ಮೇ 28ರಂದು ತ್ವರಿತಗತಿ ಕೋರ್ಟಿನಲ್ಲಿ ಸುನಂದಾ ಪುಷ್ಕರ್ ಕೊಲೆ ಪ್ರಕರಣ

ನವದೆಹಲಿ, ಮೇ 24: ಮಾಜಿ ಕೇಂದ್ರ ಸಚಿವ, ಲೋಕಸಭಾ ಸದಸ್ಯ ಶಶಿ ತರೂರ್ ಅವರು ಮತ್ತೊಮ್ಮೆ ಕೋರ್ಟಿನತ್ತ ಮುಖ ಮೂಡುವಂತಾಗಿದೆ. ಮೇ 28ರಂದು ಶಶಿ ಅವರ ಪತ್ನಿ ಸುನಂದಾ ಪುಷ್ಕರ್ ಕೇಸ್ ಮತ್ತೊಮ್ಮೆ ವಿಚಾರಣೆಗೆ ಬರಲಿದೆ.

ಮೇಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಅವರು 2014ರ ಈ ಪ್ರಕರಣವನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರಿಗೆ ವರ್ಗಾಯಿಸಿದ್ದಾರೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಹೆಚ್ಚಾಗಿ ನಿಭಾಯಿಸುವ ಮ್ಯಾಜಿಸ್ಟ್ರೇಟ್ ಸಮರ್ ಅವರ ಮುಂದೆ ಈ ಪ್ರಕರಣ ಮೇ 28ರಂದು ಬರಲಿದೆ.

ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಶೇಷ ಕೋರ್ಟ್ ಗಳಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Sunanda Pushkar death: Special fast track court to hear case on 28 May

ಮೇ 14ರಂದು ದೆಹಲಿ ಪೊಲೀಸರು ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ಹಾಗೂ 498ಎ ಅನ್ವಯ ಚಾರ್ಜ್ ಶೀಟ್ ಹಾಕಿದ್ದು, ಅಪರಾಧ ಸಾಬೀತಾದರೆ 10 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

ದಕ್ಷಿಣ ದೆಹಲಿಯ ಲೀಲಾ ಹೋಟೆಲ್ ನಲ್ಲಿ 2014ರ ಜನವರಿ 17ರಂದು 51 ವರ್ಷ ವಯಸ್ಸಿನ ಪುಷ್ಕರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+