ಸಹಮತದ ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪಿಗೆ ಗಣ್ಯರೇನಂತಾರೆ?
ನವದೆಹಲಿ, ಸೆಪ್ಟೆಂಬರ್ 06: ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟಿನ ಪಂಚಸದಸ್ಯಪೀಠ ಇಂದು ನೀಡಿದೆ.
ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377 ರ ಪ್ರಕಾರ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಈ ಅಪರಾಧಕ್ಕೆ 10 ವರ್ಷಗಳ ವರೆಗೆ ಶಿಕ್ಷೆಯನ್ನೂ ನೀಡಬಹುದಿತ್ತು. ಇದರಿಂದ ಸಲಿಂಗಿಗಳ ಹಕ್ಕಿಗೆ ಧಕ್ಕೆ ಬರುತ್ತದೆ ಎಂದು ದೂರಿ, ಸೆಕ್ಷನ್ 377 ಅನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆಯನ್ನು ಮೇ ತಿಂಗಳಿನಿಂದ ಜುಲೈ ವರೆಗೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಪಂಚಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ರೋಹಿಂಟನ್ ನಾರಿಮನ್, ನ್ಯಾ. ಎ.ಎಂ.ಖಾನ್ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ ಮತ್ತು ನ್ಯಾ.ಇಂದು ಮಲ್ಹೋತ್ರಾ ಇದ್ದರು.
ಈ ತೀರ್ಪಿನ ಕುರಿತು ಮುಖಂಡರು ಏನೆನ್ನುತ್ತಾರೆ ಕೇಳಿ.
| Array |
ಕರಣ್ ಜೋಹರ್
ಐತಿಹಾಸಿಕ ತೀರ್ಪು! ಇಂದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ಸಲಿಂಗಕಾಮವನ್ನು ಅಪರಾಧವಲ್ಲ ಎಂದಿರುವುದು ಮತ್ತು ಸೆಕ್ಷನ್ 377 ಅನ್ನು ರದ್ದು ಮಾಡಿದ್ದು ಮಾನವೀಯತೆ ಮತ್ತು ಸಮಾನ ಹಕ್ಕುಗಳ ಗೆಲುವು. ದೇಶ ಮತ್ತೆ ಆಮ್ಲಜನಕವನ್ನು ವಾಪಸ್ ಪಡೆದಿದೆ ಎಂದಿದ್ದಾರೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್.
| Array |
ಪ್ರಿಯಾಂಕಾ ಚತುರ್ವೇದಿ
ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಇದು. ಪ್ರೀತಿಯ ಅಡತಡೆಗಳು ನೆಲಕಚ್ಚಿವೆ. ಪ್ರೀತಿ ಎಂದಿಗೂ ಅಪರಾಧವಾಗುವುದಕ್ಕೆ ಸಾಧ್ಯವಿಲ್ಲ. ಲೈಂಗಿಕತೆಯ ಮೂಲಕ ಮನುಷ್ಯನ ಅಪರಾಧವನ್ನು ಅಳೆಯುವುದಕ್ಕಾಗುವುದಿಲ್ಲ. ಅತ್ಯುತ್ತಮ ತೀರ್ಪು ನೀಡಿ, ಮತ್ತೊಮ್ಮೆ ನಿಮ್ಮ ಮೇಲಿನ ಗೌರವ ಹೆಚ್ಚಿಸಿದ ಸುಪ್ರೀಂ ಕೋರ್ಟಿನ ಎಲ್ಲಾ ನ್ಯಾಯಧೀಶರಿಗೂ ಧನ್ಯವಾದಗಳು ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
| Array |
ರಂದೀಪ್ ಸಿಂಗ್ ಸುರ್ಜೇವಾಲಾ
"ಸೆಕ್ಷನ್ 377 ಮೇಲಿನ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಹಳೆಯ ವಸಾಹತುಶಾಹಿ ಕಾನೂನಿಗೆ ಬದಲು ಆಧುನಿಕತೆಗೆ ಅಗತ್ಯವಾದ ತೀರ್ಪು ಹೊರಬಂದಿದೆ. ಮೂಲಭೂತ ಹಕ್ಕನ್ನು ಕಸಿದು, ಲೈಂಗಿಕತೆಯನ್ನು ಅಪರಾಧವೆಂದಿದ್ದು ತಪ್ಪು. ಉದಾರ ಸಮಾಜಕ್ಕೆ ಮತ್ತು ಪ್ರಗತಿಪರ ಕಾಲದೆಡೆ ಮುನ್ನಡೆಯಲು ಇಂದೊಂದು ಮಹತ್ವದ ಹೆಜ್ಜೆ" ಎಂದಿದ್ದಾರೆ ಕಾಮಗ್ರೆಸ್ ಮುಖಂಡ ರಂದೀಪ್ ಸಿಂಗ್ ಸುರ್ಜೇವಾಲಾ.
|
ಶಶಿ ತರೂರ್
"ಸುಪ್ರೀಂಕೋರ್ಟ್ ನಿರ್ಧಾರ ಶ್ಲಾಘನೀಯ. ವಯಸ್ಕರ ಸಹಮತದ ಲೈಂಗಿಕತೆ ಖಾಸಗೀ ವಿಚಾರಕ್ಕೆ ಸಂಬಂಧಿಸಿದ್ದು. ನಾವಿ ಇರುವ ದೇಶದಲ್ಲಿ ಸರ್ಕಾರವು ಲಿಂಗಗಳ ಆಧಾರದ ಮೇಲೆ ವ್ಯಕ್ತಿಯ ವೈಯಕ್ತಿಕ ಬದುಕಿನಲ್ಲಿ ತಲೆಹಾಕುತ್ತಿದೆ. ಆದರೆ ಸುಪ್ರೀಂ ಕೋರ್ಟ್ ಮಾತ್ರ ಈ ಎಲ್ಲವನ್ನೂ ಮೀರಿ ತೀರ್ಪು ನೀಡಿದೆ" ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಶಶಿ ತರೂರ್.
|
ಬರ್ಖಾ ದತ್ತ
ದಶಕಗಳ ಹೋರಾಟಕ್ಕೆ ಜಯ ಲಭಿಸಿದೆ. ಸಲಿಂಗಿಗಳಿಗೆ ಅಭಿನಂದನೆಗಳು. ಭಾರತವನ್ನು ಉತ್ತಮ ಪ್ರಜಾಪ್ರಭುತ್ವವನ್ನಾಗಿ ಮಾಡಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಇನ್ನಿತರ ನ್ಯಾಯಮೂರ್ತಿಗಳಿಗೆ ಅಭಿನಂದನೆಗಳು. ಸೆಕ್ಷನ್ 377 ರದ್ದತಿಯು ಪ್ರೀತಿಯ ಸ್ವಾತಂತ್ರ್ಯ, ಸ್ವಾತಂತ್ರ್ಯದ ಹಕ್ಕು ಮತ್ತು ಸಮಾನತೆಯನ್ನು ತೋರಿಸುತ್ತದೆ ಎಂದಿದ್ದಾರೆ ಹಿರಿಯ ಪತ್ರಕರ್ತೆ ಬರ್ಖಾದತ್.












Click it and Unblock the Notifications