶ ಸಂಗ್ರಹಿಸುವ ಅಗತ್ಯವಿಲ್ಲ

   * ಬಡ್ತಿ ಮೀಸಲಾತಿ ಪ್ರಮಾಣ ನಿರ್ಧರಿಸುವುದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು

   ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳು: ಸಿಜೆಐ ದೀಪಕ್ ಮಿಶ್ರಾ, ನ್ಯಾ.ಕುರಿಯನ್ ಜೋಸೆಫ್, ನ್ಯಾ.ಆರ್ ಎಫ್ ನಾರಿಮನ್, ಎಸ್ ಕೆ ಕೌಲ್ ಮತ್ತು ಇಂದು ಮಲ್ಹೋತ್ರಾ

   ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ

   ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ

   * ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

   * ಸರ್ಕಾರದ ಎಲ್ಲಾ ಯೋಜನೆಗಳಿಗೂ ಆಧಾರ್ ಕಡ್ಡಾಯ

   * ಪ್ಯಾನ್ ಕಾರ್ಡ್ ಜೊತೆ ಆಧಾರ್ ಜೋಡಣೆಯೂ ಕಡ್ಡಾಯ

   * ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಆಧಾರ್ ಕಡ್ಡಾಯ

   * ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ.

   * ಶಾಲಾ, ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ.

   * ಖಾಸಗೀ ಕಂಪನಿಗಳಿಗೆ ಆಧಾರ್ ಕಡ್ಡಾಯವಲ್ಲ.

   * ಮೊಬೈಲ್ ಸಿಮ್ ಕೊಳ್ಳುವುದಕ್ಕೆ ಆಧಾರ್ ಕಡ್ಡಾಯವಲ್ಲ.

   * ಮೊಬೈಲ್ ನಂಬರ್ ಜೊತೆ ಆಧಾರ್ ಜೋಡಣೆ ಕಡ್ಡಾಯವಲ್ಲ.

   * ಯುಜಿಸಿ, ನೀಟ್ ಮತ್ತು ಸಿಬಿಎಸ್ ಇ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ

   ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳು: ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್

   ಸುಪ್ರೀಂ ತೀರ್ಪಿನ ನಂತರ ಯಾವ್ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ?

   ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರಕ್ಕೆ ಒಪ್ಪಿಗೆ

   ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರಕ್ಕೆ ಒಪ್ಪಿಗೆ

   * ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರಪ್ರಸಾರಕ್ಕೆ ಅವಕಾಶ

   * ನ್ಯಾಯಾಂಗದಲ್ಲಿ ಪಾರದರ್ಶಕತೆ ನೀಡುವ ದೃಷ್ಟಿಯಿಂದ ಈ ನಿರ್ಧಾರ

   * ಮಹತ್ವದ ತೀರ್ಪುಗಳ ನೇರ ಪ್ರಸಾರಕ್ಕೆ ಸುಪ್ರೀಂ ಒಪ್ಪಿಗೆ

   ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳು: ಸಿಜೆಐ ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವಿಕರ್, ನ್ಯಾ.ಡಿ ವೈ ಚಂದ್ರಚೂಡ್

   ಗೊಗೊಯ್ ನೇಮಕಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

   ಗೊಗೊಯ್ ನೇಮಕಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

   ಇದೇ ಅಕ್ಟೋಬರ್ 2 ರಂದು ಮುಖ್ಯ ನ್ಯಾಯ ಮೂರ್ತಿ ಸ್ಥಾನದಿಂದ ನಿವೃತ್ತರಾಗಲಿರುವ ನ್ಯಾ.ದೀಪಕ್ ಮಿಶ್ರಾ ಅವರ ನಂತರ, ಸಿಜೆಐ ಆಗಿ ರಂಜನ್ ಗೊಗೊಯ್ ಅವರನ್ನು ನೇಮಿಸುತ್ತಿರುವುದನ್ನು ಪ್ರಶ್ನಿಸಿ, ವಕೀಲ ಆರ್ ಪಿ ಲುಥಾರಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

   ಆಧಾರ್ ತೀರ್ಪು : ಅಳಿಯ ಅಲ್ಲ ಮಗಳ ಗಂಡ ಎಂದ ಟ್ವಿಟ್ಟಿಗರು

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Supreme court today pronounces its verdicts on 3 important cases. Aadhaar validity, reservation in SC ST promotion and Live streaming of Supreme Court proceedings are those cases.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more