• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಕಾ ಕೋಲಾ, ಥಮ್ಸ್ ಅಪ್ ನಿಷೇಧಿಸಿ ಎಂದವನಿಗೆ 5 ಲಕ್ಷ ದಂಡ: ಸುಪ್ರೀಂ

|

ದೆಹಲಿ, ಜೂನ್ 12: ಕೋಕಾ ಕೋಲಾ ಮತ್ತು ಥಮ್ಸ್ ಅಪ್ ತಂಪಾದ ಪಾನೀಯ ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾವರ್ಜಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.

   Indian stands 4th in the world in corona cases count | Oneindia Kannada

   ಕೋಕಾ ಕೋಲಾ ಮತ್ತು ಥಮ್ಸ್ ಅಪ್ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ, ಮಾರಾಟ ಮತ್ತು ಬಳಕೆ ನಿಷೇಧಿಸಿ ಎಂದು ಸಾಮಾಜಿಕ ಹೋರಾಟಗಾರ ಉಮೇದಿಶ್ ಪಿ ಚಾವ್ಲಾ ಮನವಿ ಸಲ್ಲಿಸಿದ್ದರು.

   ಲಾಕ್‌ಡೌನ್‌ ವೇಳೆ ಪೂರ್ತಿ ವೇತನ: ಮಾಲೀಕರ ವಿರುದ್ಧ ಕ್ರಮ ಇಲ್ಲ- ಸುಪ್ರೀಂಕೋರ್ಟ್

   ಈ ಅರ್ಜಿ ವಿಚಾರಣೆ ನಡೆಸಿದ್ದ ಡಿವೈ ಚಂದ್ರಚೂಡ್, ಹೇಮಂತ್‌ ಗುಪ್ತಾ, ಅಜಯ್ ರಸ್ತೋಗಿ ತ್ರಿ ಸದಸ್ಯ ಪೀಠ 'ಈ ಎರಡು ಕಂಪನಿಗಳನ್ನು ಮಾತ್ರ ಏಕೆ ನಿಷೇಧಿಸಬೇಕು'' ಎಂದು ಪ್ರಶ್ನಿಸಿತ್ತು.

   ಕೋಕಾ ಕೋಲಾ ಮತ್ತು ಥಮ್ಸ್ ಅಪ್ ನಿಷೇಧಿಸಲು ಪರಿಪೂರ್ಣವಾದ ಸಾಕ್ಷ್ಯ ಒದಗಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂಬ ಕಾರಣದಿಂದ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.

   ಆರ್ಟಿಕಲ್ 32ರ ಅಡಿ ಅವಕಾಶ ಇದೆ ಎಂಬ ಕಾರಣಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲದೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಲಾಗಿದೆ ಎಂದು ಎಚ್ಚರಿಸಿ, ಅರ್ಜಿದಾರನಿಗೆ 5 ಲಕ್ಷ ದಂಡ ವಿಧಿಸಿದೆ. ಒಂದು ತಿಂಗಳೊಳಗೆ ದಂಡ ಪಾವತಿಸಬೇಕೆಂದು ಸೂಚಿಸಿದೆ.

   English summary
   On Thursday, the Supreme Court has rejected a PIL filed by a social worker to put a ban on CocaCola and ThumbsUp stating that these beverages are detrimental to health.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X